ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನಕ್ಸಲ್ ಪೀಡಿತ ಪ್ರದೇಶಕ್ಕೂ ಪ್ಯಾಕೇಜ್, ಶರಣಾದ ನಕ್ಸಲರಿಗೂ ಬಂತು ಪ್ಯಾಕೇಜ್!

ಉಡುಪಿ : ನಕ್ಸಲರಿಗೂ ಬಂತು ಪ್ಯಾಕೇಜ್. `ಪ್ಯಾಕೇಜ್' ಅವಧಿ ಒಂದು ವರ್ಷ..! ಪ್ಯಾಕೇಜ್ ಕೊಡುಗೆಗೆ ಸಾಕಷ್ಟು ಸಮಯಾವಕಾಶ ಇರೋದ್ರಿಂದ ನಕ್ಸಲರು ಶರಣಾಗಲು ಅಡ್ಡಿಯಿಲ್ಲ. ಈ ಮಾಹಿತಿ ಯನ್ನು ಉಡುಪಿ ಜಿಲ್ಲೆ ಅಧೀಕ್ಷಕರೇ ಹೊರಹಾಕಿದ್ದಾರೆ.
ಸಮಾಜದಲ್ಲಿ ಎಲ್ಲರೂ ಸರಿಸಮಾನರು. ತಾರತಮ್ಯ,ಹೆಚ್ಚು ಕಮ್ಮಿ ಮುಂತಾದ ವ್ಯಪರೀತ್ಯ ಹೊಡೆದುಹಾಕುವ ನಿಟ್ಟಿನಲ್ಲಿ ಹೋರಾಟಕ್ಕಿಳಿದು ಅದು ಕೈಗೂಡದಿದ್ದಾಗ ಶಶ್ತ್ರಾಸ್ತ್ರದ ಮೂಲಕ ನಿವಾರಣೆ ಕಾಣೋ ಸಲುವಾಗಿಯೋ ಅಥವಾ ಮತ್ತ್ಯಾವುದೋ ಒತ್ತಡಕ್ಕೆ ಸಿಕ್ಕಿ ನಕ್ಸಲ್ ಚಳವಳಿಯಲ್ಲಿ ಪಾಲ್ಗೊಂಡವರಿಗೆ ಸಮಾಜದ ಮುಖ್ಯ ವಾಹಿನಿಗೆ ಬರಲು ಇದೊಂದು ಸುವರ್ಣಾವಕಾಶ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಓರ್ವ ನಕ್ಸಲ್ ಶರಣಾಗಿದ್ದು, ಮತ್ತಷ್ಟು ನಕ್ಸಲರು ಶರಣಾಗುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ. ಬರೇ ಪ್ಯಾಕೇಜ್ ಅಷ್ಟೇ ಅಲ್ಲ. ಶರಣಾದ ನಕ್ಸಲರ ವಿರುದ್ದ ದಾಖಲಾದ ಪ್ರಕರಣ ಹಿಂದಕ್ಕೆ ಪಡೆಯುವ ಚಿಂತನೆಯನ್ನ್ನೂ ರಾಜ್ಯ ಸರಕಾರ ಮಾಡುತ್ತಿದೆ.ನಕ್ಸಲ್ ಪ್ಯಾಕೇಜ್ ಹಳ್ಳ ಹತ್ತಿತು : ನಕ್ಸಲರು ಗ್ರಾಮೀಣ ಪ್ರದೇಶದ ಅಂಕು,ಡೊಂಕುಗಳನ್ನು ಎತ್ತಿಕೊಂಡು ಪಶ್ಚಿಮ ಘಟ್ಟದ ತಪ್ಪಲಲ್ಲಿ ನಕ್ಸಲ್ ಚಟುವಟಿಕೆಗೆ ಮುನ್ನಿಡಿ ಬರೆದರು. ಕುಗ್ರಾಮಗಳ ಅಭಿವೃದ್ದಿಯಲ್ಲಿ ಸರಕಾರ ತೋರಿದ ಅಸಡ್ಡೆ, ಕೂಲಿ ಕಾರ್ಮಿಕರ ಶೋಷಣೆ, ಒತ್ತುವರಿ ತೆರೆವು ಮುಂತಾದ ಸಂಗತಿಗಳಿಗೆ ಒತ್ತುಕೊಟ್ಟು ನಕ್ಸಲರು ಹಳ್ಳಿಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಭಶಃ ಸಫಲರಾಗಿದ್ದರು.
ಕಬ್ಬಿನಾಲೆ, ಬಸ್ರಿಬೇರು, ಮಡಾಮಕ್ಕಿ, ಹಳ್ಳಿಜಡ್ಡು, ಸೀತಾನದಿ, ಈದು, ಕಮಲಶಿಲೆ, ಹಳ್ಳಿಹೊಳೆ, ಸೋಮೇಶ್ವರ, ಶುಂಟಿಕೊಪ್ಪ, ಕಿಗ್ಗ, ಕಳಸ, ಸೋಮೇಶ್ವರ, ಆಜ್ರಿ, ಮುದ್ರಾಡಿ, ಮದೂರು, ಕೊಲ್ಲೂರು, ಅಂಬಿಕಾನು, ತೊಂಭಟ್ಟು, ಅಮಾಸೆಬೈಲು, ಹೆಂಗವಳ್ಳಿ, ಮುಂತಾದ ಪ್ರದೇಶಗಳಲ್ಲಿ ನಕ್ಸಲರು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುತ್ತಿದ್ದರೂ ಹಾಗೆ ಮಾಯವಾಗುತ್ತಿದ್ದರು. ಇಲ್ಲಿ ಎನ್ಕೌಂಟರಿಗೆ ನಕ್ಸಲರು ಬಲಿಯಾಗಿದ್ದಾರೆ. ನಕ್ಸಲರ ಪ್ರತಿಕಾರಕ್ಕೆ ಶೇಷಪ್ಪ ಗೌಡ, ಸೀತಾನಿದಿ ಭೋಜು ಶೆಟ್ಟಿ, ಶೃಂಗೇರಿ ವೆಂಕೇಶಮೂರ್ತಿ, ಹಳ್ಳಿಹೊಳೆ ಕೃಷಿಕ ಕೇಶವ ಚಾತ್ರಾ ಮುಂತಾದವರು ನಕ್ಸಲರ ಪ್ರತಿಕಾರಕ್ಕೆ ಜೀವತೆತ್ತಿದ್ದಾರೆ. ಒಟ್ಟಾರೆ ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಳವಳಿ ಹಿಂದೆ ರಕ್ತ ಹರಿದಿದೆ. ಮಚ್ಚಟ್ಟು ಲಕ್ಷ್ಮೀ, ನಾರಾವಿಯ ಯುವಕ ನಕ್ಸಲ್ ತಂಡ ಸೇರಿದ್ದೇ ನಕ್ಸಲರಿಗೆ ಸಿಕ್ಕ ಯಶಸ್ಸು.

ನಕ್ಸಲ್ ಪ್ರಭವ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಕೈಹಾಕಿದ್ದೇ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಗಾಗಿ ಪ್ಯಾಕೇಜ್ ಘೋಷಣೆ. ಹಕ್ಕು ಪತ್ರ ವಿತರಣೆ ಮನೆಯಲ್ಲೇ ಕೂತು ಸಂಪಾದನೆ ಮಾಡುವ ನಿಟ್ಟಿನಲ್ಲಿ ನೈಗೆ ತರಬೇತಿ ಮತ್ತು ನೈಗೆ ಯಂತ್ರೋಪಕರಣಗಳ ವಿತರಣೆ. ಹೊಸೂರು, ಬಾವುಡಿ, ಆಜ್ರಿ ಮುಂತಾದ ಕಡೆಯಲ್ಲಿ ಯುವಕರು ಮತು ಯುವತಿಯರು ಸ್ವತಃ ನೈಯ್ಗೆಯಲ್ಲಿ ಮಗ್ನರು. ಹಾಗಾಗಿ ನಕ್ಸಲ್ ಕಡೆಗಿದ್ದ ಒಲವೂ ಕಮ್ಮಿಯಾಗಿದೆ.
