ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:28 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 4


`ಅವನೊಬ್ಬ ನಿಗೂಢ ವ್ಯಕ್ತಿ! ಅವನ ಕಾದಂಬರಿಗಳಲ್ಲಿ ಬರುವ ಪಾತ್ರದಂತೆ. ಕೊನೆಯವರೆಗೂ ಕುತೂಹಲವೇ ತುಂಬಿರುವಂತೆ' ಸಂದರ್ಶನ ನಡೆಸಿದ ತನ್ನದೇ ಕಛೇರಿಯ ಸಹದ್ಯೋಗಿ ಲಕ್ಷಣ ಹೇಳಿದ್ದ. ಪತ್ರಿಕೆಯನ್ನು ಮಡಚಿ ಕೆಳಗಿಟ್ಟು ಇನ್ನೊಂದು ಕಾದಂಬರಿಯನ್ನು ಕೈಗೆತ್ತಿಕೊಂಡಳು.
`ಕೊಲೆಗಾರನ ಕೊಲೆ'!
ಕೊಲೆ ಮಾಡಿದ ವ್ಯಕ್ತಿ ಕೊಲೆ ಮಾಡಲು ಹೊರಟಿರುವ ವ್ಯಕ್ತಿಯ ಕೊಲೆಯಾಗುವ ಮೊದಲು ತಾನೇ ಕೊಲೆಯಾಗಿರುತ್ತಾನೆ. ಹಾಗಾದರೆ ಆ ವ್ಯಕ್ತಿಯ ಕೊಲೆ ಮಾಡಿದವರು ಯಾರು? ಕೊಲೆಗಾರನನ್ನು ಕೊಲೆ ಮಾಡಿದವರು ಯಾರು?
ಹೀಗೆ ಎಲ್ಲಾ ಕಾದಂಬರಿಗಳನ್ನು ಓದಿದ ಬಳಿಕ ಕೊಲೆಯಾದ ಪಾತ್ರಗಳನ್ನೆಲ್ಲಾ ಟಿಪ್ಪಣಿ ಬರೆದು ಇರಿಸಿಕೊಂಡ ಸ್ವಾತಿ, ಆ ಪಾತ್ರಗಳನ್ನೆಲ್ಲಾ ಅಧ್ಯಯನ ಮಾಡಿಕೊಂಡಳು.
ಸಾಪ್ತಾಹಿಕಕ್ಕೆ ಬರವಣಿಗೆ ಸಿದ್ದವಾಯಿತು. ಆದರೆ ಕೊಲೆಯಾದವನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆಹಾಕುವುದು ಬೇಕಿತ್ತು. ಅವನು ನಿರ್ಮಿಸಿದ ಕೊಲೆಯಾದ ಪಾತ್ರಗಳೆಲ್ಲಾ ಕಣ್ಣ ಮುಂದೆ ಸುಳಿದವು. ಆ ಕೊಲೆಯಾದ ಸ್ಥಳಗಳನ್ನು, ಕೊಲೆಯಾದ ಸಮಯದಲ್ಲಿಯೇ ನೋಡಬೇಕೆನ್ನುವ ತುಡಿತ ಅವಳಿಗೆ. ಅಲ್ಲೇನಾದರು ಕುರುಹು ದೊರಕಬಹುದು.

***

ರಾತ್ರಿಯ ಗಾಢವಾದ ಮೌನದಲ್ಲಿ ಕೊಲೆಯಾದ ಪಾತ್ರಗಳೆಲ್ಲವೂ ಕಟಕಟ್ಟೆಯಲ್ಲಿ ನಿಂತು ನ್ಯಾಯ ಕೇಳುವಂತೆ ಕನಸು ಬಿತ್ತು ಸ್ವಾತಿಗೆ. ತಟ್ಟನೆ ಎಚ್ಚರವಾಯಿತು. ಎದ್ದು ಕುಳಿತವಳ ಮೈ ಮೆಲ್ಲಗೆ ಕಂಪಿಸುತ್ತಿತ್ತು. ಇದು ಭ್ರಮೆ! ಯಾರೋ ಬರೆದ ಕಾದಂಬರಿಯ ಪಾತ್ರಗಳು ಈ ರೀತಿ ಕನಸಿನಲ್ಲಿ ಕಾಡುವುದೆಂದರೆ?! ಬಾಯಿ ಒಣಗಿದಂತಾಗಿ ಎದ್ದು ಹೂಜಿಯಿಂದ ನೀರು ತೆಗೆದು ಕುಡಿದಳು.
`ನಾನು ನಿರ್ಮಿಸಿದ ಪಾತ್ರಗಳೇ ನನ್ನನ್ನು ಸಾಯಿಸುತ್ತಿವೆ' ಜೇಮ್ಸ್ ಬರೆದಿಟ್ಟ ವಾಕ್ಯ ಕಣ್ಣ ಮುಂದೆ ಸುಳಿಯಿತು.
ನೀರು ಕುಡಿದು ಚೇತರಿಸಿಕೊಂಡವಳನ್ನು ಪೂರ್ತಿಯಾಗಿ ಎಚ್ಚರಿಸಿದ್ದು ಆ ನಡು ರಾತ್ರಿಯಲ್ಲಿಯೂ ಮನೆಯ ಬಾಗಿಲು ಬಡಿದ ಸದ್ದು!!
ಹಿಂದಕ್ಕೆ ಹಾರಿ ಗೋಡೆಯ ಆಸರೆಗೆ ನಿಂತು ಮೆಲ್ಲನೆ ಕಣ್ಣುಗಳನ್ನು ಬಾಗಿಲಿನ ಸಂಧಿಗೆ ತೂರಿಸಿದಳು.
ಕೆದರಿದ ಕೂದಲು. ಸೀರೆಯ ಸೆರಗು ಕೈಯವರೆಗೂ ಇಳಿಬಿದ್ದು, ಯಾವನೋ ಚಿತ್ರ ಕಲಾವಿದನ ಕುಂಚದ ಅದ್ಭುತ ಸೃಷ್ಟಿಯಂತಹ ತೆಳು ದೇಹದ ಹುಡುಗಿಯೊಬ್ಬಳು ನಿಂತಿದ್ದಳು! ನಿಂತಿರುವುದು ಹೆಣ್ಣೆಂಬ ಧೈರ್ಯ ಮೂಡಿತು. ಬಾಗಿಲಿನ ಚಿಲಕ ತೆಗೆದು ನಿಂತಳು.
"ನನ್ನ ಪರಿಚಯವಿದೆಯಾ? ನಿಮ್ಮತ್ರ ಬಹಳ ಮುಖ್ಯವಾದ ವಿಷಯ ತಿಳಿಸ್ಬೇಕು" ಸ್ವಾತಿಯನ್ನು ತಳ್ಳಿಕೊಂಡಂತೆ ಒಳಗೆ ಬಂದ ಅವಳು ಮಂಚದ ಮೇಲೆ ಕುಳಿತಳು.
ನಿದ್ದೆ ಪೂತರ್ಿ ಹಾರಿ ಹೋಗಿದ್ದ ಹುಡುಗಿ ಬಾಗಿಲು ಮುಚ್ಚಿ ಅವಳತ್ತ ನಡೆದಳು.
"ಮೊದಲು, ನೀವು ಯಾರು ಅನ್ನೋದನ್ನು ತಿಳಿಸಿ"

ನಾಳೆಗೆ...

- ಅನು ಬೆಳ್ಳೆ.

0 comments:

Post a Comment