ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು:ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಸ್ಥಳೀಯರ ನೆರವು ಪಡೆದುಕೊಳ್ಳಿ, ಗಡಿನಾಡಲ್ಲಿ ಇರುವ ಸ್ಥಳೀಯರಿಗೆ ಜಿಲ್ಲಾಡಳಿತದ ಉದ್ದೇಶವನ್ನು ವಿವರಿಸಿ ಸ್ಥಳೀಯ ಮುಖಂಡರೊಂದಿಗೆ ಸಂವಾದ ನಡೆಸಿ ಮಾಹಿತಿ ಪತ್ರಗಳನ್ನು ಹಂಚಿ ಎಂದು ಭೂವಿಜ್ಞಾನ ಮತ್ತು ಗಣಿ ಇಲಾಖೆ ಉಪನಿದರ್ೇಶಕರಿಗೆ ಜಿಲ್ಲಾಧಿಕಾರಿ ಸುಭೋದ್ ಯಾದವ್ ಹೇಳಿದರು.ಅವರಿಂದು ತಮ್ಮ ಕಚೇರಿಯ ಕೋಟ್ರ್ ಹಾಲ್ ನಲ್ಲಿ ಅಕ್ರಮ ಮರಳುಗಾರಿಕೆ ತಡೆ ಸಂಬಂದ ಪ್ರಸಕ್ತ ಸಮಸ್ಯೆ ಬಗೆಹರಿಸಲು ಕರೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರಸಕ್ತ ಅಕ್ರಮ ಮರಳು ತಡೆಗೆ ರೂಪಿತ ಕಾನೂನನ್ನು ಇನ್ನಷ್ಟು ಸಮಗ್ರವಾಗಿ ರೂಪಿಸಿ ಅನುಷ್ಠಾನಕ್ಕೆ ತರಲು ಹಾಗೂ ಗುರಿ ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.



ಗಡಿ ರಸ್ತೆಗಳಲ್ಲಿ ಈಗಾಗಲೇ ಕೈಗೊಂಡಿರುವ ಬಂದೋಬಸ್ತ್ ಮತ್ತು ಚೆಕ್ ಪೋಸ್ಟ್ ಗಳನ್ನು ಇನ್ನಷ್ಟು ಬಲಪಡಿಸಲು ಹಾಗೂ ಗಡಿಪ್ರದೇಶಗಳ ರಸ್ತೆಯಲ್ಲಿ ಹೆಚ್ಚಿನ ನಿಗಾ ಇಡಲು ಸೂಚಿಸಿದರು. ಸ್ಥಳೀಯ ಪಂಚಾಯಿತಿಗಳ, ಮುಖಂಡರ ಹಾಗೂ ಜನರ ಸಹಕಾರವನ್ನು ಗಳಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಅಸ್ಥೆ ವಹಿಸಬೇಕೆಂದು ಸೂಚಿಸಿದರು. ಮರಳು ತೆಗೆಯುವ ಪ್ರದೇಶವನ್ನು ಮತ್ತೊಮ್ಮೆ ಸರ್ವೇ ಮಾಡಿಸಿ, ಕಾನೂನು ಅನುಷ್ಠಾನಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

0 comments:

Post a Comment