ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ಮೂಡುಬಿದಿರೆ: ಡಾ.ಜಿ.ಎಸ್.ಅಮೂರ, ಡಾ.ಎಂ.ವೀರಪ್ಪ ಮೊಯಿಲಿ ಸೇರಿದಂತೆ ಹತ್ತುಮಂದಿ ಗಣ್ಯರು 7ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ಆಳ್ವರು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ಅಕ್ಟೋಬರ ತಿಂಗಳ 29,30 ಮತ್ತು 31ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದ್ದು ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.


ಡಾ.ಜಿ.ಎಸ್ ಅಮೂರ (ಸಾಹಿತ್ಯ), ಡಾ.ಎಂ.ವೀರಪ್ಪ ಮೊಯಿಲಿ (ಸಮಾಜಸೇವೆ), ಡಾ.ಎಂ.ಎಂ.ಕಲಬುರ್ಗಿ(ಸಂಶೋಧನೆ), ಸಂತೋಷ ಕುಮಾರ್ ಗುಲ್ವಾಡಿ (ಮಾಧ್ಯಮ), ಡಾ.ಶಿವಮೊಗ್ಗ ಸುಬ್ಬಣ್ಣ (ಸುಗಮ ಸಂಗೀತ), ಡಾ.ಬಲಿಪ ನಾರಾಯಣ ಭಾಗವತರು (ಯಕ್ಷಗಾನ), ಡಾ.ಎಂ.ಲೀಲಾವತಿ (ಚಲನಚಿತ್ರ), ಪ್ರೊ.ಬಿ.ಜಯಪ್ರಕಾಶ ಗೌಡ (ಸಂಘಟನೆ), ಡಾ.ಬ್ರ.ಕು.ಬಸವರಾಜ ರಾಜಋಷಿ(ಅಧ್ಯಾತ್ಮ), ಡಾ.ಕೆ.ಪಿ.ಪುತ್ತೂರಾಯ(ಸಾಹಿತ್ಯ)ಇವರುಗಳು ಈ ಬಾರಿಯ ನುಡಿಸಿರಿ ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿಯು 10ಸಾವಿರ ನಗದು, ಮಾನಪತ್ರ, ಸ್ಮರಣಿಕೆ, ಶಾಲು, ಫಲಪುಷ್ಪ ಗೌರವಗಳನ್ನೊಳಗೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಮೆರವಣಿಗೆ ನಡೆಯಲಿದ್ದು ಅನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಿವರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯದರ್ಶಿ ಹರೀಶ್ ಕೆ.ಆದೂರು, ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು

0 comments:

Post a Comment