ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಉಡುಪಿ : ಹ್ವಾಯ್ ನಿಮಗೆ ಗೊತ್ತೀತಾ.. ಮಾರಾಯ್ರೇ. ನಮ್ಮೂರು ಹುಡುಗಿ ಚಿನ್ನಾಗೆದ್ಲಂಬ್ರಲೇ! ಕುಂದಾಪುರ ತಾಲೂಕಿನಾದ್ಯಂತ ಪ್ರಸಕ್ತ ಕೇಳಿ ಬರುತ್ತಿರುವ ಹೆಮ್ಮಯ ಮಾತಿನ ಒರಸೆಯ ಸಣ್ಣ ಚಿತ್ರಣ ಅಷ್ಟೇ ಇದು. ರಾತ್ರಿ ಬೆಳಗಾಗೋದ್ರೊಳಗೆ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡುಬಿಟ್ಟಿದೆ ಜನ್ಸಾಲೆ ಎಂಬ ಪುಟ್ಟ ಊರು.

ಈ ಕೊಡುಗೆ ಹಿಂದೆ ಹಳ್ಳಿಯಿಂದ ಡಿಲ್ಲಿಗೆ ಓಡಿದ ಅಪ್ಪಟ `ಕುಂದಗನ್ನಡ' ಹುಡುಗಿಯ ಸಾಹಸದ ಓಟದ ಗಾಥೆಯಿದೆ. `ಕಾಮನ್ವೆಲ್ತ್' ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕುಂದಾಪುರ ತಾಲೂಕು ಸಿದ್ದಾಪುರ ಸಮೀಪದ ಜನ್ನಾಲೆ ಎಂಬ ಪುಟ್ಟ ಊರಿನತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ನಿನ್ನೆ ವೊನ್ನೆ ದೆಹಲಿಯಲ್ಲಿ ನಡೆದ 4x400 ಮೀಟರ್ `ರಿಲೆ ' ಓಟದಲ್ಲಿ ಭರತೆಕ್ಕೆ ಚಿನ್ನ ಸಿಕ್ತಲ್ಲಾ ಅದರಲ್ಲಿ ಮೂರನೆಯವರಾಗಿ ಓಡಿದ ಆಶ್ವಿನಿ ಚಿದಂಬರ್ ಅವರು `ಜನ್ಸಾಲೆ'ಯವರು ಎಂಬುದು ಎಷ್ಟೋ ಜನಕ್ಕೆ ಗೊತ್ತೇಯಿರಲಿಲ್ಲ! ಈ ಹುಡುಗಿ ಚಿನ್ನ ಗೆದ್ಲು ನೋಡಿ ಕುಂದಾಪುರ ತಾಲೂಕಿನ ನಾಗರಿಕರಿಗೆ ತಮ್ಮ ಮನೆ ಮಗಳು ಚಿನ್ನಗೆದ್ದ್ದು ತಂದಷ್ಟು `ಹ್ಯಾಪಿ'ಯಾಗಿದ್ದಾರೆ. ಎಲ್ಲರಿಗೂ ಒಂದು ರೀತಿ ರೋಮಾಂಚನ. ನಮ್ಮ ಅಕ್ಕಪಕ್ಕದಲ್ಲೇ ಇಂಥಹದ್ದೊಂದು ಪ್ರತಿಭೆ ಇದೆ ಎನ್ನೋದೇ ಗೊತ್ತಿರಲಿಲ್ಲವಲ್ಲಾ ಎಂಬ ಕೊರಗು. ಏನಾದರೂ ಆಗಲಿ ಚಿನ್ನಗೆದ್ದ ಹುಡುಗೀಗೆ `ಒಳ್ಳೇದಾಯ್ಕು' ಅಂತ ಕುಂದಾಪುರ ನಾಗರಿಕರ ಬಾಯಿಂದ `ಕುಂದಗನ್ನಡ'ದಲ್ಲಿ ಹೊರಡುತ್ತಿರುವ ಅಂತರಾಳದ `ಸಿಂಪಲ್' ಮಾತುಗಳಿವು.
