ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಾಸರಗೋಡು: ತೆಂಗಿನ ಜೈವಿಕ ವೈವಿಧ್ಯತೆಯಿಂದ ಸಂಪನ್ನತೆ - ಅಂತಾರ್ರಾಷ್ಟ್ರೀಯ ಸಮ್ಮೇಳನ ಕಾಸರಗೋಡಿನ ಬಳಿ ಕೂಡ್ಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಐ.) ಯಲ್ಲಿ ಅಕ್ಟೋಬರ್ 25 ರಿಂದ 28 ರ ತನಕ ಜರಗಲಿದೆ. ಈ ಸಮ್ಮೇಳನದ ಉದ್ಘಾಟನೆಯನ್ನು ಕೇಂದ್ರೀಯ ಕೃಷಿ ಸಹ ಮಂತ್ರಿ ಫ್ರೋ. ಕೆ. ವಿ. ಥಾಮಸ್ 25 ರ ಸಂಜೆ 5 ಗಂಟೆಗೆ ನೆರವೇರಿಸುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇರಳ ಸರಕಾರದ ಕೃಷಿ ಮಂತ್ರಿ ಮುಲ್ಲಕ್ಕರ ರತ್ನಾಕರನ್ ವಹಿಸುವರು.
ಹನ್ನೊಂದು ವಿಭಿನ್ನ ಸತ್ರಗಳಲ್ಲಿ ಜರಗುವ ಸಮ್ಮೇಳನದಲ್ಲಿ ಜೈವಿಕ ವೈವಿಧ್ಯತೆ, ಅಣುರಚನೆಯ ವಿಜ್ಞಾನ, ತಳಿ ನಿರ್ಮಾಣ, ಬೆಳೆ ನಿರ್ವಹಣೆ, ವಾತಾವರಣದ ವ್ಯತಿಯಾನ, ಶರೀರ ಕ್ರಿಯಾ ಮತ್ತು ಜೀವ ರಸಾಯನ ಶಾಸ್ತ್ರ, ರೋಗ ಕೀಟ ನಿರ್ವಹಣೆ, ಕೊಯ್ಲಿನ ನಂತರದ ತಂತ್ರಜ್ಞಾನ, ಪರ್ಯಾಯ ಉತ್ಪನ್ನಗಳು, ಮೌಲ್ಯ ವರ್ಧನೆ, ಕೃಷಿ ವಿಸ್ತರಣೆ ಮತ್ತು ಜಾಗತಿಕ ಮಾರುಕಟ್ಟೆ ವಿಚಾರಗಳಲ್ಲಿ ಪ್ರಬಂಧ ಮಂಡನೆಯನ್ನು ವಿಜ್ಞಾನಿಗಳು ಮಾಡುವರು. ಸಮ್ಮೇಳನದ ಸತ್ರಗಳಿಗೆ ಪ್ರವೇಶ ನೋಂದಾವಣೆಯ ಮೂಲಕ ಮಾತ್ರವಾಗಿದ್ದು, ನೋಂದಾವಣಾ ಶುಲ್ಕ ಕೇವಲ ರೂ ೨,೫೦೦.

ಈ ಸಮ್ಮೇಳನಕ್ಕೆ ದೇಶ - ವಿದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ. ಫಿಲಿಪ್ಪೈನ್ಸ್, ಇಂಡೊನೇಶ್ಯಾ, ಮಲೇಶ್ಯಾ, ಶ್ರೀ ಲಂಕಾ, ಬ್ರೆಝಿಲ್, ಐವರ್ ಕೋಸ್ಟ್, ಮೆಕ್ಸಿಕೋ, ಇಂಗ್ಲೆಂಡ್, ಆಸ್ಟ್ರೇಲಿಯಾ, ನೈಜೀರಿಯಾ, ಫ್ರಾನ್ಸ್, ಸ್ವಿಜರ್ಲೆಂಡ್, ಅಮೇರಿಕಾ ಮುಂತಾದ ದೇಶಗಳಿಂದ ಪ್ರಮುಖ ವಿಜ್ಞಾನಿಗಳು ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸುವರು. ತೆಂಗು ಹಾಗೂ ಆರೋಗ್ಯ, ಎಲೆಗಳಿಂದ ಸೂಕ್ಷ್ಮ ಪ್ರತ್ಯುತ್ಪಾದನಾ ಅಂಗಾಂಶ ಕಸಿ, ಸಾವಯವ ಕೃಷಿ, ಹಾಗೂ ತೆಂಗಿನ ಬೇರಿಂದ ಬರುವ ಬಾಡುವ ರೋಗ ಎಂಬ ನಾಲ್ಕು ವಿಷಯಗಳಲ್ಲಿ ಪ್ರತ್ಯೇಕ ಕಮ್ಮಟಗಳಿವೆ.

ಸಂಪನ್ಮೂಲ ಭಾಷಣಗಳು
ಮನುಷ್ಯನಿಗೆ ತಾಯಿಯ ಹಾಲಿನಷ್ಟೇ ಹಿತಕರ ತೆಂಗಿನೆಣ್ಣೆ ಎಂಬ ವಿಷಯದಲ್ಲಿ ಡಾ. ಬಿ.ಎಂ ಹೆಗ್ಡೆ, ನಿವೃತ್ತ ಕುಲಪತಿಗಳು, ಮಾಹೆ ಇವರು 25 ರ ಸಂಜೆ 4 ಗಂಟೆಗೆ ಸಂಪನ್ಮೂಲ ಭಾಷಣವನ್ನು ನೀಡುವರು. ತೆಂಗಿನ ಸಂಶೋಧನೆಯ ಹಾಗೂ ಅಭಿವೃದ್ಧಿಯ ವೈಖರಿ - ಅವಕಾಶಗಳು ಮತ್ತು ಅಡಚಣೆಗಳು ಎಂಬ ವಿಷಯದಲ್ಲಿ ಡಾ. ಹೆಚ್. ಪಿ. ಸಿಂಗ್, ಉಪ ಮಹಾ ನಿರ್ದೇಶಕರು, ತೋಟಗಾರಿಕೆ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ನವದೆಹಲಿ ಇವರು 26 ರ ಬೆಳಗ್ಗೆ 9 ಗಂಟೆಗೆ ಸಂಪನ್ಮೂಲ ಭಾಷಣ ನೀಡುವರು. ತೆಂಗಿನಲ್ಲಿ ಬಹೂಪಯೋಗೀ ತಯಾರಿಕೆಗೆ ಉತ್ತೇಜನ ಹಾಗೂ ಸಾಧಕತೆಯ ಕುರಿತಾದ ಸಂಪನ್ಮೂಲ ಭಾಷಣವನ್ನು ಕೇರಳ ಕೃಷಿ ವಿಶ್ವವಿದ್ಯಾಲಯ, ತ್ರಿಶೂರು ಇದರ ಕುಲಪತಿಗಳಾದ ಕೆ.ಆರ್. ವಿಶ್ವಂಭರನ್, ಐ.ಎ.ಯಸ್. 27 ರ ಬೆಳಗ್ಗೆ 9 ಗಂಟೆಗೆ ನೀಡುವರು.

0 comments:

Post a Comment