ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘದ ವ್ಯವಹಾರವೇ ಸುಮಾರು 9 ಕೋಟಿ ರೂ. ಸ್ತ್ರೀಶಕ್ತಿ ಸಬಲೀಕರಣಗೊಳ್ಳುತ್ತಿರುವುದಕ್ಕೆ, ಸ್ತ್ರೀಯರು ಸ್ವಾವಲಂಬಿ ಗಳಾಗುತ್ತಿರುವುದಕ್ಕೆ ಇದು ಅತ್ಯುತ್ತಮ ಸಾಕ್ಷಿ ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಹೇಳಿದರು.ಅವರು ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಕೇಂದ್ರ ಸುರತ್ಕಲ್ ಇವರ ಸಂಯುಕ್ತಾಶ್ರಯದಲ್ಲಿ ಇಡ್ಯಾ ಮಹಾಲಿಂಗೇಶ್ವರ ದೇವಾಲಯ ಆವರಣದ ಸಭಾಭವನದಲ್ಲಿ ನವೆಂಬರ್ 29ರಂದು ಆಯೋಜಿಸಿದ್ದ 'ಮಹಿಳಾ ಸಬಲೀಕರಣ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.

ಮಂಗಳೂರು ಗ್ರಾಮಾಂತರ ವಲಯದಲ್ಲಿ 2002ರ ನಂತರ 860 ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಾಡಿದ ವ್ಯವಹಾರ ಸುಮಾರು 9 ಕೋಟಿ ರೂ.ಗಳು. ಮಹಿಳೆಯರು ಸಬಲೀಕರಣಗೊಳ್ಳುತ್ತಿರುವುದಕ್ಕೆ ಇದು ಸಾಕ್ಷಿ ಎಂದ ಅವರು, ಸಾಮಾಜಿಕ ಹಾಗೂ ಸರಕಾರ ನೀಡುವ ಪ್ರೋತ್ಸಾಹವನ್ನು ಸದುಪಯೋಗ ಮಾಡಿಕೊಂಡು ಮಹಿಳೆಯರು ಇನ್ನಷ್ಟು ಸಬಲರಾಗಬೇಕೆಂದರು. ಉದ್ಯೋಗಿನಿ, ಭಾಗ್ಯಲಕ್ಷ್ಮಿಯಂತಹ ಯೋಜನೆಗಳು ಹೆಣ್ಣು ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳೆಂದ ಶ್ಯಾಮಲ, ರಾಜಕೀಯವಾಗಿಯೂ ಮಹಿಳೆ ಇನ್ನಷ್ಟು ಬೆಳೆದರೆ ಮಹಿಳೆಯರ ಅಭಿವೃದ್ಧಿಗೆ ಪೂರಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜ್ಯೋತಿ ಕಾರ್ಣಿಕ್ ಅವರು, ಜ್ಞಾನ ಶಕ್ತಿಯ ಸಂಕೇತ. ಅರಿವಿನೊಂದಿಗೆ ವ್ಯಕ್ತಿತ್ವದ ಪರಿಪೂರ್ಣ ಅಭಿವೃದ್ಧಿ ಸಾಧ್ಯ ಎಂದರು. ಮಹಿಳಾ ಕೇಂದ್ರದ ಅಧ್ಯಕ್ಷರೂ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಸುಲೋಚನಾ ವಿ. ರಾವ್ ಅವರು, ಗ್ರಾಮೀಣ ಮಹಿಳೆಯರಿಗೆ ನೀಡುವ ಎಲ್ಲ ಪ್ರೋತ್ಸಾಹಗಳನ್ನು ನಗರದ ಮಹಿಳೆಯರಿಗೆ ನೀಡಬೇಕು; ಮಹಿಳಾ ಕೇಂದ್ರಗಳು ಇಂದು ಹಿಂದಿನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಸಂತೋಷವನ್ನು ವ್ಯಕ್ತಪಡಿಸಿದರಲ್ಲದೆ, ನಗರದ ಮಹಿಳೆಯರ ಸಮಸ್ಯೆಗಳ ಬಗ್ಗೆ ಸಭೆಯ ಗಮನಸೆಳೆದರು.

ಸಂಧ್ಯಾ ಕಾಮತ್ ಹಾಗೂ ಶಕುಂತಳಾ ಆರ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಕೆ. ಕಲಾವತಿ ಕಾರ್ಯಕ್ರಮ ನಿರೂಪಿಸಿದರು. ರಮಣಿ ವಂದಿಸಿದರು. ನಂತರ ಮಹಿಳಾ ಕೇಂದ್ರದ ವತಿಯಿಂದ ಸಾಂಸ್ಕೃತಿಕ ಸಪ್ತಾಹದ ಅಂಗವಾಗಿ ಸಹೋದರಿಯರಾದ ಕುಮಾರಿ ಪವಿತ್ರ ಮತ್ತು ಪಲ್ಲವಿಯವರಿಂದ ಕನರ್ಾಟಕ ಶಾಸ್ತ್ರೀಯ ಕಾರ್ಯಕ್ರಮ ನಡೆಯಿತು.

0 comments:

Post a Comment