ಸರಕಾರ ನಕ್ಸಲ್ ಪ್ಯಾಕೇಜ್ ಹೆಸರಲ್ಲಿ ಬಿಡುಗಡೆ ಮಾಡಿದ ಹಣ ಮಾತ್ರ ಹಳ್ಳಹತ್ತಿದೆ. ಪ್ಯಾಕೇಜ್ ಹೆಸರಲ್ಲಿ `ಕೋತಿ ಬೆಣ್ಣೆ ತಿಂದು ಹೋತದ ಬಾಯಿಗೆ ಒರಸಿತು' ಅಂತಾರಲ್ಲ ಹಾಗಾಗಿದೆ. ನಕ್ಸಲ್ ಪ್ಯಾಕೇಜ್ ಹೆಸರಲ್ಲಿ ಹೆಬ್ರಿಯ ಒಬ್ಬರು ಬೆಂಗಳೂರಿನಲ್ಲಿ ಹೊಟೇಲ್ ತೆರೆದಿದ್ದು ಗುಟ್ಟಾಗಿ ಉಳಿದಿಲ್ಲ. ಜವಳಿ ಇಲಾಖೆ ತಂದ ನೈಗೆ ಯೋಜನೆ ಬಿಟ್ಟರೆ ಹಳ್ಳಿಗೆ ಬಂದ ಪ್ಯಾಕೇಜ್ `ಮಂಗಮಾಯ'ವಾಗಿದೆ. ಕುಗ್ರಾಮಗಳು ಹಿಂದೆ ಹೇಗಿತ್ತೋ ಇಂದಿಗೂ ಬದಲಾಗದೆ ಹಾಗೆ ಉಳಿದಿದೆ. ಹಾಗಾಗಿ ಈ ಪರಿಸರದ ಜನರು ಮತ್ತೊಮ್ಮೆ ನಕ್ಸಲ್ ಕಡೆಗೆ ಮುಖ ಮಾಡಿದರೂ ಅಚ್ಚರಿಯಿಲ್ಲ.
ಶರಣಾಗತಿ ಪ್ಯಾಕೇಜ್ ಏನಾಗುತ್ತೋ : ರಾಜ್ಯ ಸರಕಾರ ನಕ್ಸಲ್ ಪ್ರಭವ ಕುಗ್ಗಿಸುವ ಇರಾದೆಯಲ್ಲಿ ಶರಣಾದ ನಕ್ಸಲರಿಗೆ ಹೊಸ ಪ್ಯಾಕೇಜ್ ಘೋಷಿಸಿದೆ. ಇದರ ಅವಧಿ ಮಾತ್ರ ಒಂದು ವರ್ಷ. ಈ ಅವಧಿಯಲ್ಲಿ ಶರಣಾದ ನಕ್ಸಲರಿಗೆ ಪ್ಯಾಕೇಜ್ ಮುಖಾಂತರ ಹೊಸ ಬದುಕು ರೂಪಿಸಿಕೊಳ್ಳುವ ಅವಕಾಶ ಸರಕಾರ ಮಾಡಿಕೊಡುತ್ತಿದೆ.
ನಕ್ಸಲರು ನೇರವಾಗಿ ಅಧಿಕಾರಿಗಳ ಮುಂದೆ ಶರಣಾಗಬಹುದು. ಇಲ್ಲಾ ಸಮಾಜದ ಮುಖಂಡರ ಮುಂದೆ ಶರಣಾಗತಿ ಪ್ರಸ್ತಾಪ ಮುಂದಿಡಬಹುದು. ನಕ್ಸಲ್ ಪಟ್ಟಿಯಲ್ಲಿರೋರು, ನಕ್ಸಲರ ಬೆನ್ನಿಗೆ ನಿಂತೋರು ಮತ್ತು ನಕ್ಸಲರಿಗೆ ಸಹಾಯ ಮಾಡಿದ `ಲಿಸ್ಟ್ ' ನಲ್ಲಿರೋರು `ಶರಣಂ' ಎನ್ನಲು ಅಡ್ಡಿಯಿಲ್ಲ.
ಶರಣಾದ ನಕ್ಸಲರ ಭವಿಷ್ಯ ರೂಪಿಸಿಕೊಳ್ಳಲು ಪ್ಯಾಕೇಜ್ ಮುಖಾಂತರ ಎರಡು ಲಕ್ಷ ರೂ.ವರಗೆ ಸಹಾಯ ಧನ ಮತ್ತು ಸಾಲ ಸೌಲಭ್ಯ ಪಡೆಯಬಹುದು. ಸ್ವಾಉದ್ಯೋಗ, ವಿದ್ಯಾಭ್ಯಸ ಮಾಡುವ ಆಸೆಯಿದ್ದವರಿಗೆ ಮಾಸಿಕ ಎರಡು ಸಾವಿರ ರೂ. ಭತ್ಯೆ ನೀಡಲಾಗುತ್ತದೆ.
