ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಉಡುಪಿ : ಇಲ್ಲಿನ ಎಸ್ಪಿ ವಿಶೇಷ ಪತ್ತೆದಳ ದರೋಡೆ ಮಾಡಲು ಹೊಂಚಹಾಕುತ್ತಿದ್ದ ಕುಖ್ಯಾತ ಮೂವರು ದರೋಡೆಕೋರರನ್ನು ಗುರುವಾರ ಬೆಳಗಿನ ಜಾವ ಬಂಧಿಸಲು ಸಫಲವಾಗಿದೆ. ಬೆಂಗಳೂರಿನಿಂದ ನಾಲ್ಕು ದಿನದ ಹಿಂದೆ ಉಡುಪಿಗೆ ಬಂದು ದರೋಡೆ ಸಂಚು ರೂಪಿಸುತ್ತಿದ್ದ ಬೆಂಗಳೂರು ರಾಜಾಜಿನಗರ ನಿವಾಸಿರಾಮಚಂದ್ರ ಎಂಬವರ ಪುತ್ರ ಭರತ (22),ಬೆಂಗಳೂರು ಆರ್.ಸಿ.ಲೇಔಟ್ ನಿವಾಸಿ ತಿಮ್ಮಯ್ಯ ಎಂಬವರ ಪುತ್ರ ವೆಂಕಟೇಶ (21)ಮತ್ತು ಬೆಂಗಳೂರು ಲಕ್ಷ್ಮೀನಗರ ನಿವಾಸಿ ನಯಾಜ್(29) ಎಂಬವರು ಬಂಧಿತರು. ಬೆಂಗಳೂರು ಲಗ್ಗೆರೆ ನಿವಾಸಿ ವಿಶ್ವನಾಥ ಮತ್ತು ಆನಂದ ಎಂಬವರು ತಪ್ಪಿಸಿಕೊಂಡ ವ್ಯಕ್ತಿಗಳು. ಇವರು ಹಲವಾರು ಕೊಲೆ, ಸುಲುಗೆ ಮತು ದರೋಡೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ತಪ್ಪಿಸಿಕೊಂಡವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಭರತ ಎಂತವನು : ಬೆಂಗಳೂರು ರಾಜಗೋಪಾಲ ನಗರದ ಕುಖ್ಯಾತ ರೌಡಿ ಕುಳ್ಳ ಸೀನನ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ಇತ್ತೀಚೆಗಷ್ಟೇ ಖುಲಾಸ್ ಆಗಿ ಹೊರಬಂದಿದ್ದಾನೆ. ರಾಜಾಜಿನಗರ ಠಾಣಾ ಸರಿಹದ್ದಿನಲ್ಲಿ ನಡೆದ ಎರಡು ಕೊಲೆ ಯತ್ನ, ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ಯತ್ನ,ಯಶವಂತಪುರ ಮತ್ತು ಚಂದ್ರ ಲೇಔಟ್ನಲ್ಲಿ ತಲಾ ಒಂದೊಂದು ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈತ ಎರಡು ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡು ಪೊಲೀಸರಿಗೆ ಬೇಕಾದವನಾಗಿದ್ದ.ಉಡುಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ವೆಂಕಟೇಶ ಇಂಥವನು : ಇವನ ಮೇಲೆ ಒಟ್ಟು ಏಳು ಪ್ರಕರಣವಿದೆ.ಸುಬ್ರಹ್ಮಣ್ಯ ನಗರದಲ್ಲಿ ಒಂದು ದರೋಡೆ ಯತ್ನ, ಜಾಲಹಳ್ಳಿಯಲ್ಲಿ ಒಂದು ದರೋಡೆ ಪ್ರಯತ್ನ ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ. ಸೋಮನಹಳ್ಳಿಯಲ್ಲಿ ಒಂದು ಕಿಡ್ನಾಪ್, ಅಮೃತಹಳ್ಳಿಯಲ್ಲಿ ಒಂದು ಕೊಲೆ ಯತ್ನ ಪ್ರಕರಣದಲ್ಲಿ ಕೇಸು ದಾಖಲಾಗಿದ್ದು ಪೊಲೀಸರಿಗೆ ಚಳ್ಳೆಹಣ್ಣುತಿನ್ನಿಸ ತಲೆಮರೆಸಿ ಕೊಂಡಿದ್ದ. ಇವನ ಮೇಲೆ ಸುಲಿಗೆ ಪ್ರಕರಣ ಕೂಡಾ ದಾಖಲಾಗಿದೆ.
