ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಎಣ್ಣೆಹೊಳೆ(ಕಾರ್ಕಳ) : ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟಗಳು ಅಕ್ಟೋಬರ್ 9 ಮತ್ತು 10 ರಂದು ಎಣ್ಣೆಹೊಳೆಯ ರಾಧಾನಾಯಕ್ ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು ಅಂತಿಮ ಸಿದ್ದತೆಗಳು ನಡೆಯುತ್ತಿವೆ.ಉಡುಪಿ ಮೈಸೂರು ವಿಭಾಗದ 8 ಜಿಲ್ಲೆಗಳ 32 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದು ಮೈಸೂರು, ಚಾಮರಾಜನಗರ, ಮತ್ತು ಮಂಡ್ಯ ತಂಡಗಳು ಮುಂಜಾನೆ 10 ರ ಹೊತ್ತಿಗೆ ಆಗಮಿಸಿದ್ದು ಉಳಿದ ತಂಡಗಳು ಕ್ರೀಡಾಂಗಣದತ್ತ ಈಗಾಗಲೇ ಪ್ರಯಾಣ ಬೆಳೆಸಿವೆ.ಹತ್ತಿರದ ಜಿಲ್ಲಾತಂಡಗಳು ಶನಿವಾರ ಬೆಳಗ್ಗೆ ಆಗಮಿಸಲಿವೆ. ದಕ್ಷಿಣಕನ್ನಡ, ಉಡುಪಿ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳು ಈ ವಿಭಾಗ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸುತ್ತಿವೆ.
ಉಡುಪಿ ಜಿಲ್ಲಾ ಆಡಳಿತ , ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಧಾನಾಯಕ್ ಎಜುಕೇಷನ್ ಟ್ರಸ್ಟ್ (ರಿ) ಎಣ್ಣೆಹೊಳೆ ಸಂಯುಕ್ತವಾಗಿ ಈ ಪಂದ್ಯಾಟವನ್ನು ಸಂಯೋಜಿಸಿವೆ.
ಉದ್ಘಾಟನೆ: ಶನಿವಾರ ಮಧ್ಯಾಹ್ನ 2.00 ಗಂಟೆಗೆ ಉದ್ಘಾಟನೆಯನ್ನು ನೆರವೇರಿಸಲು ಸಚಿವರಾದ ಡಾ.ವಿ.ಎಸ್. ಆಚಾರ್ಯ ಅವರು ಆಹ್ವಾನಿತರಾಗಿದ್ದಾರೆ. ಅಧ್ಯಕ್ಷತೆ ವಹಿಸಲು ಕಾರ್ಕಳ ಶಾಸಕ ಎಚ್. ಗೋಪಾಲ ಭಂಡಾರಿ, ವಂದನೆ ಸ್ವೀಕರಿಸಲು ಲೋಕಸಭೆ ಸದಸ್ಯ ಡಿ.ವಿ. ಸದಾನಂದ ಗೌಡ ಆಹ್ವಾನಿತರಾಗಿದ್ದಾರೆ. ಶಾಸಕರು, ಲೋಕಸಭೆ ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಆಹ್ವಾನಿತರಾಗಿದ್ದಾರೆ. ಭಾನುವಾರ ಸಂಜೆ 3.00ಕ್ಕೆ ಸಮಾರೋಪ, ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ರಾಧಾನಾಯಕ್ ಎಜುಕೇಶನ್ ಟ್ರಸ್ಟ್ನ ಗೌರವಾಧ್ಯಕ್ಷ, ಬಿ. ದಯಾ ನಾಯಕ್ ಅವರ ಅಧ್ಯಕ್ಷತೆಯಲ್ಲಿನ ಸ್ವಾಗತ ಸಮಿತಿಯು ಸರಕಾರಿ ಅಧಿಕಾರಿಗಳನ್ನು ಒಳಗೊಂಡು ಪಂದ್ಯಾಟದ ಯಶಸ್ವಿಗಾಗಿ ಸಿದ್ದತೆ ನಡೆಯುತ್ತಿದೆ. ಹದಿಮೂರು ಸಮಿತಿಗಳು ಪಂದ್ಯಾಟದ ಯಶಸ್ವಿಗಾಗಿ ಶ್ರಮಿಸುತ್ತಿದ್ದು ಶುಕ್ರವಾರ ಮುಂಜಾವಿನಿಂದಲೇ ಶಾಲಾ ಆವರಣದಲ್ಲಿ ತಮ್ಮ ತಮ್ಮ ತಯಾರಿಯಲ್ಲಿವೆ.


ಈ ಹಿಂದೆ 2005 ರಲ್ಲಿ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾಲಿಬಾಲ್ ಪಂದ್ಯಾಟಗಳು ದಯಾನಾಯಕ್ ಅವರ ನೇತೃತ್ವದಲ್ಲಿ ಇದೇ ಸ್ಥಳದಲ್ಲಿ ಬಹಳ ಅದ್ಧೂರಿಯಾಗಿ ನಡೆದಿತ್ತು. ಖ್ಯಾತ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ, ಚಿತ್ರನಟ ಸುಧೀಪ್ ಸಹಿತ ಅನೇಕರು ಈ ಸುಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇಬಲ್ ಜಾಲದಲಲ್ಲಿ ಉಭಯ ಜಿಲ್ಲೆಗಳಲ್ಲಿ ಈ ಪಂದ್ಯಾಟದ ನೇರ ಪ್ರಸಾರ ವಿಶೇಷ ಗಮನ ಸೆಳೆದಿತ್ತು.
ಈ ಮೈದಾನ ಬಾಲಿವುಡ್ ಸಾಮ್ರಾಟ ಅಮಿತಾಬ್ ಬಚ್ಚನ್, ಜನಪ್ರಿಯ ನಟರಾದ ಸುನೀಲ್ ಶೆಟ್ಟಿ, ಸಂಜಯ್ದತ್ತ್ ಸೇರಿದಂತೆ ಗಣ್ಯಾತಿ ಗಣ್ಯರು ನಡೆದಾಡಿದ ಸ್ಥಳವಾಗಿದೆ.
ಎಣ್ಣೆಹೊಳೆ ಎಲ್ಲಿ?
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ, ಕಾರ್ಕಳ ಆಗುಂಬೆ ರಸ್ತೆಯಲ್ಲಿ 11 ಕೀ.ಮೀ. ದೂರ, ಉಡುಪಿಯಿಂದ 36 ಕಿ.ಮೀ., ಮಂಗಳೂರಿನಿಂದ 56 ಕಿ.ಮೀ, ಧರ್ಮಸ್ಥಳದಿಂದ 65 ಕಿ.ಮೀ., ಹೆಬ್ರಿಯಿಂದ 22 ಕಿ. ಮೀ ದೂರದಲ್ಲಿದೆ. ಎಣ್ಣೆಹೊಳೆ ಪೇಟೆಯಿಂದ ಉತ್ತರಕ್ಕೆ 1.2 ಕಿ. ಮೀ ದೂರದಲ್ಲಿ ರಾಧಾನಾಯಕ್ ಸರಕಾರಿ ಪ್ರೌಢ ಶಾಲೆ ಇದೆ. ನವೀಕರಣಗೊಳ್ಳುತ್ತಿರುವ ವಿಸ್ತೃತ ಮೈದಾನದಲ್ಲಿ ಕ್ರೀಡಾ ಸ್ಪೂರ್ತಿಯ ಪಂದ್ಯಾಟಗಳು ಮೈದಳೆಯಲಿವೆ. ಜಿಲ್ಲಾಮಟ್ಟದಲ್ಲಿ ಮಿಂಚಿ ಗೆದ್ದ ತಂಡಗಳಿಗೆ ರಾಜ್ಯ ಮಟ್ಟಕ್ಕೆ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಇದು ವೇದಿಕೆಯಾಗಿದೆ. ವಿವಿಧ ಜಿಲ್ಲೆಗಳ ತರಬೇತುದಾರರು ಮತ್ತು ದೈಹಿಕ ಶಿಕ್ಷಣಾಧಿಕಾರಿಗಳು ತಮ್ಮ ತಂಡಗಳ ಗೆಲುವಿಗಾಗಿ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಸಿದ್ದತೆಯಲ್ಲಿ ಕಳೆದ ಕೆಲವು ದಿನಗಳಿಂದ ಸಮಿತಿಯ ಪುಷ್ಪರಾಜ್ ಹೆಗ್ಡೆ, ರಾಮಕೃಷ್ಣ ಹೆಗ್ಡೆ, ಡಾಲ್ಫಿ ಕ್ವಾಡ್ರಸ್, ಜಯರಾಜ್ ಹೆಗ್ಡೆ , ಮಾಧವ ಉಪಾದ್ಯಾಯ, ಶೇಖರ ಅಜೆಕಾರು, ಶಾಲೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ವೃಂದವು ಕಾರ್ಯನಿರತವಾಗಿದೆ.500 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಪೆಂಡಾಲ್ ನಿರ್ಮಿಸಲಾಗಿದೆ. ಹೊನಲು ಬೆಳಕಿನ ಪಂದ್ಯಾಟಗಳಿಗಾಗಿ ಬೆಳಕಿನ ವ್ಯವಸ್ತೆಯನ್ನು ಮಾಡಲಾಗಿದೆ. ಹೊನಲು ಬೆಳಕಿನ ಪಂದ್ಯಾಟಗಳಿಗಾಗಿ ಬೆಳಕಿನ ವ್ಯವಸ್ತೆಯನ್ನು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಮತ್ತು ಪಂದ್ಯಾಟ ನಿರ್ವಹಣೆಗಾಗಿ ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಲಾಗಿದೆ. ಕ್ರೀಡಾಳುಗಳ ಅನುಕೂಲತೆಗೆ ದಾಖಲಾತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಸವರಾಜ್ ನೇತೃತ್ವದಲ್ಲಿ ಶಿಕ್ಷಕರಾದ ಸದಾನಂದ ನಾಯಕ್, ರಾಮದಾಸ್ ನಾಯಕ್, ಕಾಳಿದಾಸ್ ಮೊದಲಾದವರು ಸಹಕರಿಸುತ್ತಿದ್ದಾರೆ.

