ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಕೇರಳದ ಕಣ್ಣೂರು ವಿ.ವಿ.ಯಲ್ಲಿ ಜರಗುತ್ತಿರುವ ಅಖಿಲ ಭಾರತ ಅಂತರ್ ವಿವಿ. ದೇಹದರ್ಾಢ್ಯ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅನಿಲ್ ಚಿನ್ನದ ಪದಕದೊಂದಿಗೆ ಪ್ರತಿಷ್ಠಿತ ಮಿ| ಅಖಿಲ ಭಾರತ ವಿ.ವಿ. ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಪುರುಷರ 65 ಕೆ.ಜಿ. ದೇಹತೂಕ ವಿಭಾಗದಲ್ಲಿ ಸ್ಪರ್ದಿಸಿದ ಇವರು ಚಿನ್ನದ ಪದಕವನ್ನು ಪಡೆದು ಸತತ 2ನೇ ಬಾರಿ ಈ ಪ್ರಶಸ್ತಿಯನ್ನು ಪಡೆದುಕೊಂಡರು. 70 ಕೆ.ಜಿ. ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಸನಲ್ ಪದ್ಮನಾಭನ್ ಪ್ರಥಮ ಸ್ಥಾನವನ್ನು ಪಡೆದು ಮಂಗಳೂರು ವಿ.ವಿ. ಗೆ 2 ನೇ ಸ್ವರ್ಣವನ್ನು ಪಡೆಯುವಲ್ಲಿ ಸಫಲರಾದರು. ಈ ಮೂಲಕ ಮಂಗಳೂರು ವಿ.ವಿ. ಅಖಿಲಭಾರತ ವಿ.ವಿ. ದೇಹದಾಢ್ರ್ಯ ಚಾಂಪಿಯನ್ಶಿಪ್ನ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆಯಲು ಸಫಲವಾಯಿತು. ಮಂಗಳೂರು ವಿ.ವಿ. ತಂಡವನ್ನು ಪ್ರತಿನಿಧಿಸಿದ್ದ 5 ಮಂದಿ ಸದಸ್ಯರಲ್ಲಿ 4 ಮಂದಿ ಆಳ್ವಾಸ್ ವಿದ್ಯಾರ್ಥಿಗಳು. ಅನಿಲ್ ಅವರು ಉಡುಪಿಯ ಜೆಸಿಯಂ ಜಿಮ್ನ ರಾಘವೇಂದ್ರರವರಿಂದ ತರಬೇತಿ ಪಡೆಯುತ್ತಿದ್ದು ಸನಲ್ ಪದ್ಮನಾಭನ್ ಸುರತ್ಕಲ್ ನ ಜೆನ್ ಜಿಮ್ನ ಶರತ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

0 comments:

Post a Comment