ಓಟ ಹೀಗುತ್ತು : ಕಾಮನ್ವೆಲ್ತ್ ಫೈನಲ್ ಎಲ್ಲರ ಕಣ್ಣು ಭರತ ತಂಡದ ಮೇಲಿತ್ತು. ಪೈನಲ್ ಪ್ರವೇಶಿಸಿದ ಮಹಿಳೆಯರ ರಿಲೇ ತಂಡದಿಂದ ಭರತಕ್ಕ್ಕೆಪದಕದ `ಗ್ಯಾರೆಂಟಿ'ಯಿತ್ತು. ಅದರೆ ಚಿನ್ನ ದಕ್ಕಬೇಕು ಎನ್ನುವುದು ಕೋಟಿ ಕೋಟಿ ಭರತೀಯರ ಆಸೆಯಾಗಿತ್ತು. ಹಾಗಾಗಿ ಕ್ರೀಡಾ ಪ್ರೇಮಿಗಳು ಉಸಿರು ಬಿಗಿ ಹಿಡಿದು ಟಿವಿ ಮುಂದೆ ಕೂತಿದ್ದರು.

ಮಹಿಳೆಯ 4x400 ರಿಲೇ ತಂಡದಲ್ಲಿ ಮಂದೀಪ್ ಕೌರ್, ಸಿನಿ ಜೋಸ್, ಅಶ್ವಿನಿ ಚಿದಾನಂದ ಮತ್ತು ಮಂಜಿತ್ ಕೌರ್ ಇದ್ದರು.
ಓಟಕ್ಕೆ ಆರಂಭ ಕೊಟ್ಟಿದ್ದು ಮಂದೀಪ್ ಕೌರ್, ನಂತರ ದಾಂಡು ಹೊಡಿದು ಓಡಿದವರು ಸಿನಿ ಜೋಸ್. ಆಶ್ವಿನಿ ಅವರಿಗೆ ಸಿನಿ ಜೋಸ್ ರಿಲೇ ದಾಂಡು ನೀಡಿವಷ್ಟರಲ್ಲಿ 10 ಮೀಟರ್ ಹಿಂದಕ್ಕೆ ಬಿದ್ದಿದ್ದರು. ಟಿವಿ ವೀಕ್ಷಕರಲ್ಲಿ `ಬ್ಲಡ್ಪ್ಲಸರ್' ಏರಿದ್ದೇ ಆಗ! ಭರಕ್ಕೆ ಚಿನ್ನ ಕೈತಪ್ಪಿತು ಅಂತಾನೇ ಭವಿಸಿದ್ದರು. ಆದರೆ ಬಹುಜನರ ನಿರೀಕ್ಷೆ ಹುಸಿ ಮಾಡಲಿಲ್ಲ ಅಶ್ವಿನಿ ಉಗಾಂಡ ಮತ್ತು ನೈಜೇರಿಯಾದ ಓಟಗಾರ್ತಿಯರನ್ನು ಹಿಂದಕ್ಕಿಕ್ಕಿ ಅಶ್ವಿನಿ ತಮ್ಮ ಓಟ ನಿಲ್ಲಿಸಿದರು. ಮುಂದೆ ಮಂಜಿತ್ ಕೌರ್ ಯಶಸ್ವಿ ಓಟ ಮುಗಿಸಿ ಭರತದ ಕಿರೀಟಕ್ಕೆ ಚಿನ್ನದ `ಮೆಡಲ್' ಸಿಕ್ಕಿಸಿದರು.
