ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಕಾಸರಗೋಡು: ಕೃಷಿ ಮೇಳ ನಡೀತಾ ಇದೆ, ಹೋಗೋಣ ಬನ್ನಿ ಕಾಸರಗೋಡಿನ ಬಳಿ ಕೂಡ್ಲು ಸೀಪೀಸೀಆರೈಗೆ. ಅಕ್ಟೋಬರ್ ೨೫ ರಿಂದ ೨೮ ರ ತನಕ ಮೇಳ ಚಾಲೂ ಇದೆ. ಇದು ಸಾಮಾನ್ಯರಿಗೆ ಹಾಗೂ ವಿಶೇಷವಾಗಿ ಕೃಷಿಕರಿಗಾಗಿ ಆಯೋಜಿಸಲಾಗಿದ್ದು ನಿಶ್ಶುಲ್ಕ ಪ್ರವೇಶವಿದೆ. ಈ ಕೃಷಿ ಮೇಳ ಸೀಪೀಸೀಆರೈಯಲ್ಲಿ ನಡೆಸಲಾಗುವ ತೆಂಗು ವೈಶಿಷ್ಟ್ಯಗಳಿಂದ ಸಂಪನ್ನತೆ - ಅಂತಾರ್ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ ೨೫ ರಂದು ಕೇಂದ್ರೀಯ ಕೃಷಿ ಮಂತ್ರಿ ಶರದ್ ಪವಾರ್ ಉದ್ಘಾಟಿಸುವ ಸಮ್ಮೇಳನದಲ್ಲಿ ಹನ್ನೊಂದು ವಿವಿಧ ಸತ್ರಗಳಿದ್ದು - ಜೈವಿಕ ವೈವಿಧ್ಯತೆ, ಅಣುರಚನೆಯ ವಿಜ್ಞಾನ, ತಳಿ ನಿರ್ಮಾಣ, ಬೆಳೆ ನಿರ್ವಹಣೆ, ವಾತಾವರಣದ ವ್ಯತಿಯಾನ, ಶರೀರ ಕ್ರಿಯಾ ಮತ್ತು ಜೀವ ರಸಾಯನ ಶಾಸ್ತ್ರ, ರೋಗ ಕೀಟ ನಿರ್ವಹಣೆ, ಕೊಯ್ಲಿನ ನಂತರದ ತಂತ್ರಜ್ಞಾನ, ಪರ್ಯಾಯ ಉತ್ಪನ್ನಗಳು, ಮೌಲ್ಯ ವರ್ಧನೆ, ಕೃಷಿ ವಿಸ್ತರಣೆ ಮತ್ತು ಜಾಗತಿಕ ಮಾರುಕಟ್ಟೆ ವಿಚಾರಗಳಲ್ಲಿ ಪ್ರಬಂಧ ಮಂಡನೆಯನ್ನು ವಿಜ್ಞಾನಿಗಳು ಮಾಡುವರು. ಈ ಸಮ್ಮೇಳನಕ್ಕೆ ದೇಶ - ವಿದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ.ತೆಂಗು ಹಾಗೂ ಆರೋಗ್ಯ, ಎಲೆಗಳಿಂದ ಸೂಕ್ಷ್ಮ ಪ್ರತ್ಯುತ್ಪಾದನಾ ಅಂಗಾಂಶ ಕಸಿ, ಸಾವಯವ ಕೃಷಿ, ಹಾಗೂ ತೆಂಗಿನ ಬೇರಿಂದ ಬರುವ ಬಾಡುವ ರೋಗ ಎಂಬ ನಾಲ್ಕು ವಿಷಯಗಳಲ್ಲಿ ಪ್ರತ್ಯೇಕ ಕಮ್ಮಟಗಳಿವೆ.

ವರದಿ: ಎಚ್.ಮುರಳೀಕೃಷ್ಣ.

0 comments:

Post a Comment