ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು:ಪ್ರಾಕೃತಿಕವಾಗಿ ಹಲವು ಸಾಮ್ಯತೆಗಳನ್ನು ಹೊಂದಿರುವ ಕರಾವಳೀ ತೀರದ ನಗರಗಳಾದ ಮಂಗಳೂರು ಮತ್ತು ಕೆನಡಾ ಬ್ರೀಟಿಷ್ ಕೊಲಂಬಿ ಯಾದ ಡೆಲ್ಟಾ ನಗರ ಪಾಲಿಕೆ ನಡುವೆ ಭಾಂದವ್ಯ ಸೇರಿದಂತೆ ಸಮಗ್ರ ಅಭಿವೃದ್ಧಿ ಕುರಿತ ಒಪ್ಪಂದಕ್ಕೆ ಇಂದು ಮಹಾ ನಗರ ಪಾಲಿಕೆಯಲ್ಲಿ ನಡೆದ ಸಮಾ ರಂಭದಲ್ಲಿ ಎರಡು ನಗರಗಳ ಮೇಯರ್ ಗಳಾದ ರಜನಿ ದುಗ್ಗಣ್ಣ ಮತ್ತು ಲೂಯಿ ಜಾಕ್ಸನ್ ಅವರು ಸಹಿ ಹಾಕಿದರು.ನಗರಗಳ ಆರ್ಥಿಕ ಅಭಿವೃದ್ಧಿ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅದರಲ್ಲೂ ಮುಖ್ಯವಾಗಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಎರಡು ನಗರಗಳು ಒಪ್ಪಂದಕ್ಕೆ ಸಹಿಹಾಕಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾದ ಡಾ.ಕೆ.ಎನ್. ವಿಜಯಪ್ರಕಾಶ್, ಡೆಲ್ಟಾ ಪಾಲಿಕೆಯ ಅಭಿವೃದ್ಧಿ ಅಧಿಕಾರಿ ಗಳಾದ ಜಾರ್ಜ್ ವಿ. ಹಾರ್ವಿ ಅವರು ಪರಸ್ಪರ ಎರಡು ನಗರಗಳ ಅಭಿವೃದ್ಧಿ ನಕಾಶೆ ಹಾಗೂ ಚರಿತ್ರೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿ ಕೊಂಡರು.ವ್ಯವಸ್ಥಾಪಕ ಅಧಿಕಾರಿ ಮನ್ಜೀತ್ ಕೈಲ್,ಪಾಲಿಕೆ ಉಪ ಮೇಯರ್ ರಾಜೇಂದ್ರ ಕುಮಾರ್, ವಿಪಕ್ಷ ನಾಯಕ ಅಶೋಕ್, ಪಾಲಿಕೆ ಯ ಸದಸ್ಯರು ಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಮಂಗಳೂರು ಪಾಲಿಕೆಯ ಈ ಐತಿಹಾಸಿಕ ಆರಂಭಿಕ ಹೆಜ್ಜೆಗೆ ಸಾಕ್ಷಿ ಯಾದರು.

0 comments:

Post a Comment