ಅಡುಗೆ ಸಿದ್ದತೆ:
ಅತಿಥಿಗಳಿಗೆ, ಭಾಗವಹಿಸುವ ಕ್ರೀಡಾಪಟುಗಳಿಗೆ ತರಬೇತುದಾರರಿಗೆ ಸುಗ್ರಾಸ ಜೈನ ಶೈಲಿಯ ಊಟೋಪಚಾರ ನೀಡಲು ರಾಜೇಂದ್ರ, ಗುಡ್ಡಣ್ಣರ ನೇತೃತ್ವದ 8 ಮಂದಿ ಪಾಕ ಪ್ರವೀಣರ ತಂಡ ಶುಕ್ರವಾರದಿಂದಲೇ ಕಾರ್ಯಪ್ರವೃತ್ತರಾಗಿದ್ದು ತರಾವರಿ ಸಿಹಿ, ಪಾಯಸ ಸಹಿತ ಊಟದ ಸಿದ್ದತೆಯಲ್ಲಿ ತೊಡಗಿದ್ದಾರೆ.

ವರದಿ: ಶೇಖರ ಅಜೆಕಾರು
ಚಿತ್ರ:ಸಂತೋಷ್ ಎಣ್ಣೆಹೊಳೆ


0 comments:

Post a Comment