ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು :ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಶ್ರೀಗಂಧ ಬೆಳೆಗೆ ಶೇಕಡಾ 75 ರ ಸಹಾಯಧನ ಲಭ್ಯವಿದ್ದು,ಕೃಷಿಕರು ಉತ್ತಮ ತಳಿಯ ಸಸಿಗಳನ್ನು ಖರೀದಿಸಿ ಪ್ರತೀ ಹೆಕ್ಟೇರಿಗೆ 400 ಗಿಡಗಳಂತೆ ಸಸಿಗಳನ್ನು ನೆಟ್ಟು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿ 2010-11 ನೇ ಸಾಲಿಗೆ 15 ಹೆಕ್ಟೇರುಗಳಿಗೆ ಗುರಿ ನಿಗದಿಪಡಿಸಿದ್ದು,ಫಲಾನುಭವಿಗಳಿಂದ ಅರ್ಜಿಯನ್ನು ಪಡೆಯಲು ಅವಕಾಶವಿರುತ್ತದೆ. ಕೃಷಿಕರು ನಿಗಧಿತ ನಮೂನೆಯ ಅರ್ಜಿಯೊಂದಿಗೆ ಶ್ರೀಗಂಧ ನೆಟ್ಟ ಬಗ್ಗೆ ದಾಖಲೆಗಳನ್ನು ನೇರವಾಗಿ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಸಹಾಯಧನ ಪಡೆದುಕೊಳ್ಳಬಹುದಾಗಿದೆಯೆಂದು ತೋಟಗಾರಿಕಾ ಉಪನಿರ್ದೇಶಕರು ತಿಳಿಸಿರುತ್ತಾರೆ.

0 comments:

Post a Comment