ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಭೋರ್ಗರೆವ ಕೊಡಗಿನ ಅಬ್ಬಿ ಎಂದೇ ಖ್ಯಾತಿ ಪಡೆದ ಅಬ್ಬಿ ಜಲಪಾತ ಇಂದು "ವಾಸನೆಯ" ಅಬ್ಬಿ ಎಂದು ಕರೆಸಿಕೊಳ್ಳುವ ಸ್ಥಿತಿ ತಲುಪಿದೆ. ತೀರಾ ದುರ್ನಾಥ ಈ ಅಬ್ಬಿ ಜಲಪಾತದಿಂದ ಹೊರಸೂಸುತ್ತಿದ್ದು ಅಬ್ಬಿ ವೀಕ್ಷಕರು ಕೊಂಚ ವಿಚಲಿತರಾಗಿದ್ದಾರೆ.
ವೀರನಾಡು ಕೊಡಗು ನಿಸರ್ಗ ಸೌಂದರ್ಯದ ತಾಣ. ಇಲ್ಲಿನ ಕಲ್ಲು, ಮಣ್ಣು, ನದೀ, ಆಚಾರ, ಆಚರಣೆ, ವಿಚಾರ ಹೀಗೆ ಪ್ರತಿಯೊಂದು ಕೂಡಾ ಸಂದರ್ಶನೀಯ. ಇಲ್ಲೇ ಇರುವ ಕೊಡಗಿನ ಅಬ್ಬಿಯೂ ಕೂಡಾ ಅಷ್ಟೇ ಸೌಂದರ್ಯದ ತಾಣ. ಆದರೆ ಇದೀಗ ಈ ಅಬ್ಬಿ ದುರ್ನಾಥದಿಂದ ಕೂಡಿದೆ. ಮೇಲಿಂದ ಕೆಳ ಧುಮುಕುವ ಜಲಲ ಜಲಧಾರೆ ತನ್ನೊಂದಿಗೆ ಕೆಟ್ಟ ವಾಸನೆಯನ್ನು ಹೊತ್ತೊಯ್ದು ಪ್ರೇಕ್ಷಕರನ್ನು ನಿರಾಸೆಗೊಳಿಸುತ್ತಿದೆ.
ಅಬ್ಬಿಯ ಒಂದು ಪಾಶ್ರ್ವದಲ್ಲಿ ನೆಟ್ಟ ಫಲಕವೊಂದು ತಿಳಿಸುವಂತೆ ಮಡಿಕೇರಿ ತೊರೆ ಅಥವಾ ಮುತ್ತಾರ್ ಮುಟ್ಟು ತೊರೆ ಬೃಹದಾಕಾರದ ಬಂಡೆಗಳ ನಡುವೆ ಹರಿದು 21.3ಮೀಟರ್ ಎತ್ತರದಿಂದ ಆಳವಾದ ಕಮರಿಗೆ ಧುಮುಕುತ್ತದೆ. ಈ ಜಲಧಾರೆ ಅಬ್ಬಿ ಜಲಪಾತ ಎಂದು ಪ್ರಸಿದ್ಧಿ ಹೊಂದಿದೆ. ಕೊಡವ ಭಾಷೆಯಲ್ಲಿ ಅಬ್ಬಿ ಎಂದರೆ ಜಲಪಾತ. ಬ್ರಿಟಿಷರು ಈ ಜಲಪಾತವನ್ನು ಮಡಿಕೇರಿಯ "ಪ್ರಥಮ ಪಾದ್ರಿ"ಯ ಮಗಳ ನೆನಪಿಗಾಗಿ ಜಸ್ಸಿ ಜಲಪಾತ ಎಂದು ಹೆಸರಿಟ್ಟಿದ್ದರು.ಪ್ರವಾಸಿಗರಿಗೆ ಈಜಾಡದಂತೆ, ಸಾಹಸ ಪ್ರವೃತ್ತಿ ತೋರದಂತೆ ಅಲ್ಲಲ್ಲಿ ಎಚ್ಚರಿಕೆಯ ಫಲಕ ನಡೆಲಾಗಿದೆ. ಆದರೆ ಈಗ ಅದರ ಅಗತ್ಯ ಇದ್ದಂತೆ ಕಂಡು ಬರುತ್ತಿಲ್ಲ. ಯಾರೆಂದರೆ ಅಬ್ಬಿ ವೀಕ್ಷಿಸಲು ಜಲಪಾತದ ಎದುರಿಗಿರುವ ತೂಗುಸೇತುವೆಯಲ್ಲಿ ನಿಂತರೇ ಸಾಕು ಗಬ್ಬು ನಾಥ ಜಲಪಾತದಿಂದ ಹೊರಸೂಸುತ್ತದೆ. ಮೂಗಿದ್ದವರ್ಯಾರೂ ಈ ಜಲಪಾತದಲ್ಲಿ ಈಜಾಡುವ ಪ್ರಯತ್ನ ಖಂಡಿತಾ ಮಾಡಲಾರರು.
ಚಿತ್ರ - ವರದಿ: ನಾಡೋಡಿ.

0 comments:

Post a Comment