ಶರಣಾದ ನಕ್ಸಲರು ಒಪ್ಪಿಸುವ ಆಯುಧಕ್ಕೂ ಪ್ರೋತ್ಸಾಹ ಧನವಿದೆ! ಹಾಗೆ ಶರಣಾದ ನಕ್ಸಲರ ಚಟುವಟಿಕೆ ಗಮನಿಸಿ ಸರಕಾರ ಅವರಮೇಲಿದ್ದ ಪ್ರಕರಣವನ್ನೂ ಹಿಂದಕ್ಕೆ ಪಡೆಯುವ ನಿಧರ್ಾರ ಮಾಡುತ್ತದೆ. ರಾಜ್ಯ ಸರಕಾರ ನಕ್ಸಲ್ ಚಟುವಟಿಕೆ ನಿಯಂತ್ರಿಸಲು ಸಫಲವಾದ ನಿಮಿತ್ತ ಕೇಂದ್ರ ಸರಕಾರ ನಕ್ಸಲ್ ಪೀಡಿತ ಪಟ್ಟಿಯಿಂದ ರಾಜ್ಯವನ್ನು ಹೊರಗುಳಿಸಿದೆ. ಹಾಗೆ ಕೇಂದ್ರ ಕೊಡುತ್ತಿದ್ದ ಅನುದಾನವೂ ನಿಂತಿದೆ.
ಹೆಚ್ಚಿನ ಮಾಹಿತಿ ಬೇಕಾ ಹಾಗಾದರೆ ಈ ನಂಬರಿಗೆ ಡಯಲ್ ಮಾಡಿ : ಉಡುಪಿ 0820-2534777, 9480805401. ಮಂಗಳೂರು : 0824-2220503,9480805301, ಶಿವವೊಗ್ಗ : 08182-261400, 9480803301. ಚಿಕ್ಕಮಗಳೂರು : 08202-230403, 9480805101 ಸಂಪರ್ಕಿಸಬಹುದು.
ಖಾಲಂ ಮಾಡಿ :
ಆಯಧಕ್ಕೆ ನೀಡುವ ಹಣ ಎಷ್ಟು : ಎಕೆ 47,56,74 ಆಯಧಕ್ಕೆ 15 ಸಾವಿರ ರೂ., ಸ್ನಿಫರ್ ರೈಪಲ್ಗೆ 25 ಸಾವಿರ ರೂ., ಪಿಸ್ತೂಲ್ ಮತ್ತು ರಿವಾಲ್ವರ್ 3 ಸಾವಿರ ರೂ., ರಾಕೇಟ್ಗೆ 1 ಸಾವಿರ ರೂ., ವಿವಿಧ ನಮೂನೆಯ ಗ್ರಾನೈಡ್ಗೆ ಐನೂರು ರೂ., ರಿಮೋಟ್ ಕಂಟ್ರೂಲ್3 ಸಾವಿರ ರೂ., ಬಾಂಬ್ 3 ಸಾವಿರ ರೂ., ಸ್ಪೋಟಕ ಕೇಜಿಗೆ 1ಸಾವಿರ ರೂ.,ವೈರ್ಲೆಸ್ ಸೆಟ್ 1 ಸಾವಿರ ರೂ., ಹತ್ತಿರ ಮತ್ತು ದೂರದ ಅಂತರದ ಸೆಟ್ಗೆ 5 ಸಾವಿರ ರೂ., ಸಾಮ್ ಮಿಸೈಲ್ 20 ಸಾವಿರ ರೂ., ಸಾಟಿಲೇಟ್ ಪೋನ್ 10 ಸಾವಿರ ರೂ., ಕಮ್ಯೂನಿಕೇಶನ್ ಸೆಟ್ 5 ಸಾವಿರ ರೂ., ಎಲೆಕ್ಟ್ರಿಕ್ ಡಿಟೊನೇಟರ್ 50 ಸಾವಿರ ರೂ., ಮತ್ತಿತರ ಡಿಟೊನೇಟರ್ಗಳಿಗೆ 10 ಸಾವಿರ ರೂ. ಎಂದು ಪಿಕ್ಸ್ ಮಾಡಲಾಗಿದೆ.


ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment