ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಗ್ರ ಲೇಖನ

ಬೆತ್ತವೂ ಕೊಟ್ಟು ಬೆನ್ನೂ ತೋರಿಸಿಕೊಂಡಂತೆ...ಇದು ಇಂದಿನ ಭಾರತದ ಸ್ಥಿತಿ.ಆಫ್ರಿಕಾ ಮೂಲದ ಮೊದಲ ಅಮೆರಿಕಾ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ನಾಲ್ಕು ದಿನಗಳ ಭಾರತ ಭೇಟಿ ಇದಕ್ಕೆ ಒಂದು ನಿದರ್ಶನ. ಅಮೆರಿಕಾ ಈ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದ "ಬೆನ್ನಿಗೆ ಚೂರಿ" ಕಾರ್ಯ ಒಬಾಮಾ ಭೇಟಿ ಹೆಸರಿನಲ್ಲಿ ಮುಂದುವರಿಯಲಿದೆ. ಅದಂತೂ ಸ್ಪಷ್ಟ. ಇಷ್ಟೆಲ್ಲಾ ಇದ್ದರೂ , ಅಮೆರಿಕಾದ ಕೆಟ್ಟ ಚಾಳಿಯ ಬಗ್ಗೆ ಸಾಕಷ್ಟು ಅನುಭವಗಳಿದ್ದರೂ ಇದೀಗ ಅಮೆರಿಕಾ ಅಧ್ಯಕ್ಷರಿಗೆ "ರತ್ನಗಂಬಳಿ" ಹಾಸಿ ಸ್ವಾಗತಿಸಲಾಗಿರುವುದು ಹಾಸ್ಯಾಸ್ಪದ ವಿಚಾರವೇ ಸರಿ.
ಭಾರತದೇಶ ಅತ್ಯಂತ ಔದಾರ್ಯತೆಯನ್ನು ಹೊಂದಿದ ರಾಷ್ಟ್ರ. ಈ ಕಾರಣಕ್ಕಾಗಿಯೇ ಅನಾದಿಕಾಲದಿಂದಲೂ ಅಮೆರಿಕಾ ಸೇರಿದಂತೆ ವಿದೇಶಗಳು ಭಾರತದ ಈ ಔದಾರ್ಯತಾ ಗುಣವನ್ನು ದುರುಪಯೋಗಪಡಿಸುತ್ತಿದೆ ಎಂದರೆ ತಪ್ಪಾಗಲಾರದು. ಇದೀಗ ಅಮೆರಿಕ ತನ್ನ ಚಾಣಾಕ್ಷ್ಯತೆಯಿಂದ ಮತ್ತೊಮ್ಮೆ ಭಾರತದ ಮೇಲೆ ನೇರ ಸವಾರಿ ಮಾಡುಲಣಿಯಾಗಿದೆ ಎಂದರೆ ತಪ್ಪಾಗಲಾರದು. ಆದರೆ ಭಾರತದ ಘನ ಸರಕಾರಕ್ಕೆ ಇದ್ಯಾವುದರ ಪರಿವೆಯೇ ಇಲ್ಲವೇ? ದೊಡ್ಡಣ್ಣನ ಸ್ವಾಗತವೇ ನಮ್ಮ ಮಹಾನ್ ಭಾಗ್ಯ ಎಂಬಂತೆ ಸರಕಾರ ನಡೆಯುತ್ತಿರುವುದು ಇಡೀ ಸಮಸ್ತ ಭಾರತೀಯರಿಗೆ ನಾಚಿಗೆಯುಂಟಾಗುವಂತಾಗಿದೆ.
