ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಪುತ್ತೂರು: ಮುಂದಿನ ಎರಡು ವರ್ಷದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಇದರ ಜೊತೆಗೆ ರಾಜ್ಯದ ಪ್ರತೀ ತಾಲೂಕುಗಳನ್ನು ವಿದ್ಯುತ್ ಸ್ವಾವಲಂಬನೆಗೆ ಉತ್ತೇಜನ ನೀಡಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಪುತ್ತೂರು ತಾಲೂಕಿನ ಸವಣೂರಿನಲ್ಲಿ ನೂತನವಾಗಿ ಸಬ್ಸ್ಟೇಶನ್ ನಿಮರ್ಾಣ ಕಾರ್ಯಕ್ಕೆ ಸ್ಥಳಪರಿಶೀಲನೆ ನಡೆಸಿದ ಬಳಿಕ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ.ಆದರೆ ಅದಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯಗುತ್ತಿಲ್ಲವಾದ್ದರಿಂದ ಪ್ರತೀ ದಿನ ವಿವಿದ ಕಡೆಗಳಿಂದ 1500 ಮೆಗಾವ್ಯಾಟ್ ವಿದ್ಯುತ್ ಖರೀಸಲಾಗುತ್ತದೆ.ಅದರ ದರವೂ ಕೂಡಾ ಪ್ರತೀ ಕ್ಷಣವೂ ವ್ಯತ್ಯಾಸವಾಗುತ್ತಿರುತ್ತದೆ ಎಂದ ಶೋಭಾ ಕರಂದ್ಲಾಜೆ ಈ ಬಾರಿ ಜಲಾಶಯಗಳೂ ಶೇಕಡಾ 66 ರಷ್ಟು ಮಾತ್ರಾ ಭರ್ತಿಯಾಗಿವೆ.ಹಾಗಾಗಿ ಸದ್ಯ ಇತ ಮೂಲಗಳಿಂದಲೇ ವಿದ್ಯುತ್ ಖರೀಸಿ ಜಲಾಶಯದ ನೀರನ್ನು ಉಳಿಸಿಕೊಳ್ಳಲಾಗಿದೆ.ಈಗಾಗಲೇ ಜಲವಿದ್ಯುತ್ ಯೋಜನೆಗಳಿಂದ 25 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಖಾಸಗೀ ಕಂಪನಿಗಳನ್ನು ಆಹ್ವಾನ ಮಾಡಲಾಗುವುದು ಎಂದರು.ಸದ್ಯಕ್ಕೆ ಪ್ರಸರಣದ ನಷ್ಠವನ್ನು ನಿವಾರಿಸುವ ಬಗ್ಗೆ ಗಮನಹರಿಸಲಾಗುವುದು. ಸದ್ಯ ರಾಜ್ಯದಲ್ಲಿ ಶೇಕಡಾ 22 ರಷ್ಟು ಪ್ರಸರಣ ನಷ್ಠವಿದೆ. ಸದ್ಯಕ್ಕೆ ಈ ನಷ್ಠವನ್ನು ಶೇಕಡಾ 20 ಕ್ಕೆ ಇಳಿಸಿ ಮುಂದಿನ 2 ವರ್ಷದಲ್ಲಿ 15 ಶೇಕಡಾ ಇಳಿಸುವುದಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಇದರಿಂದಾಗಿ 500 ಮೆಗಾವ್ಯಾಟ್ ವಿದ್ಯುತ್ ರಾಜ್ಯಕ್ಕೆ ಉಳಿತಾಯವಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.ಇದರ ಜೊತೆಗೆ ಎಲ್ಲಾ ಬಳಕೆದಾರರು ಎಲ್ಇಡಿ ಹಾಗೂ ಸಿಎಫ್ಎಲ್ ಬಳಸುವುದರಿಂದ ಬಳಕೆದಾರರಿಗೂ ಉಳಿತಾಯವಾಗುವುದರ ಜೊತೆಗೆ ರಾಜ್ಯದ ಬೊಕ್ಕಸಕ್ಕೂ ಉಳಿತಾಯವಾಗುವುದು ಎಂದರು.

ಈ ಸಂದರ್ಭದಲ್ಲಿ ಮೆಸ್ಕಾಂ ಎಂಡಿ ಸುಮಂತ್ , ಅಭಿಯಂತರರುಗಳಾದ ನಾರಾಯಣ ಪೂಜಾರಿ , ರೋಹಿತ್ , ರಾಜೇಶ್ ,ಜಿಲ್ಲಾ ಪಂಚಾಯತ್ ಸದಸ್ಯ ಶಿವಣ್ಣ ಗೌಡ , ತಾಲೂಕು ಪಂಚಾಯತ್ ಸದಸ್ಯೆ ಪ್ರಮಿಳಾ , ಗ್ರಾಮಪಂಚಾಯತ್ ಅಧ್ಯಕ್ಷೆ ಸುಧಾ , ಸ್ಥಳೀಯರಾದ ಸವಣೂರು ಸೀತಾರಮಾ ರೈ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯುತ್ ದೋಷ ಸರಿಪಡಿಸಲು ಗ್ರಾಮ ಮಟ್ಟದ ಸಮಿತಿ :

ಗ್ರಾಮಮಟ್ಟದಲ್ಲಿ ವಿದ್ಯುತ್ ದೋಷ ಸರಿಪಡಿಸಲು ಸ್ಥಳೀಯ ಗ್ರಾಮಪಂಚಾಯತ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಇದರ ಮೂಲಕ ಇಡೀ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಸದ್ಯಕ್ಕೆ ಶೇಕಡಾ 50 ರಷ್ಟು ಮೆಸ್ಕಾಂ ಸಿಬ್ಬಂದಿಗಳ ಕೊರತೆ ಇರುವುದನ್ನು ಸದ್ಯದಲ್ಲೇ ಭತರ್ಿ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ 26,161 ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಾಗಿಲ್ಲ ಇದರಲ್ಲಿ 20430 ಬಿಪಿಎಲ್ ಕುಟುಂಬಗಳು ಸೇರಿವೆ.ಇವರಿಗೆಲ್ಲಾ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದು ಇದೇ ವೇಳೆ ಶೋಭಾ ಹೇಳಿದವರು.


ಬಿಜೆಪಿ ಶಾಸಕರಿಗೆ ಮತ್ತು ಬರಿಸುವ ಔಷಧಿ ಕೊಟ್ಟು ಖರೀದಿಸಿದವರ್ಯಾರು ? ಶೋಭಾ ಪ್ರಶ್ನೆ

ಯಾವುದೇ ಕಾರಣಕ್ಕೂ ಬಿಜೆಪಿ ಯಾವುದೇ ಶಾಸಕರನ್ನು ಖರೀದಿ ಮಾಡುತ್ತಿಲ್ಲ.ಅವರಾಗಿಯೇ ಬರುತ್ತಿದ್ದಾರೆ. ಆದರೆ ಬಿಜೆಪಿ ಶಾಸಕರನ್ನು ಖರೀದಿ ಮಾಡಿ ಅವರಿಗೆ ಮತ್ತು ಬರಿಸುವ ಔಷಧಿ ಕೊಟ್ಟು ಗೋವಾ , ಚೆನ್ನೈ ರೆಸಾರ್ಟ್ ಗಳಿಗೆ ಸುತ್ತಾಡಿದವರ್ಯಾರು ?. ಆದರೆ ಜನರ ಮುಂದೆ ಬಿಜೆಪಿಯವರೇ ಕಳ್ಳರು ಎಂದು ಹೇಳುತ್ತಿದ್ದಾರೆ.ಜನ ಇದನ್ನು ಗಮನಿಸಬೇಕಲು ಎಂದ ಶೋಭಾ ಕರಂದ್ಲಾಜೆ ಅಷ್ಟಕ್ಕೂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ರೆಸಾರ್ಟ್ ಗೆ ಹೋಗಿ ಬಿಜೆಪಿ ಶಾಸಕರ ಬಳಿ ಏನು ಕೆಲಸ? ಇದೆನ್ನೆಲ್ಲಾ ರಾಜ್ಯದ ಜನ ಗಮನಿಸಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ವರದಿ: ಮಹೇಶ್ ಪುಚ್ಚಪ್ಪಾಡಿ

0 comments:

Post a Comment