ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನುಡಿಸಿರಿ
ಧರ್ಮ ಅಂದರೇನು ಕಡೆಗೂ? ನನಗೆ ಕಾಣುವುದು ಒಂದೇ. ಅದು ಮಾತೃತ್ವದ ಧರ್ಮ. ಧರ್ಮದ ರೂಪವೆ ಹೆಂಗರುಳು. ಉಳಿದೆಲ್ಲವೂ ಪುರುಷಕಟ್ಟಿದ ಅವಾಂತರಗಳು ಹೀಗೆಂದವರು ನುಡಿಸಿರಿ ಅಧ್ಯಕ್ಷೆ ವೈದೇಹಿ.

ಆಳ್ವಾಸ್ ನುಡಿಸಿರಿ 2010 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾತೃತ್ವದ ಧರ್ಮ ಎಂದೆ. ಪುರುಷರಲ್ಲೂ ಮಹಿಳೆಯರಲ್ಲೂ ನೆಲೆಸಿರುವಂಥದು ಅದು. ಕರುಣೆ ಪ್ರೀತಿ ದಯೆ ಅದರ ಲಕ್ಷಣ. ಯೇಸು, ಪೈಗಂಬರ ಗಾಂಧಿ ಬಸವಣ್ಣ ನಾರಾಯಣಗುರು ಎಲ್ಲರೂ ಹೆಂಗರುಳಿನಿಂದ ಜಗತ್ತು ಅರಿತವರು. ಗಾಂಧಿ ಯಾರೊಂದಿಗೂ ತಾಯಿಯಂತೆಯೇ ಜಗಳ ಕಾದರು ಹೊರತು ದಾಯಾದಿಯಂತಲ್ಲ. ಯಾವುದೇ ಮಾನವ ನಿರ್ಮಿತ ಧರ್ಮ ನಿಲ್ಲುವುದು ಇಂಥ ಹೆಂಗರುಳಿನ ಚೇತನರಿಂದ ಚಿಮ್ಮುವ ಪ್ರೀತಿಯಿಂದ. ಅವರ ನಡೆ ನುಡಿ ಕೃತಿ ಆಕೃತಿ ಎಲ್ಲಕೂ ಲೋಕಪ್ರೀತಿಯೇ ಆಧಾರ ಶ್ರುತಿ ಆಗಿರುವುದರಿಂದ.ಆದರೆ ಮಾತೃತ್ವವನ್ನು ಪೂರ್ತಿ ಮಹಿಳಾಲೋಕಕ್ಕೇ ಗುತ್ತಿಗೆ ಕೊಟ್ಟಂತೆ, ತಾವು ಭಾವಲೋಕವನ್ನು ದಾಟಿದ ವ್ಯವಹಾರಲೋಕಸ್ಥರಂತೆ ಭಾವಿಸಿಕೊಂಡ ಮಂದಿ ಧರ್ಮವನ್ನು ಅನುಕೂಲಾರ್ಥ ಮಾಡಿ ಅದಕ್ಕೆ ಸಂಕೇತ ಸೂತ್ರ ಇತ್ಯಾದಿಗಳಿಂದ ಸಂಕೀರ್ಣ ಮಾಡಿ ಎಟುಕದಷ್ಟು ಎತ್ತರದಲ್ಲಿಟ್ಟರು. ಎಂತಲೇ ಯುಗಪುರುಷರು ಅನುಭಾವಿಗಳು ಅನುಭವಸ್ಥರು ಮತ್ತೆ ಮತ್ತೆ ಧರ್ಮದ ಪುನರ್ ವ್ಯಾಖ್ಯಾನ ಮಾಡಬೇಕಾಯ್ತು. - ದಯವೇ ಧರ್ಮದ ಮೂಲವಯ್ಯಾ, ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ ಎಂದು ಮುಂತಾಗಿ ಜನಭಾಷೆಯಲ್ಲಿ ವಿವರಿಸಬೇಕಾಯ್ತು.
ಛಂದಸ್ಸು ಗಿಂದಸ್ಸು ಎಲ್ಲ ಕಲಿತೂ ನುಡಿಪುಂಜಗಳಲ್ಲಿ ಸ್ಪಂದನವೇ ಇಲ್ಲವಾದರೆ ಧರ್ಮ ಗ್ರಂಥಗಳನ್ನೆಲ್ಲ ಓದಿ ಪಾರಂಗತರಾದರೂ ಜ್ಞಾನವೆಂಬುದು ಅಂಗೈ ಮೇಲಿನ ನೆಲ್ಲಿಕಾಯಿಯಂತೆ ಕರಗತವಾದರೂ ಒಳಗೊಂದು ಪ್ರೇಮದ ದೀಪ ಹಚ್ಚಿಕೊಳ್ಳದೆ ಹೋದರೆ, ಖಾಲಿ ಲಾಟೀನು ಹಿಡಿದು, ಕತ್ತಲಲ್ಲಿ ಹೊರಟ ಪಯಣಿಗನಂತಾದೇವು ಅಲ್ಲವೆ?
ಧರ್ಮದ ಮೂಲದ ಸರಳ ನಿಯಮದಲ್ಲಿ ಜಾತ್ಯಾತೀತ ನ್ಯಾಯದಲ್ಲಿ ನಂಬಿಕೆ ಇರುವವರೆಲ್ಲ ಇವತ್ತು ಒಂದಾಗಬೇಕಾಗಿದೆ. ಈ ದೇಶದ ಅಸಂಖ್ಯಾತ ಸಜ್ಜನರಿಗೆ ಇದು ಸಾಧ್ವವಾಗದಿದ್ದರೆ ದೇಶ ಒಡೆದು ಹೋಗಲಿದೆ. ( ಪಿ. ಲಂಕೇಶ್.)
ನಮಗೀಗ ಒಗ್ಗೂಡಿಸುವ ಧೋರಣೆ ಬೇಕು, ಛಿದ್ರಗಳಿಸುವ ಧೋರಣೆ ಅಲ್ಲ. ಈ ಸ್ಪಧರ್ಾತ್ಮಕ ಯುಗದಲ್ಲಿ ಸ್ಪರ್ಧೆಯ ಸವಾಲನ್ನು ಎದುರಿಸಿ, ಧೋರಣೆಯೊಂದಿಗೆ ರಾಜಿ ಮಾಡಿಕೊಳ್ಳದೆ ಜನಮನ ಕಟ್ಟುವ ಕೆಲಸ ಮಾಧ್ಯಮಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಜವಾಬ್ದಾರಿಯಿಂದ ಆಗಬೇಕು. ಸಮಾಜದ ನಾಡಿಬಡಿತವನ್ನು ಹಿಡಿತದಲ್ಲಿಡುವ ಮಹತ್ವದ ಸ್ಥಾನದಲ್ಲಿರುವ ಮಾಧ್ಯಮಗಳು, ಕಲಾವಿದರು, ಲೇಖಕರು ಎಲ್ಲರೂ ಎಂದಿಲ್ಲದ ಹೊಣೆಯಿಂದ ನಡೆದುಕೊಳ್ಳಬೇಕಾದ ಸಂದರ್ಭ ಇದು. ಅವರು ಮತ್ತೆ ಮತ್ತೆ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಹೆಜ್ಜೆ ಇಡಬೇಕಾದ ಕಾಲಘಟ್ಟ ಎಂದರು.

0 comments:

Post a Comment