ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ಬಿಸಿಯೂಟ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲು ಒಬ್ಬರು ಅಧಿಕಾರಿ ನೇತೃತ್ವದ ವ್ಯವಸ್ಥೆ ಮತ್ತು 3 ಹಂತಗಳಲ್ಲಿ ಸರಬರಾಜಾಗುವ ಅಕ್ಕಿ ಮತ್ತು ಬೇಳೆಯನ್ನು ಪರಿಶೀಲಿಸಲು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಿರಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಸೂಚನೆ ನೀಡಿದರು.ಈ ಸಂಬಂಧ ಅಕ್ಟೋಬರ್ 4ರಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಸಿ ಇ ಒ ಮತ್ತು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಚತೆಯಲ್ಲಿ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಮತ್ತು ತಾಲೂಕು ವೈದ್ಯಾಧಿಕಾರಿಗಳು, ವಿದ್ಯಾಂಗ ಉಪನಿರ್ದೇಶಕರು, ಉಪನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ಆಹಾರ ನಾಗರೀಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ಕರೆಯಲಾಗಿತ್ತು.
ಮುಂದಿನ ಒಂದು ವರ್ಷದೊಳಗೆ ಎಲ್ಲ ಶಾಲೆಗಳಿಗೆ ಫಿಲ್ಟರ್ ಮಾಡಿದ ಕುಡಿಯುವ ನೀರನ್ನು ಒದಗಿಸಲು ಕ್ರಮಕೈಗೊಂಡಿರುವುದಾಗಿ ಮಾಹಿತಿ ನೀಡಿದ ಸಿ ಇ ಒ ಅವರು, ಬಿಸಿಯೂಟ ಪ್ರಕ್ರಿಯೆ ಶುದ್ಧ ಹಾಗೂ ಸ್ವಚ್ಛವಾಗಿರಲು ಸೂಕ್ತ ಕ್ರಮಕೈಗೊಳ್ಳಲು ಅಕ್ಷರ ದಾಸೋಹ ಅಧಿಕಾರಿಗೆ ಸೂಚಿಸಿದರು. ಬಿಸಿಯೂಟಕ್ಕೆ ಪೂರೈಸುವ ಅಕ್ಕಿ ಮತ್ತು ಬೇಳೆಯನ್ನು 3 ಹಂತದಲ್ಲಿ ಪರಿಶೀಲಿಸಲು ಸೂಚಿಸಿದ ಸಿ ಇ ಒ ಅವರು, ಭಾರತ ಆಹಾರ ನಿಗಮದಿಂದ ಅಕ್ಕಿ ಮತ್ತು ಬೇಳೆ ಆಹಾರ ನಾಗರೀಕ ಸರಬರಾಜು ನಿಗಮ ನಿಯಮಿತಕ್ಕೆ ಪೂರೈಕೆಯಾಗುತ್ತದೆ. ಅಲ್ಲಿಂದ ಶಾಲೆಗಳಿಗೆ ಪೂರೈಸಲಾಗುತ್ತದೆ. ಶಿಕ್ಷಣ ಇಲಾಖೆಯಿಂದ ಈ ವ್ಯವಸ್ಥೆಯ ಉಸ್ತುವಾರಿಗೆಂದೇ ನೇಮಿಸಲ್ಪಟ್ಟ ಅಕ್ಷರ ದಾಸೋಹ ಅಧಿಕಾರಿ, ತಾಲೂಕು ಮಟ್ಟದಲ್ಲಿರುವ ಸಹಾಯಕ ನಿರ್ದೇಶಕರು ವ್ಯವಸ್ಥೆಯ ಲೋಪಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಇದರ ಜೊತೆಗೆ ಆಹಾರದ ಗುಣಮಟ್ಟ ಪರಿಶೀಲನೆ ಹೊಣೆಯನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ತಿಂಗಳಿಗೊಂದು ಬಾರಿ ಆರೋಗ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟ ವ್ಯವಸ್ಥೆ ಪರಿಶೀಲಿಸಲು ಸೂಚಿಸಿದರು. ಈ ಸಂಬಂಧ ಸುತ್ತೋಲೆಗೆ ಕಾಯದೆ ಸಭೆಯ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲು ಹೇಳಿದ ಸಿಇಒ ಅವರು, ಶೀಘ್ರವೇ ಸುತ್ತೋಲೆಯನ್ನು ಹೊರಡಿಸುವುದಾಗಿಯೂ ಹೇಳಿದರು. ಕಳಪೆ ಅಕ್ಕಿ, ಬೇಳೆ ಹಾಗೂ ಸರಬರಾಜಿನಲ್ಲಿ ವ್ಯತ್ಯಾಸವಾದರೆ ಆಹಾರ ನಾಗರೀಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಿ ಇ ಒ ಎಚ್ಚರಿಕೆ ನೀಡಿದರು. ಎನ್ ಆರ್ ಇ ಜಿ ಯಡಿ ಇಂಗು ಗುಂಡಿ, ಬಿಸಿಯೂಟದಿಂದಾಗುವ ತ್ಯಾಜ್ಯಗಳ ವಿಲೇವಾರಿ ಮಾಡಲು ಸೌಲಭ್ಯವಿದ್ದು ಇದರ ಸದ್ಬಳಕೆ ಮಾಡಬೇಕು. ಅಡುಗೆ ಕೋಣೆ, ಪಾತ್ರೆ ಪರಿಕರಗಳು, ಅಡುಗೆ ಮಾಡುವವರು ಶುಚಿಯಾಗಿರುವುದನ್ನು ನೋಡಿಕೊಳ್ಳಲು ಒಬ್ಬ ಶಿಕ್ಷಕರನ್ನು ನೇಮಿಸಬೇಕು. ಶಾಲಾ ಅಭಿವೃದ್ಧಿ ಸಮಿತಿ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅಪರ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

0 comments:

Post a Comment