ನಯಾಜ್ ಹೇಗಿದ್ದ ಗೊತ್ತಾ : ಈತ ತನ್ನ ಮನೆ ಎದುರಿದ್ದ ವಿವಾಹಿತೆ ರತ್ನಾ ಎಂಬವಳನ್ನು ಪ್ರೇಮಿಸಿ ಈಕೆಯ ಗಂಡನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದ. ಈ ಸಂಬಂಧ ಶಿಕ್ಷಯೂ ಆಗಿ ಈತನ ಪ್ರೇಯಸಿ ಹಾಗೂ ನಯಾಜ್ ಜೈಲು ಶಿಕ್ಷ ಅನುಭವಿಸಿ ಜನವರಿ ತಿಂಗಳಲ್ಲಿ ಹೊರಕ್ಕೆ ಬಂದಿದ್ದಾರೆ. ಜೈಲಿಂದ ಬಂದವನೇ ಮೂರು ಬೈಕ್ ಕದ್ದು ಜೈಲು ಸೇರಿದ ಈತ ಜಾಮೀನಿನ ಮೇಲೆ ಹೊರಕ್ಕೆ ಬಂದಿದ್ದಾನೆ. ಈತನ ಮೇಲೆ ಗಾಂಜಾ ಮಾರಾಟ ಅಪಾದನೆ ಕೂಡಾ ಇದೆ.
ವಿಶ್ವನಾಥ ಕಡಿಮೆಯಲ್ಲ : ತಪ್ಪಿಸಿಕೊಂಡ ವಿಶ್ವನಾಥನಿಗೂ ಕಡಿಮೆ ಹಿನ್ನೆಲೆಯಿಲ್ಲ. ರಾಜಾಜಿನಗರದಲ್ಲಿ ಕ್ವಾಲೀಸ್ ಕಾರು ಕಳವು ಪ್ರಕರಣ ಮತ್ತು ಹಲವಾರು ದರೋಡೆ ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ. ತಪ್ಪಿಸಿಕೊಂಡ ಆನಂದನ ಪೂವರ್ಾಪರ ಇನ್ನೂ ಪತ್ತೆಯಾಗಬೇಕಾಗಿದೆ. ಒಟ್ಟಾರೆ ಉಡುಪಿ ಪೊಲೀಸರ ಸಮಯ ಪ್ರಜ್ಞೆ ನಡೆಯಬಹುದಾಗಿದ್ದ ಭರೀ ಅನಾಹುತ ತಪ್ಪಿಸಿದೆ.
25 ಸಾವಿರ ನಗದು ಘೋಷಣೆ : ಕುಖ್ಯಾತ ದರೋಡೆ ಕೋರರನ್ನು ಮತ್ತು ಹಲವು ಪ್ರಕರಣ ಛೇದಿಸಿದ ಪೊಲೀಸ ತಂಡಕ್ಕೆ ಜಿಲ್ಲಾ ಎಸ್ಪಿ ಪ್ರವಿಣ್ ಮಧುಕರ್ ಪವಾರ್ 25 ಸಾವಿರ `ಇಮಾಮ್' ಪ್ರಕಟಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟ ಪ್ರವೀಣ್ ಮಧುಕರ್ ಪವಾರ್ ಮಾರ್ಗದರ್ಶನದಲ್ಲಿ,ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಚ್.ವಿ. ವೆಂಟೇಶಪ್ಪ ಹಾಗೂ ಜಿಲ್ಲಾ ಪೊಲೀಸ್ ಉಪಅಧೀಕ್ಷಕ ಜಯಂತ್ ವಿ.ಶೆಟ್ಟಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಯಿತು. ನಗರ ಠಾಣೆ ಪಿಎಸ್ಸೈ ಸಂಪತ್ ಕುಮಾರ್, ಮಣಿಪಾಲ ಪಿಎಸ್ಸೈಮಧು ಟಿಎಸ್ ಮತ್ತು ಸಿಬ್ಬಂದಿ ರಾಮಚಂದ್ರ, ತನಿಯಾ, ಕೃಷ್ಣಪ್ರಸಾದ್,ಸಂತೋಷ್ ಕುಂದರ್, ಸುಧೀರ್, ಫಯಾಜ್ ಅಹಮ್ಮದ್,ಸುದೇಶ್, ರಾಮು ಹೆಗಡೆ,ಮಹಾಬಲ ಮತ್ತು ಸುಧಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment