ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವವನ್ನು ನಡೆಸಲುದ್ದೇಶಿಸಿದ್ದು, ವಿವಿಧ ಕಲಾ ಪ್ರಕಾರಗಳಡಿ, ಬಾಲಪ್ರತಿಭೆ, ಯುವ ಪ್ರತಿಭೆಗಳಿಗೆ ಮತ್ತು ಮಹಿಳೆಯರಿಗೆ ಹಾಗೂ ಸಮೂಹ ಕಲಾ ಪ್ರತಿಭೆಗಳಿಂದ ಸ್ಪರ್ಧಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಸ್ಪರ್ಧೆಗಳನ್ನು ಗಣಪತಿ ಪದವಿಪೂರ್ವ ಕಾಲೇಜಿನ ಶಾರದ ಸದನದಲ್ಲಿ ಅಕ್ಟೋಬರ್ 22 ಮತ್ತು 23ರಂದು ಆಯೋಜಿಸ ಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಸ್ಪರ್ಧೆಗಳು ಬಿಳಿ ಹಾಳೆಯಲ್ಲಿ ಸ್ವ ವಿವರ ಬರೆದು, ವಯಸ್ಸಿನ ದಾಖಲೆಗಳೊಂದಿಗೆ ಅಕ್ಟೋಬರ್ 18ರೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನತಾ ಬಜಾರ್ 2ನೇ ಮಹಡಿ ಹಂಪನಕಟ್ಟೆ, ಮಂಗಳೂರು- 575 101 ಇಲ್ಲಿಗೆ ಸಲ್ಲಿಸಬಹುದು. ದೂರವಾಣಿ ಸಂಖ್ಯೆ 2441527 ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

0 comments:

Post a Comment