ಭಾರತದ ಮೇಲಿನ ಪ್ರೀತಿ ಎಂಬ ನಾಟಕವಾಡಿ ದೇಶಕ್ಕೆ ಮಹಾನ್ ಕೊಡುಗೆ ಕೊಡುತ್ತೇವೆ ಎಂಬಂತೆ ಫೋಸ್ ನೀಡುತ್ತಿದೆ. ಭಾರತ ಭೇಟಿಗೂ ಮೊದಲೇ ಒಬಾಮಾ ಸ್ಪಷ್ಟಪಡಿಸಿದ್ದೇನೆಂದರೆ ಅಮೆರಿಕಾದ ರಫ್ತಿಗೆ ಅನುಗುಣವಾಗುವಂತೆ ಭಾರತದ ಮಾರುಕಟ್ಟೆಯನ್ನು ವಿಶಾಲವಾಗಿಸಿಕೊಳ್ಳುವುದು ಹಾಗೂ ಭಾರತೀಯರಿಂದ ಅಮೆರಿಕಾದಲ್ಲಿ ಉದ್ಯೋಗ ಸೃಷ್ಟಿ ಮಾಡುವಂತಹ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿಯೂ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನಾಗಿಸುವ ಮತ್ತು ಇಂಧನ ದ್ವಿಬಳಕೆಗೆ ಇರುವ ನಿರ್ಬಂಧ ವಾಪಾಸ್ ಪಡೆಯುವ ಕುರಿತಂತೆ ಒಬಾಮಾ ಯಾವುದೇ ರೀತಿಯಲ್ಲೂ ಬದ್ಧತೆಯನ್ನು ವ್ಯಕ್ತಪಡಿಸದಿರುವುದು ಗಮನಾರ್ಹ ಸಂಗತಿ. ಇಷ್ಟೇ ಅಲ್ಲದೆ ಭಯೋತ್ಪಾದನಾ ವಿಚಾರದಲ್ಲೂ ಅಮೆರಿಕಾದ ಸಹಕಾರವು ಕೇವಲ ಅಫಘಾನಿಸ್ಥಾನ ಕೇಂದ್ರಿತವಾಗಿದೆ ಎಂಬುದು ಸಹ ಅಷ್ಟೇ ಮಹತ್ವದ್ದು. ಭಾರತ ತನ್ನ ಜಾಗತಿಕ ಪಾಲುದಾರ ದೇಶ ಎಂದು ಹೇಳುತ್ತಿರುವ ಒಬಾಮಾ ಭಾರತದ ಹೊರಗುತ್ತಿಗೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದಾರೆ. ಪ್ರಸ್ತುತ ವಿರೋಧಿಸುತ್ತಿದ್ದಾರೆ. ಎಚ್.1 ಬಿ ವೀಸಾವನ್ನು ಕಡಿತಗೊಳಿಸಿದ್ದೂ ಸಹ ಮತ್ತೊಂದು ವಿಚಾರ. ಒಬಾಮಾಗೆ ಕೇವಲ ಈ ದೇಶದ ಬಗ್ಗೆ "ವಾಕ್ ಬಾಂಧವ್ಯ" ಮಾತ್ರ ಎಂಬುದು ಸ್ಪಷ್ಟ. ಒಬಾಮಾ ಭೇಟಿಗೆ ದೇಶ ಇಷ್ಟೊಂದು ರೀತಿಯಲ್ಲಿ ವ್ಯವಸ್ಥೆಗೊಳಿಸುತ್ತಿರುವಾಗ ಒಬಾಮಾ ಮಾತ್ರ ದೇಶಕ್ಕೆ ಏನು ಲಾಭ ಮಾಡಿದ್ದಾರೆ, ಅಥವಾ ಮಾಡುತ್ತಾರೆ ಎಂಬುದನ್ನು ರಾಷ್ಟ್ರವಾಳುವ ಸರಕಾರ ಚಿಂತಿಸಬೇಕಾಗಿದೆ.
ಭಾರತ ಜಾಗತಿಕಮಟ್ಟದಲ್ಲಿ ಪ್ರವರ್ಧಮಾನವಾಗಿ ಬೆಳೆಯುತ್ತಿದೆ. ಆದರೆ ಅಮೆರಿಕಾ ಭಾರತದ ಬೆಳವಣಿಗೆಯಿಂದ ಒಂದಷ್ಟರಮಟ್ಟಿಗೆ ಧಿಗ್ಭ್ರಮೆಗೊಳ್ಳುತ್ತಿದೆ. ಭಾರತವನ್ನು ಹೀಗೇ ಬಿಟ್ಟರೆ ಮುಂದೊಂದು ದಿನ ಭಾರತ ಅದೇ ಸೂಪರ್ ಪವರ್ ರಾಷ್ಟ್ರವಾದರೆ ತೊಂದರೆಯುಂಟಾಗದಿರದೆಂಬ ಭಾವನೆಯೂ ಇಲ್ಲದಿಲ್ಲ. ಒಟ್ಟಿನಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರಕ್ಕೆ ಭಾರತ ಬಲಿಷ್ಠಗೊಳ್ಳುತ್ತಿರುವ ಬಗೆಗಿನ ಭೀತಿ ಬಿಡದೆ ಕಾಡುತ್ತಿದೆ .
ಒಂದೇ ಒಂದು ಜಿಜ್ಞಾಸೆ... ಬಲಿಷ್ಠರಾಷ್ಟ್ರ ಅಮೆರಿಕಾದ ಅಧ್ಯಕ್ಷ ಬರಾಕ್ ಹುಸೇನ ಒಬಾಮಾ ಭಾರತಕ್ಕಾಗಮಿಸುತ್ತಿದ್ದಾರೆ. ಅವರು ಬರಲಿ. ಆದರೆ ದೇಶ ಅವರ ಆಗಮನಕ್ಕಾಗಿ ಎಷ್ಟೊಂದು ಕಾಳಜಿ ವಹಿಸಬೇಕೇ..? ನಮ್ಮ ದೇಶದ ಪ್ರತಿನಿಧಿಗಳು, ಪ್ರಧಾನಿಗಳು ಅತ್ತ ಸಾಗಿದರೆ ಈ ರೀತಿಯ ಭದ್ರತೆ ಅಲ್ಲಿ ಲಭ್ಯವೇ? ಅಥವಾ ಈ ಮಟ್ಟಿಗೆ ಅದೊಂದು ಸುದ್ದಿಯಾಗುತ್ತಿದೆಯೇ...? ಅಥವಾ ಆ ರೀತಿಯ "ಮಯರ್ಾದೆ" ಪ್ರಾಪ್ತವಾಗುತ್ತಿದೆಯೇ..? " ಎಂಬುದು ಮೊದಲ ಪ್ರಶ್ನೆಯಾದರೆ ; ಮೊತ್ತೊಂದಡೆ ಈ ದೇಶ ಎಷ್ಟೊಂದು ತೊಂದರೆಯನ್ನನು ಭವಿಸುತ್ತಿದೆ ಎಂಬುದು ಅತ್ಯಂತ ಸೂಕ್ಷ್ಮವಾಗಿ ಚಿಂತಿಸಬೇಕಾದ ವಿಚಾರ. ಒಬಾಮಾ ಆಗಮನಕ್ಕೆ ದೇಶದಲ್ಲೂ ಸಾಕಷ್ಟು ರೀತಿಯ ಭದ್ರತೆ ಏಪರ್ಾಡಾಗಿದೆ. ಒಬಾಮಾ ಭದ್ರತೆಗಾಗಿ ಅಮೆರಿಕಾದಿಂದ ಎರಡು ಜೊತೆ ಜೆಟ್ ವಿಮಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಪರಿಕರಗಳನ್ನು , 40 ವಿಶೇಷ ಕಾರುಗಳನ್ನು ತರಲಾಗುತ್ತಿದೆ. ಈಗಾಗಲೇ ತಾಜ್ ಹೋಟೆಲ್ ನ 800ಕೊಠಡಿಗಳನ್ನು ಒಬಾಮಾ ಹಾಗೂ ಅವರ ಸಿಬ್ಬಂದಿಗಳಿಗಾಗಿ ಕಾದಿಡಲಾಗಿದೆ. ಭದ್ರತೆಗಾಗಿ ಅಮೆರಿಕಾದಿಂದಲೇ ಸಿಬ್ಬಂದಿಗಳು ಆಗಮಿಸಿದ್ದಾರೆ. ದಿಲ್ಲಿಯಲ್ಲೂ ಸಾಕಷ್ಟು ಭದ್ರತೆ ಕೈಗೊಳ್ಳಲಾಗಿದೆ. ಇಲೈಟ್ ಸೀಕ್ರೆಟ್ ಸರ್ವೀಸ್ ಭದ್ರತೆ ಹಾಗೂ ರಕ್ಷಣಾ ಉಸ್ತುವಾರಿಯ ಹೊಣೆ ಹೊತ್ತಿದೆ. ಎಸ್ ಎಸ್ ಜಿ ಮತ್ತು ಕೇಂದ್ರೀಯ ಮೀಸಲು ಪೊಲೀಸರೂ ಸಹ ಭದ್ರತೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯುದ್ಧ ವಿಮಾನಗಳು, 34 ಯುದ್ಧ ಹಡಗುಗಳು ಅಧ್ಯಕ್ಷರ ಭದ್ರತೆ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಿದೆ. ಇದೆಲ್ಲವೂ ಸಹ ಅಮೆರಿಕಾದ ಅಧ್ಯಕ್ಷರ ಆಗಮನಕ್ಕಾಗಿ ಭಾರತದ ನೆಲದಲ್ಲಿ ಮಾಡಲಾದ ಭದ್ರೆತೆ.ಅದೂ ಅಮೆರಿಕಾದಿಂದ ಕರೆತರಲಾದ ಸಿಬ್ಬಂದಿಗಳು ಈ ನೆಲದಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆ. ಅಂದರೆ ಸಂಪೂರ್ಣ ಭಾರತದಲ್ಲಿ ವಿದೇಶೀ ಅಧ್ಯಕ್ಷನ ಸವಾರಿ ಎಂದರೆ ತಪ್ಪೇನು...? ಇಷ್ಟೊಂದು ಸರ್ವ ಸಿದ್ಧವಾಗಿ ಭಾರತದ ಮೇಲೆ ಈ ಅಧ್ಯಕ್ಷ ಬಂದಿಳಿಯುವುದು ಎಂದರೆ ಏನರ್ಥ... ? ಭಾರತದ ಮೇಲೆ ಸಂಪೂರ್ಣವಾಗಿ ತಮ್ಮ ಸಾಮಥ್ರ್ಯ ಪ್ರದರ್ಶನವಲ್ಲದೆ ಇನ್ನೇನು... ? ಇದಕ್ಕೆ ನಮ್ಮ ದೇಶದ ಮಾಧ್ಯಮಗಳ ಸರ್ವ ರೀತಿಯ ಪ್ರೋತ್ಸಾಹವೂ ದೊರಕುತ್ತಿವೆ. ಮಾಧ್ಯಮಗಳು ಒಬಾಮಾ ಆಗಮನದ ಬಗ್ಗೆ ಸಾಕಷ್ಟು ನೇರ ವರದಿಗಳನ್ನು ನೀಡಿ ವೈಭವೀಕರಿಸುತ್ತಿವೆ. ಪುಟಗಟ್ಟಲೆ ವರದಿಗಳನ್ನು ಮುದ್ರಣ ಮಾಧ್ಯಮಗಳು ನೀಡುತ್ತಿವೆ. ಮುಖಪುಟದಲ್ಲಿ ಒಬಾಮಾ ಆಗಮನಕ್ಕಾಗಿ ವಿಶೇಷ ವರದಿಗಳು, ಅಗ್ರ ಲೇಖನಗಳನ್ನು ವರದಿಮಾಡುತ್ತಿವೆ.
ಇನ್ನೂ ಒಂದು ಹಾಸ್ಯಾಸ್ಪದ ಸಂಗತಿಯೆಂದರೆ ವಿದೇಶೀ ಅಧ್ಯಕ್ಷರ ಆಗಮನಕ್ಕಾಗಿ ದೇಶೀಯ ಮುಖ್ಯಮಂತ್ರಿಯೋರ್ವರಲ್ಲೇ ಗುರುತು ಚೀಟಿ ಕೇಳುವ ಹಾಸ್ಯಾಸ್ಪದ ಪ್ರಸಂಗ!. ಇದೇ ರೀತಿ ದೇಶವನ್ನಾಳುವ ಸರಕಾರಗಳು ಆಗಂತುಕರಿಗೆ ಮಣೆ ಹಾಕುತ್ತಾ ಸಾಗಿದರೆ "ಮತ್ತೊಮ್ಮೆ ಭಾರತ ವಿದೇಶೀ ದಾಸ್ಯಕ್ಕೊಳಗಾಗುವುದರಲ್ಲಿ " ಸಂದೇಹವಿಲ್ಲ.

ಹರೀಶ್ ಕೆ.ಆದೂರು

0 comments:

Post a Comment