ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:40 PM

ನೀರ ನಾರಿ

Posted by ekanasu

ಸಾಹಿತ್ಯ
ನದಿನೀರ ನಾಚಿಸುವ
ಸುಂದರಿಯು ನಾನನ್ನ
ವಯ್ಯಾರದಿ ಸಾಗುತಿಹ
ನದಿಗೊಮ್ಮೆ ನಾಚಿಸುವ
ಸೊಗಸ ತರುವವಳು ನಾನು
ತಾಳ್ಮೆಯಲಿ ಸಾಗುತಿಹ ನೀರ ಹಾಸಿನ ಮೇಲೆ
ಒಂದಿನಿತು ಜಲಭೇರಿ ಭಾರಿಸಿದೆನು
ಅಲ್ಲೊಮ್ಮೆ ಚಿಮ್ಮಿತು
ನೀರ್ಗಲ್ಲ ಚೀತ್ಕರಿಸಿ
ನೀರು ಹನಿ ಹನಿಯಾಗಿ
ಸಿಂಚನವಾಯಿತು
ಮತ್ತೊಮ್ಮೆ ನೆನಪಿಸಿತು ಅಬ್ಬರದಿ
ಹರಿಯುವೆನು
ಹನಿ ಹನಿಯು ಕೂಡಿರಲು ಅದು ಸೊಗಸೆಂಬಂತೆ
ದಟ್ಟಡವಿಯ ನಡುವೆಯೂ
ಹಸಿರ ಭೇದಿಸಿ ಸಾಗಿದರೂನಿಸರ್ಗಕಾವ್ಯಕ್ಕೆಂದೂ ಕುಂದು ತರದಿಹೆನು
ಹಾಲ್ಗಲ್ಲ ಎಳೆ ಹೆಣ್ಣೆ ನೀಬರುವ ತನಕವಿದು
ಬರಿಯ ನದಿಯಾಗಿತ್ತು ಇಂದು ತನಕ
ನೀಬಂದು ನಾಚಿಸಿದೆ, ಹರಿವ ನೀರನು ಬಿಡದೆ
ನಿನ್ನ ಪ್ರೀತಿಯ ಸೆಳೆತ ನನ್ನ ನಾಚಿಸುತಿವೆ.

- ವರ್ಷ

0 comments:

Post a Comment