ಸೆಮಿಪೈನಲ್ನಲ್ಲಿ ಅಶ್ವಿನಿ ಕೊನೆಯರಾಗಿ ಓಡುವ ಮೂಲಕ ಅಂತಿಮಹಂತಕ್ಕೆ ಭರತದ ವನಿತೆಯರ ತಂಡವನ್ನು ಮುಟ್ಟಿಸಿದ್ದರು. ಇವರ ಓಟದ ತಾಕತ್ತು ಗೊತ್ತಿದ್ದೇ ಇವರನ್ನು ಪೈನಲ್ನಲ್ಲಿ ಮೂರನೆಯನವರಾಗಿ ಓಡಿಸಲು ಕಾರಣವಾಯತು. ಮೂರನೇ ಹಂತದಲ್ಲಿ ಒಂದಿಷ್ಟು ಲೀಡ್ ತಂದುಕೊಟ್ಟರೆ ಕೊನೆಯ ಓಟಗಾರ್ತಿಗೆ ಗುರಿ ಮುಟ್ಟಲು ಸಾಧ್ಯ ಎಂಬುದೇ ಆಗಿತ್ತು. ಅಶ್ವಿನಿ ಬಾಕಿಯಾಗಿದ್ದ ಹಿನ್ನೆಡೆ ಪೂರೈಸಿ ಒಂದು ಮೂಟರ್ನಷ್ಟು ಮುನ್ನೆಡೆ ಕೊಟ್ಟಿದ್ದರಿಂದ ಭರತದ ಮಹಿಳೆಯರು ಇತಿಹಾಸ ಬರೆಯಲು ಸಾಧ್ಯವಾಯಿತು ಎನ್ನತ್ತಾರೆ ಕ್ರೀಡಾಭಿಮಾನಿಗಳು.

ಪರಿಚಯ ಹೀಗಿದೆ : ನಕ್ಸಲ್ ಪೀಡಿತ ಪ್ರದೇಶ ಮತ್ತು ಕಮಲಿಶಿಲೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹಿನ್ನೆಯಲ್ಲಿ ಪ್ರಸಿದ್ದಿಗೆ ಬಂದ ಕಮಲಶಿಲೆ ಸಮೀಪದಲ್ಲಿ ಜನ್ಸಾಲೆ ಬರುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ಬಾಳೆಬರೆ ಘಾಟಿ ಕಾಲಲ್ಲಿ ಜನ್ಸಾಲೆಯಿದೆ ಎಂದರೆ ತಪ್ಪಲ್ಲ. ಹಳ್ಳಿಯೆಂದರೆ ಹಳ್ಳಿ ಮೂಲೆಯಲ್ಲಿಯ ಕೃಷಿಕ ಕುಟುಂಬದಲ್ಲಿ ಆ.7,1987ರಲ್ಲಿ ಆಶ್ವಿನಿ ಜನನವಾಯಿತು. ತಂದೆ ಚಿದಾನಂದ ಶೆಟ್ಟಿ ಶುದ್ಧ ಕೃಷಿಕರು. ತಾಯಿ ಯಶೋಧಾ ಶೆಟ್ಟಿ `ಹೌಸ್ ವೈಪ್' ಮೂವರ ಕುಟುಂಬದಲ್ಲಿ ಓಟದ ರಾಣಿ ಅಶ್ವಿನಿ `ಲಾಸ್ಟ್' ಓಟದಲ್ಲಿ `ಫಸ್ಟ್'
ತಂದೆ, ತಾಯಿ ಇಬ್ಬರಿಗೂ ಓಟದ ಗೀಳಿತ್ತು.ಇವರ ತಾಯಿ ಎಂಟು ಮತ್ತು ಒಂಬತ್ತನೇ ತರಗತಿಯಲ್ಲಿ ಓಟದ `ಛಾಂಪಿಯನ್' ಆಗಿದ್ದರು. ತಂದೆ ಚಿದಾನಂದ ಶೆಟ್ಟಿ ಅವರು ಶಾಲೆಯಲ್ಲಿ ಓದಿನೊಟ್ಟಿಗೆ, ಓಟಕ್ಕೂ ಸೈ ಎನ್ನುತ್ತಿದ್ದರು. ತಮ್ಮಿಬ್ಬರ ಆಸೆಯನ್ನು ಮಗಳರೂಪದಲ್ಲಿ ಈಡೇರಿಸಿಕೊಂಡಿದ್ದಾರೆ. ಮಗಳ ಸಾಧನೆ ಕಂಡು ಅಶ್ವಿನಿ ಕುಂಟುಂಬದಲ್ಲಿ ಹಬ್ಬದ ವಾತಾವರಣ ಮೂಡಿದೆ.
ಇವರ ಅಕ್ಕ ದೀಪ್ತಿ ಶಂಕರನಾರಾಯಣ ಕಾಲೇಜ್ನಲ್ಲಿ ಲೆಚ್ಚರ್. ಅಣ್ಣ ಅಮಿತ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯಮಿ.ಇದಿಷ್ಟು ಅಶ್ವಿನಿ ಅವರ `ಬ್ಯಾಕ್ ಸ್ಟೋರಿ'
ಹೊಸಂಗಂಡಿ ಶಾಲೆಯಿಂದ ಡೆಲ್ಲಿ ವರೆಗೆ : ಮಗಳಲ್ಲಿ ಓಟದಲ್ಲಿದ್ದ ಸಕ್ತಿಯನ್ನು ಪೋಷಕರು ಬೆನ್ನುತಟ್ಟಿ ಹುರಿದುಂಬಿಸಿದರು. ಹೊಸಂಗಡಿ ಕೆಪಿಸಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗಿನ ವಿದ್ಯಾಭ್ಯಸ ಪೂರೈಸಿದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅಶ್ವಿನಿ `ಚಿಗುರೆ'ಯಂತೆ ಓಡುತ್ತಿದ್ದರು. ಶಾಲೆ ಓಟದ ಸ್ಪರ್ಧೇಯಲ್ಲಿ ಅಶ್ವಿನಿಗೆ ಪ್ರತಿಸ್ಪಧರ್ಿಗಳೆೇ ಇರಲಿಲ್ಲ. ಇವಳದ್ದು ಪ್ರತೀ ವರ್ಷ ಪ್ರಥಮದ ಸಾಧನೆ.
ಅಶ್ವಿನಿ ಬೆಂಗಳೂರು ಕ್ರಿಡಾ ಶಾಲೆಯಲ್ಲಿ ಎಸ್ಸೆಸ್ಎಲ್ಸಿ ಮುಗಿಸಿದಳು. ಪ್ರೌಢ ಶಿಕ್ಷಣ ಪಡೆಯುತ್ತಿರು ವಾಗಲೇ `ನ್ಯಾಷನಲ್ ಲೆವಲ್' ಓಟಗಾರ್ತಿಯಾಗದ್ದಳು. ಕೊಲ್ಕತ್ತದಲ್ಲಿ ನಡೆದ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದರು. ಇವರ ಓಟದ ಶಕ್ತಿ ಗುರುತಿಸಿದ ಮಂಜುನಾಥ್ ಇವರಿಗೆ `ಕೋಚ್' ಆಗಬಂದರು. ಮಂಜುನಾಥ ಅವರು ಅಶ್ವಿನಿ ಅವರಿಗೆ ಹತ್ತು ವರ್ಷ ಕೋಚ್ ಆಗಿ ಕೆಲಸಮಾಡಿದ್ದಾರೆ. ಪ್ರಸಕ್ತ ರಷ್ಯಾ ದೇಶದ ಕೋಚ್ ಯೂಕ್ರೀನ್ ಎಂಬವರು ಅಶ್ವಿನಿ ವೇಗಕ್ಕೆ ಹೊಸ ಹದ ಬೆರೆಸುತ್ತಿದ್ದಾರೆ.
ಅಶ್ವಿನಿ ಅವರ ಕೋಚ್ ಮಂಜುನಾಥ್ ಅವರು ಹತ್ತು ವರ್ಷದ ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಈಕೆಯಲ್ಲಿ ಸಾಮಥ್ರ್ಯವಿದೆ ಒಂದೆಲ್ಲಾ ಒಂದು ದಿನ ಈಕೆ ಭರತಕ್ಕೆ ಪದಕ ತರುತ್ತಾಳೆ ಎಂದಿದ್ದರು.
ಗುರಿ ಚೀನಾದತ್ತ : ಮುಂದಿನ ದಿನದಲ್ಲಿ ಚೀನಾದಲ್ಲಿ ನಡೆಯವ ಕ್ರಿಡಾ ಕೂಟದಲ್ಲಿ ಪದಕ ಗೆಲ್ಲುವ ಗುರುಯೊಟ್ಟಿಗೆ ಎರಡು ವರ್ಷದ ನಂತರ ನಡೆಯುವ ಒಲಂಪಿಕ್ಸ್ನಲ್ಲಿ ಪದಕ ಗಳಸುವ ಮಹತ್ವಾಕಾಂಕ್ಷೆ ಅಶ್ವಿನಿ ಅವರಲ್ಲಿದೆ. ದೆಹಲಿಯಲ್ಲಿ ಸಿಕ್ಕ ಪದಕ ಇವರಿಗೆ ಮತ್ತಷ್ಟು ಉಮೇದು ತಂದಿದೆ.
ಅಶ್ವಿನಿ ಬರೇ ರಿಲೇ ಓಟಕ್ಕಷ್ಟೇ ಸೀಮಿತವಲ್ಲ. ಕಾಮನ್ವೆಲ್ತ್ ಕ್ರಿಡಾಕೂಟದಲ್ಲಿ `ಹಲ್ಡ್ಸರ್್' ಓಟವನ್ನು ಐದನೆಯವರಾಗಿ ಮುಗಿಸಿದ್ದಾರೆ. ಇವರಿಗೆ ಹರ್ಡಲ್ಸ್`ಪೇವರೇಟ್' ಕೂಡಾ ಹೌದು. ಇವರು ಬರೇ ಓಟಕ್ಕಷ್ಟೆ ಸೀಮಿತವಲ್ಲ. ಓದಿನಲ್ಲೂ ಮುಂದಿದ್ದಾರೆ. ಇದರೊಟ್ಟಿಗೆ ಇವರು ಒಳ್ಳೆ `ಡ್ಯಾನ್ಸರ್' ಕೂಡಾ ಹೌದು. `ಯೋಗ' ಮತ್ತೊಂದು ಹವ್ಯಾಸ.
ಗ್ರಾಮೀಣ ಪ್ರದೇಶದ ಯುವತಿಯರಲ್ಲಿ ಹೆಚ್ಚಿನ ತಾಕತ್ತಿದೆ. ಅವರಿಗೆ `ಟ್ರೈನಿಂಗ್' ಕೊಟ್ಟರೆ ಅವರು ಕಂಡಿತಾ ಉತ್ತಮ ಕ್ರೀಡಾಳುಗಳಾಗುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಯುವತಿಯರ ಸಹಾಯಕ್ಕೆ ಬರಲು ಅಶ್ವ್ವಿನಿ ಯೋಚಿಸುತ್ತಿದ್ದಾರೆ. ಇಂದಿನ ಯಶಸ್ಸಿಗೆ ದೇವರ ದಯ ಮತ್ತು ತಂದೆ, ತಾಯಿಗಳ ಆಶೀರ್ವಾದ ಕಾರಣ ಎನ್ನುತ್ತಾಳೆ ಅಶ್ವಿನಿ. ಈಕೆ ಮೂಡುಬಿದ್ರೆ ಆಳ್ವ್ವಾಸ್ ಕಾಲೇಜು ಹಳೆ ವಿದ್ಯಾರ್ಥಿ. ಚೀನಕ್ಕೆ ತೆರಳುಲು ಸಜ್ಜಾಗಿತ್ತಿರುವ ಅಶ್ವಿನಿಗೆ ಕ್ರೀಡಾಭಿಮಾನಿಗಳಿಂದ `ಬೆಸ್ಟ್ಆಫ್ಲಕ್' ಅಂದಹಾಗೆ ಅಶ್ವಿನಿ ರೈಲ್ವೆ ಉದ್ಯೋಗಿ.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment