ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು:ಜನರ ಕಳಕಳಿ ಪರಿಸರದತ್ತ ಹೊರಳಲಿ, ಪರಿಸರ ಮಾಲಿನ್ಯ ಸಮಸ್ಯೆ ಪರಿಹರಿಸಲು ಜನಜಾಗೃತಿಯೊಂದೇ ಪರಿಹಾರ ಎಂದು ಬಂದರು, ಪರಿಸರ,ಮುಜರಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.ಅವರಿಂದು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನಲ್ಲಿ ಕುರ್ನಾಡು ಗ್ರಾಮ ಪಂಚಾ ಯಿತಿ,ದ.ಕ.ಜಿ.ಪಂ, ಬಂಟ್ವಾಳ ತಾಲೂಕು ಪಂಚಾಯಿತಿ, ವರ್ತಕರ ಸಂಘ ಮುಡಿಪು, ಜನ ಶಿಕ್ಷಣ ಟ್ರಸ್ಟ್ ನ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸ ಲಾದ ಘನತ್ಯಾಜ್ಯ ವಿಲೇವಾರಿ ನಿರ್ವಹಣ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈಗಾಗಲೇ ಎಲ್ಲಾ ದೇವಾಲ ಯಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸ ಲಾಗಿದ್ದು, ಇದನ್ನು ಎಲ್ಲ ಧಾರ್ಮಿಕ ಕೇಂದ್ರ, ಉದ್ಯಾನ ಹಾಗೂ ಮೃಗಾಲ ಯಗಳಿಗೂ ವಿಸ್ತರಿಸ ಲಾಗುವುದು. ಪ್ಲಾಸ್ಟಿಕ್ ನಿಂದಾಗುವ ಅನಾಹುತ, ಸರಿಯಾದ ತ್ಯಾಜ್ಯ ವಿಲೇವಾರಿ ಯಿಲ್ಲದೆ ಅಂತರ್ ಜಲ ಹಾಳಾ ಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಸಚಿವರು, ಉತ್ತಮ, ಸದೃಢ ಭಾರತ ನಿರ್ಮಾಣಕ್ಕೆ ಪರಿಸರ ಕಾಪಿಡುವ ಅಗತ್ಯವನ್ನು ಪ್ರತಿ ಪಾದಿಸಿದರು.ರಾಜ್ಯದ 9 ಲಕ್ಷ ಮಕ್ಕಳು ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋ ಜನವನ್ನು ಪಡೆದಿದ್ದು, ಅ.19 ರಂದು ನಮ್ಮ ಜಿಲ್ಲೆಯಲ್ಲೂ ಮಕ್ಕಳ ಹೆತ್ತವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು.
ಇಂದು ಮುಡಿಪು ವಿನಲ್ಲಿ ಗಾಂಧೀ ಜಯಂತಿ ಯಂದು ಸ್ವಾಸ್ಥ್ಯ ಸಮಾಜಕ್ಕೆ ಪೂರಕ ಕೆಲಸಕ್ಕೆ ಮುನ್ನುಡಿ ಬರೆದಿದ್ದು, ಇಂತಹ ಕೆಲಸಗಳು ನಿರಂತ ರವಾಗಿ ನಡೆಯಲಿ; ಇದಕ್ಕೆ ಸರ್ಕಾರದ ವತಿಯಿಂದ ಸರ್ವ ಸಹಾಯ ನೀಡುವ ಘೋಷಣೆ ಯನ್ನು ಸಚಿವರು ಮಾಡಿದರು. ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಂಕು ಸ್ಥಾಪನೆ ಹಾಗೂ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಶಾಸಕ ಯು ಟಿ ಖಾದರ್ ಅವರು, ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರ ಸಹಕಾರ ವನ್ನು ಪ್ರಶಂಸಿ ಸಿದರು.ಗ್ರಾಮೀಣರಲ್ಲಿ ಸ್ವಚ್ಛತೆ ಪರಿಕಲ್ಪನೆ ನಿರಂತರ ವಾಗಿರಲಿ ಎಂದರು. ಭಾಗ್ಯಲಕ್ಸ್ಮಿ ಯೋಜನೆಯಡಿ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಜಿ ಪಂ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ಉದ್ಘಾಟಿಸಿ ಮಾತನಾಡಿದರು.ಪ್ಲಾಸ್ಟಿಕ್ ಪರ್ವತವನ್ನು ಉಪಾದ್ಯಕ್ಷ ಜಗನ್ನಾಥ್ ಸಾಲಿಯಾನ್ ಅವರು ಉದ್ಘಾಟಿಸಿದರು. ಸಿಇಒ ಪಿ.ಶಿವಶಂಕರ್ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡ ದವರಿಗೆ ತೆಂಗಿನ ಗಿಡ ವಿ ತರಿಸಿ ಜಿಲ್ಲಾ ಪಂಚಾಯತ್ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿಗೆ ನೀಡಿರುವ ಆದ್ಯತೆ ಹಾಗೂ ಅದಕ್ಕೆ ಗ್ರಾಮೀಣರ ಸಹಕಾರದ ಅಗತ್ಯದ ಬಗ್ಗೆ ಗಮನ ಸೆಳೆದರು.ತಾಲೂಕು ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ ಕರ್ಕೆರಾ ಅವರು ಸ್ವಚ್ಛತಾ ವೃಂದಾವನ ಉದ್ಘಾಟಿಸಿದರು.ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಸಂಜೀವ ನಾಯ್ಕ್ ಅವರು 8 ದಿನಗಳಲ್ಲಿ ಈ ವೃಂದಾವನವನ್ನು ನಿರ್ಮಿಸುವ ಕಾಯಕದಲ್ಲಿ ನಿರತರಾಗಿದ್ದರು.ಉದ್ಯೋಗ ಖಾತ್ರಿ ಯೋಜನೆ ಕೆಲಸಗಾರರಿಗೆ ಕೆಲಸದ ಆದೇಶ ಪತ್ರ ವಿತರಣೆ ಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಬಾಬು ಅವರು ನೀಡಿದರು.ಕುರ್ನಾಡು ಪಂಚಾಯತ್ ಅಧ್ಯಕ್ಷ ಸೂಫಿ ಕುಂಞ ಸ್ವಾಗತಿಸಿದರು.ವರ್ತಕರ ಸಂಘದ ಅಧ್ಯಕ್ಷ ರಮೇಶ್ ಶೇಣವ ,ತಾ.ಪಂ ಸದಸ್ಯರಾದ ಸೇಸಪ್ಪ ಟೈಲರ್, ಪ್ರವೀಣ್ ಆಳ್ವ, ಉಮ್ಮರ ಪಜೀರ್ ಉಪಸ್ಥಿತರಿದ್ದರು

0 comments:

Post a Comment