ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್
ಮಳೆಗಾಲದಲ್ಲಿನ ನೆನಪಿನ ಹಂದರ...
ಮಳೆಗಾಲ ಅಂದ್ರೆನೇ ಹಾಗೆ. ಎಲ್ಲಾ ಹಕ್ಕಿಗಳು ರಕ್ಷಣೆಗಾಗಿ ಗೂಡು ಸೇರುವ ಸಮಯ. ಆದರೆ ಮನಸೆಂಬ ಗುಬ್ಬಚ್ಚಿ ಗೂಡಲ್ಲಿ ಬಚ್ಚಿಟ್ಟ ನೆನಪಿನ ಹಕ್ಕಿಗಳು ಒಂದೊಂದಾಗಿ ಹೊರ ಬರುತ್ತವೆ. ಮನಸ್ಸಿಗೆ ಕಚಗುಳಿಯಿಟ್ಟು ಮುದ ನೀಡುತ್ತವೆ.ಮಳೆಗಾಲದ ಸುಂದರ, ರಮ್ಯ ಕ್ಷಣಗಳ ಪ್ರತಿ ಚಿತ್ರಣವನ್ನು ಕಣ್ಣ ಮುಂದೆ ತೇಲಿಸಿ ಬಿಡುತ್ತದೆ. ಆ ನೆನಪುಗಳೇ ಅಮರ. ಬಾಲ್ಯದ ಮಳೆಗಾಲಕ್ಕೆ ಅದರದೇ ಸೊಬಗು. ಕೊಡೆಯಿದ್ದರೂ ನೆನೆಯಬೇಕೆಂಬ ತವಕ. ಮನೆಯವರಿಂದ ಬೈಗುಳ ಕಟ್ಟಿಟ್ಟ ಬುತ್ತಿ ಎಂದು ತಿಳಿದರೂ ಆ ಮಳೆಗಾಲದ ಆಟದ ಕುತೂಹಲ ಬತ್ತಿಹೋಗುವುದಿಲ್ಲ. ಮತ್ತೆ ಮತ್ತೆ ಹೆಚ್ಚಾಗುತ್ತವೆ. ಕೊನೆಗೊಮ್ಮೆ ಅಮ್ಮ ಹಾಕಿದ ರೇಖೆಯನ್ನು ದಾಟಿ ನೀರಿನಾಟದ ಮಸ್ತಿಗೆ ಇಳಿದೇ ಬಿಡುತ್ತೇವೆ. ಹ್ಙು. . . ಎಷ್ಟೊಂದು ಸುಂದರ ಗಳಿಗೆಗಳು.
ಅಪ್ಪನೊಂದಿಗೆ ಹೊಲಕ್ಕೆ ಹೋಗಿ ಕೆಸರಾಟದಲ್ಲಿ ಮಿಂದೆದ್ದು ಮಳೆಗೆ ನೆನೆದು, ಅಮ್ಮನಿಂದ ಬೈಸಿಕೊಂಡರೂ ಬೇಸರವಿಲ್ಲ. ಮತ್ತೆ ಜ್ವರ ಬಂದು ಹಾಸಿಗೆ ಹಿಡಿದರೂ ಮಳೆಗೆ ಮಾತ್ರ ಹಿಡಿ ಶಾಪವಿಲ್ಲ, ಹುಸಿಮುನಿಸಿನ ದರ್ಶನವಿಲ್ಲ.ಧೋ ಎಂದು ಮಳೆ ಸುರಿಯುತ್ತಿದ್ದರೂ ಸ್ನೇಹಿತರೊಂದಿಗೆ ಕೊಡೆ ಹಿಡಿದುಕೊಂಡು, ಒದ್ದೆಯಾಗಿಕೊಂಡು ಶಾಲೆಗೆ ಹೋಗುವುದೆಂದರೆ ಬಲು ಖುಷಿ. ಮಳೆಗೆ ರಜೆಯೆಂದು ಘೋಷಿಸಿದರಂತೂ ಎಲ್ಲಿಲ್ಲದ ಸಂಭ್ರಮ. ಮತ್ತೆ ಮಳೆಯೊಂದಿಗೆ ಆಟ, ನಲಿದಾಟ. ಮನೆಗೆ ತಲುಪುವುದಂತೂ ಮಧ್ಯಾಹ್ನವೇ ಸರಿ.ಹೀಗೆ ಬಾಲ್ಯದ ನೆನಪುಗಳು ಮನಸ್ಸಿನಲ್ಲಿ ಎಳೆಎಳೆಯಾಗಿ ಪೋಣಿಸುತ್ತಾ ಹೋಗುತ್ತದೆ. ಅದರಂತೆ ಕಾಲೇಜು ಮೆಟ್ಟಿಲು ಹತ್ತಿದಂತೆ ಯೋಚನೆಗಳು ಬದಲಾಗುತ್ತವೆ. ಸಂತಸದ ಸಂಗತಿಗಳು, ಸಂಭ್ರಮಕ್ಕೆ ಎಡೆಮಾಡಿಕೊಡುವ ವಿಚಾರಗಳೂ ವಿಭಿನ್ನವಾಗುತ್ತಾ ಹೋಗುತ್ತವೆ. ಆಲೋಚನೆಗಳೂ ಪ್ರೌಢಾವಸ್ಥೆಗೆ ತಲುಪಿರುತ್ತವೆ.
ಮೌನವಾಗಿ ಕುಳಿತು ಮಳೆ ನೋಡುತ್ತಿದ್ದರೆ, ಇನಿಯನ ನೆನಪು ಮತ್ತೆ ಮತ್ತೆ ಕಾಡುತ್ತದೆ. ಮಣ್ಣಿನ ವಾಸನೆ, ಹಕ್ಕಿಗಳ ಕಲರವ, ನೀರಿನ ಚಿಟಪಟ ಸದ್ದಿನೊಂದಿಗೆ ಇನಿಯನ ಸನಿಹ ಬೇಕೆನಿಸುತ್ತದೆ. ಆತನ ಬೆಚ್ಚನೆಯ ಅಪ್ಪುಗೆಯಲ್ಲಿ ಗುಬ್ಬಚ್ಚಿಯಂತೆ ಕೂರಬೇಕೆನಿಸುತ್ತದೆ. ಬೇಡ ಬೇಡವೆಂದರೂ ಆತನೊಂದಿಗೆ ಕಳೆದ ಪ್ರತಿಕ್ಷಣವೂ ಮರುಕಳಿಸುತ್ತಿರುತ್ತವೆ.

ಮಳೆಯೇ ಹಾಗೆ. ಎಲ್ಲಾ ನೆನಪುಗಳನ್ನು ಮುತ್ತಿನ ಮಾಲೆಯಂತೆ ಪೋಣಿಸಿ ಮನಸ್ಸಿಗೆ ಆನಂದ ವನ್ನುಂಟುಮಾಡುತ್ತದೆ. ಎಲ್ಲೋ ಹುದುಗಿದ್ದ ಸಾವಿರಾರು ನೆನಪುಗಳಿಗೆ ಜೀವ ತುಂಬುತ್ತದೆ. ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ.ಮಳೆ ದೂರ ದೂರ ಸರಿದಂತೆ ನೆನಪುಗಳು ಗುಬ್ಬಚ್ಚಿ ಗೂಡು ಸೇರಿ ಬಿಡುತ್ತವೆ. ಮತ್ತೆ ಕನಸುಗಳನ್ನು ಕಟ್ಟುತ್ತಾ, ಮುಂದಿನ ವರ್ಷಕ್ಕೆ ಅಣಿಯಾಗುತ್ತವೆ. ಅದರಂತೆ ಆ ಎಲ್ಲಾ ನೆನಪಿನ ಹೆಜ್ಜೆ ಗುರುತುಗಳು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಅದನ್ನು ಪೋಷಿಸುತ್ತಾ ಇರುತ್ತದೆ.

ಅಶ್ವಿನಿ. ಪಿ.

2 comments:

Anonymous said...

good presentation...

Unknown said...

hi sshvini sister nanu nimma brother totendra anta tumba chanagi nimma artical prakatavagide
totendra
ma journalisam
gulbarga
totendramkl26@gmail.com
9886456417

Post a Comment