ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು:ಸರ್ಕಾರ ಸುಭದ್ರವಾಗಿದ್ದು,ನಾಡಿನ ಅಭಿವೃದ್ಧಿಗೆ ಇನ್ನಷ್ಟು ಸಶಕ್ತವಾಗಿ ಕೆಲಸ ಮಾಡುವ ವಿಶ್ವಾಸವನ್ನು ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವ್ಯಕ್ತಪಡಿಸಿದರು.ಅವರಿಂದು ಮುಂಜಾನೆ ಕೇರಳದ ಕಣ್ಣೂರಿನ ತಳಿ ಪರಂಬದ ಶ್ರೀ ರಾಜ ರಾಜೇಶ್ವರಿ ದೇವ ಸ್ಥಾನ ಮತ್ತು ಮಡಂಕಾವು ಶ್ರೀ ಭಗವತಿ ದೇವಾ ಲಯ ಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಸಂದರ್ಭ ದಲ್ಲಿ ಮಂಗಳೂರು ವಿಮಾನ ನಿಲ್ದಾಣ ದಕ್ಕೆ ಆಗಮಿಸಿ ಸುದ್ದಿಗಾರ ರೊಂದಿಗೆ ಮಾತ ನಾಡುತ್ತಿದ್ದರು.
ತಮ್ಮ ಸರ್ಕಾರಕ್ಕೆ ಅಭಿವೃದ್ಧಿ ಪರ ಶಾಸಕರ ಬೆಂಬಲದ ಭರವಸೆ ಇದೆ.ಹಾಗಾಗಿ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಈ ಶಾಸಕರ ಬೆಂಬಲ ದಿಂದ ತಾವು ಇನ್ನಷ್ಟು ಶಕ್ತಿ ಯೊಂದಿಗೆ ಗೆದ್ದು ಬರುವ ವಿಶ್ವಾಸವನ್ನು ವ್ಯಕ್ತ ಪಡಿಸಿದರು. ಸ್ವಾತಂತ್ರ್ಯ ಬಂದ ಬಳಿಕ ಪ್ರಥಮ ಬಾರಿಗೆ ತಮ್ಮ ನೇತೃತ್ವದ ಸರ್ಕಾರ ಎರಡೂವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಆಡಳಿತ ವಿರೋಧಿ ವಾತಾ ವರಣ ದಲ್ಲೂ ಸಾಕಷ್ಟು ಕೆಲಸ ವಾಗಿದೆ. ಡಿಸಿಡೆಂಟ್ ಚಟುವಟಿಕೆ ಗಳಿಗೆ ಇದೇ ಕೊನೆ. ಯಾರೆಲ್ಲ ಇಂತಹ ಚಟುವಟಿಕೆ ಯಲ್ಲಿ ಪಾಲ್ಗೊಂಡಿ ದ್ದಾರೋ ಅವರ ವಿರುದ್ಧ ಕ್ರಮ ಖಚಿತ. ಜನರ ತೀರ್ಮಾನ ಗೌರವಿಸಲು ಸಂಜೆಯ ವರೆಗೂ ಇಂತಹ ಶಾಸಕ ರಿಗೆ ಅವಕಾ ಶವಿದೆ. ಪರಿಸ್ಥಿತಿ ಯನ್ನು ನಿಭಾ ಯಿಸಲು ಹೈಕ ಮಾಂಡ್ ಸಂಪೂರ್ಣ ಅಧಿಕಾರ ತಮಗೆ ನೀಡಿದೆ. ಭೂ ಹಗರಣ ಆರೋಪ ನಿವಾರಿಸಲು ಡಿನೋ ಟಿಫೈ ಸಂಬಂಧ ಯಾವುದೇ ಗೊಂದಲ ನಿವಾ ರಿಸಲು ಇನ್ನು ಮುಂದೆ ಇಂತಹ ಕಡತಗಳ ಪರಿ ಶೀಲನೆಗೆ ಮುಖ್ಯ ಕಾರ್ಯ ದರ್ಶಿಗಳ ಅಧ್ಯಕ್ಷತೆಯಲ್ಲಿ 3 ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಇವರ ನಿರ್ದಾರದ ಬಳಿಕ ಸಹಿ ಹಾಕಲು ನಿನ್ನೆ ಸಂಜೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂದೆ ಎರಡೂವರೆ ವರ್ಷದ ಬಳಿಕ ಬಿಜೆಪಿಗೆ ಸಂಪೂರ್ಣ ಬಹುಮತ ನೀಡು ವಂತಾಗಲಿ ಪ್ರಜಾ ಪ್ರಭುಗಳು. ಸಂಪೂರ್ಣ ಬಹುಮತದಿಂದ ಸರ್ಕಾರಗಳು ಆಯ್ಕೆಯಾದರೆ ತಮ್ಮ ಸರ್ಕಾರ ಪ್ರಸಕ್ತ ಎದುರಿಸಿ ದಂತಹ ಸಮಸ್ಯೆಗಳು ಉದ್ಭವ ವಾಗುವುದಿಲ್ಲ ಎಂದರು. ಸದ್ಯಕ್ಕೆ ನಾಯ ಕತ್ವ ಬದಲಾವಣೆ ಇಲ್ಲ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.ಸಂಸ ದರಾದ ನಳಿನ್ ಕುಮಾರ್ ಕಟೀಲ್,ರಾಘ ವೇಂದ್ರ,ಸಚಿವ ರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಮ ಚಂದ್ರ ಗೌಡ,ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಐಜಿಪಿ ಅಲೋಕ್ ಮೋಹನ್,ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ,ನಗರ ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

0 comments:

Post a Comment