ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:59 PM

ಒಲವಿನ ಓಲೆ . . .

Posted by ekanasu

ಸಾಹಿತ್ಯ

ಬೇಕೆಂದಾಗಲೆಲ್ಲಾ ಬರೆಯಲಾಗುವುದಿಲ್ಲ
ಬೇಕೆಂದಾಗ ಬರೆಯದಿರಲೂ ಆಗುವುದಿಲ್ಲ
ಕಳೆದ ನಮ್ಮಿಬ್ಬರ ಅವಿಸ್ಮರಣೀಯ ಕ್ಷಣಗಳು
ಅದೇ ನಮ್ಮಿಬ್ಬರ ಪ್ರೀತಿ ಕವನ

ನಾ ಬರೆವೆನು ಮನದಾಳದ ನೆನಪುಗಳ
ಆ ನಿನ್ನ ಮೊದಲ ಮಾತುಗಳು
ಆ ನಿನ್ನ ಮೊದಲ ಸ್ಪರ್ಶ
ಅದೇ ನನ್ನ ಜೀವನದ ಚೈತನ್ಯಗಳು
ಎದೆಯೆಂಬ ಭುವಿಯಲಿ
ಮನಸೆಂಬ ಮನದಂಗಳದಿ
ಹರುಷದಾ ಪ್ರೀತಿಧಾರೆ ಸುರಿದೆ
ಪ್ರೀತಿಯಾ ಕುಸುಮವ ಚೆಲ್ಲಿದೆ

ಗೆಳತಿ ಅಂದೇ ನಾ ನಿರ್ಧರಿಸಿದೆನು
ನೀ ನನ್ನ ಬಾಳಲ್ಲಿ ಪ್ರೀತಿಯ ಒಲುಮೆ
ನೀ ನನ್ನ ಬಾಳಲ್ಲಿ ಪ್ರೀತಿಯ ಚಿಲುಮೆ
ಮುಂದೆ ನೀ ನನ್ನ ಅರ್ಧಾಂಗಿ...

ಶ್ಯಾಮ ಪ್ರಸಾದ್
ಉಪನ್ಯಾಸಕ,
ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು.

1 comments:

Anonymous said...

ಚೆನ್ನಾಗಿದೆ

Post a Comment