ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಇದು ಆನಂದಮಯ ಆರೋಗ್ಯಧಾಮ
ಮನುಷ್ಯ ಎಂದರೇ ಹೀಗೆ.... ಏನು ಮಾಡಬೇಕೋ ಅದನ್ನು ಮಾಡಲಾರ. ಏನು ಬೇಡವೋ ಅದನ್ನು ಮಾಡುತ್ತಾನೆ.ಕೊನೆಗೆ ಪಶ್ಚಾತ್ತಾಪ ಪಡುತ್ತಾನೆ. ಕೊಂಚ ಕೂತಲ್ಲಿಯೇ ಯೋಚಿಸಿ... ಈ ಮಾತು ಸತ್ಯತಾನೇ...ನಿಜಕ್ಕೂ ಹೌದು.. ನಾವೂ ನೀವೂ ಎಲ್ಲರೂ ಇದೇ ಅವಸ್ಥೆಯಲ್ಲಿಯೇ ಸುತ್ತುತ್ತಿರುತ್ತೇವೆ. ತೊಳಲಾಡುತ್ತಿದ್ದೇವೆ. ಕೊನೆಗೊಮ್ಮೆ " ಛೇ...ಎಡವಿ ಬಿಟ್ಟೆನಲ್ಲಾ..." ಎಂದು ಪಶ್ಚಾತ್ತಾಪ ಪಡುತ್ತೇವೆ. ಮಾತೊಂದಿದೆಯಲ್ಲಾ "ಕೆಟ್ಟಮೇಲೆ ಬುದ್ದಿ ಬಂತು ಎಂಬಂತೆ " ಪಶ್ಚಾತ್ತಾಪ ಪಡುತ್ತೇವೆ. ಇದು ಆಧುನಿಕ ಮಾನವನ ಜೀವನ ಸ್ಥಿತಿ. ಕೆಲವೊಬ್ಬರು ಇದರಿಂದ ಹೊರತಾಗಿರಬಹುದು. ಅಪವಾದಕ್ಕೆ ಎಂಬಂತೆ. ಆದರೆ ಬಹುತೇಕ ಮಂದಿಯೂ ಹೀಗೇ...

ಇಂದು ಅವಸರದ ಯುಗ. ಈ ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ರಿಯೆಯೂ ಅವಸರವಸರವಾಗಿಯೇ ನಡೆಯುತ್ತದೆ. ಯಾವೊಂದಕ್ಕೂ ಪುರುಸೊತ್ತು ಎಂಬುದೇ ಇಲ್ಲ ಎಂಬಂತೆ!. ಅದು ಮನುಷ್ಯನ ದೈನಂದಿನ ಕೈಂಕರ್ಯಗಳನ್ನೂ ಬಿಟ್ಟಿಲ್ಲ!. ಊಟ , ನಿದ್ದೆ, ಒಂದಷ್ಟು ವಿಶ್ರಾಂತಿ ಊಹೂಂ...ಇದ್ಯಾವುದಕ್ಕೂ ಇಂದು ಪುರುಸೊತ್ತಿಲ್ಲ!. ಯಾರನ್ನೇ ಕೇಳಿ " ತುಂಬಾ ಬ್ಯುಸಿ " ಹಾಗಾಗಿ ಸ್ವಲ್ಪ ಲೇಟ್ ... ಈ ಸಿದ್ಧ ಉತ್ತರಕ್ಕೇನೂ ಕೊರತೆಯಿಲ್ಲ. ಈ ಬ್ಯುಸಿ ಜೀವನದ ನಡುವೆಯೇ ಮನುಷ್ಯನ ಆರೋಗ್ಯ ಸದ್ದಿಲ್ಲದೆ ಕೆಡಲಾರಂಭಿಸುತ್ತದೆ. ಸರಿಯಾಗಿ ಮನೆಊಟ ಮಾಡಲು ಸಮಯವಿಲ್ಲ...ಹಾಗಾಗಿ ಹೊಟೇಲ್ ಫೂಡ್... ಇನ್ನು ಟೀನೇಜ್ ಯುವಕ ಯುವತಿಯರಂತೂ ಪಟ್ಟಾಂಗಹೊಡೆಯುತ್ತಾ ಫಿಡ್ಝಾ, ಬರ್ಗರ್,ಚೈನೀಸ್ ಐಟಂ, ಟೇಸ್ಟ್ ಪೌಡರ್ ಉಪಯೋಗಿಸಿದ ಮಂಚೂರಿಗಳ ಮೊರೆಹೋಗುತ್ತಿರುವುದು ಸರ್ವೇ ಸಾಮಾನ್ಯ. ಪರಿಣಾಮ ಟೀನೇಜ್ ಮುಗಿಯುವುದರೊಳಗೆ ಮನುಷ್ಯನ ಆರೋಗ್ಯದ ಏಜ್ ಬಾರ್ ಆಗಿ ಹೋಗಿರುತ್ತದೆ...ಮತ್ತೆ ಸುಖೀ ಆರೋಗ್ಯಕ್ಕಾಗಿ ಹುಡುಕಾಟ..ತಡಕಾಟ...ಪೀಕಲಾಟ... ಇದು ಮೋಡರ್ನ್ ಲೈಫ್ ಸ್ಟೈಲ್! . ಒಟ್ಟಿನಲ್ಲಿ ಆಧುನಿಕ ಜೀವನದಲ್ಲಿ ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ಎಂಬಂತೆ ದೈಹಿಕ - ಮಾನಸಿಕ ಒತ್ತಡಗಳಿಂದ ತೊಳಲಾಡುತ್ತಿದ್ದಾರೆ.ಛೇ...ಹೀಗಾಗಬಾರದಾಗಿತ್ತು ಎಂಬ ಆಧುನಿಕ ಮಾನವರ ಬೇಸರವನ್ನು ದೂರಮಾಡಲು ಮತ್ತೆ ಚೈತನ್ಯ ಒದಗಿಸಿಕೊಡುವ ಪ್ರಯತ್ನಕ್ಕೆ ಹುಟ್ಟಿಕೊಂಡಿರುವುದು "ಆರೋಗ್ಯ ಧಾಮಗಳು." ಎಲ್ಲೋ ಕಳೆದು ಹೋದ ಆರೋಗ್ಯಕ್ಕೆ ಮತ್ತೆ ಜೀವತುಂಬುವ , ಮನದ ಬೇಸರ ಕಳೆಯುವಂತೆ ಮಾಡುವ , ಉಲ್ಲಾಸ ಹುಟ್ಟಿಸುವ ನೈಸರ್ಗಿಕ ಚಿಕಿತ್ಸಾ ಕೇಂದ್ರಗಳೇ ಈ ಆರೋಗ್ಯಧಾಮಗಳು. ದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಆರೋಗ್ಯಧಾಮಗಳು ಅಲ್ಲಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿವೆ. ಆದರೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಸೇವಾ ಮನೋಭಾವದಿಂದ ಮಿಜಾರಿನಲ್ಲಿ ಕಾರ್ಯಾಚರಿಸುತ್ತಿರುವ " ಆನಂದಮಯ ಆರೋಗ್ಯ ಧಾಮ " ಉಳಿದೆಲ್ಲಾ ಆರೋಗ್ಯಧಾಮಗಳಿಂದಲೂ ಒಂದು ಹೆಜ್ಜೆ ಮೀರಿ ನಿಂತು ತನ್ನ ಸೇವಾಮನೋಭಾವದ ಮೂಲಕ ಸಾಧನೆ ಮೆರೆಯುತ್ತಿದೆ. ಈ ಕಾರಣಕ್ಕಾಗಿಯೇ ಇಂದು ದೇಶ ವಿದೇಶ, ಊರು ಪರವೂರುಗಳಿಂದ ನಿರಂತರ ಜನ ಈ ಆರೋಗ್ಯಧಾಮದತ್ತ ಆಕರ್ಷಿತರಾಗುತ್ತಿದ್ದಾರೆ. ಕೈಗೆಟಕುವ ಕನಿಷ್ಠದರದಲ್ಲಿ ಆರೋಗ್ಯವೃದ್ಧಿಗಾಗಿ ವೈವಿಧ್ಯಮಯ ಚಿಕಿತ್ಸೆ ನೀಡುತ್ತಿರುವುದು ಇಲ್ಲಿನ ಪ್ರಮುಖ ವೈಶಿಷ್ಠ್ಯ.

ಚಿಕಿತ್ಸಾ ಕೇಂದ್ರದ ವೈದ್ಯ ಡಾ.ಪದ್ಮನಾಭರೊಂದಿಗೆ ಈ ಕನಸು.ಕಾಂ.ಪ್ರತಿನಿಧಿ.


ಯೋಗ ಮತ್ತು ಪ್ರಕೃತಿ ಚಿಕಿತ್ಸೆ , ಆಯುರ್ವೇದ ಚಿಕಿತ್ಸೆ ಮತ್ತು ಫಿಸಿಯೋ ಥೆರಪಿ ಚಿಕಿತ್ಸೆ ಈ ತ್ರಿವೇಣೀ ಸಂಗಮ ಚಿಕಿತ್ಸೆಗಳು ಮೊತ್ತ ಮೊದಲ ಬಾರಿಗೆ ಎಂಬಂತೆ ಈ ಆನಂದ ಮಯ ಆರೋಗ್ಯಧಾಮದಲ್ಲಿ ಪ್ರಯೋಗಿಸುವ ಮೂಲಕ ಹೊಸತೊಂದು ಪರಂಪರೆಗೆ ನಾಂದಿಹಾಡಿತು. ಯಾವನೇ ವ್ಯಕ್ತಿ ಚಿಕಿತ್ಸೆ ಆಶ್ರಯಿಸಿ ಆನಂದಮಯಕ್ಕೆ ಆಗಮಿಸಿದರೂ ಆತನಿಗೆ ಈ ಮೂರೂ ಚಿಕಿತ್ಸಾ ಪದ್ಧತಿಗಳ ಮೂಲಕ ಚಿಕಿತ್ಸೆನೀಡಿ ಮರಳಿ ಆರೋಗ್ಯ ಕಲ್ಪಿಸುವ ಹೊಸವ್ಯವಸ್ಥೆ ಇಲ್ಲಿದೆ. ಬೆಳ್ಳಂ ಬೆಳಗ್ಗೆ 6.30ರಿಂದ ಆರಂಭಗೊಂಡರೆ ರಾತ್ರಿ 8.30ರ ತನಕ ವಿವಿಧ ಹಂತಗಳಲ್ಲಿ ಆರೋಗ್ಯಧಾಮದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಧುಮೇಹ, ಬೊಜ್ಜುತನ ನಿವಾರಣೆ, ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ಇಲ್ಲಿ ವಿಶೇಷವಾದ ಚಿಕಿತ್ಸಾ ವಿಧಾನಗಳಿವೆ. ಬೆಳಗ್ಗಿನ ಪ್ರಶಾಂತ ವಾತಾವರಣದಲ್ಲಿ ಯೋಗ - ಪ್ರಾಣಾಯಾಮ, ವಿವಿಧ ರೀತಿಯ ಕ್ರಿಯೆಗಳು ಹೊಸ ಉಲ್ಲಾಸಮೂಡಿಸುವುದರಲ್ಲಿ ಸಂದೇಹವಿಲ್ಲ.

ಆನಂದಮಯ ಆರೋಗ್ಯಧಾಮದಲ್ಲಿ ಎಣ್ಣೆ ಮಾಲೀಸು, ಪೌಡರ್ ಮಾಲೀಸು, ಮಣ್ಣಿನ ಚಿಕಿತ್ಸೆ, ಪಥ್ಯಾಹಾರ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಸೂಜಿ ಚಿಕಿತ್ಸೆ (ಅಕ್ಯುಪಂಕ್ಚರ್) , ಅಕ್ಯುಪ್ರೆಶರ್, ಆಯಸ್ಕಾಂತ ಚಿಕಿತ್ಸೆ, ಸುಂಗಂಧ ಚಿಕಿತ್ಸೆ, ಜಲಚಿಕಿತ್ಸೆ, ಸೋನಾಬಾತ್, ಆತಪಸ್ನಾನ, ಯೋಗ, ಪ್ರಾಣಾಯಾಮ, ಧ್ಯಾನ , ಪಂಚಕರ್ಮ ಚಿಕಿತ್ಸೆ, ಆಪ್ತಸಮಾಲೋಚನೆ ಈ ಎಲ್ಲಾ ಚಿಕಿತ್ಸಾ ವ್ಯವಸ್ಥೆಗಳಿವೆ. ಅತ್ಯಂತ ಪಾರಂಪರಿಕ ರೀತಿಯಲ್ಲಿ ಎಲ್ಲೂ ಚ್ಯುತಿಬಾರದಂತೆ ಸಂಪೂರ್ಣ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆಯನ್ನು ನುರಿತ ಚಿಕಿತ್ಸಕರೊದಗಿಸುತ್ತಾರೆ.
ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪಂಚಕರ್ಮ ಚಿಕಿತ್ಸೆ, ನಶ್ಯ, ಅಕ್ಷಿತರ್ಪಣ, ಬಸ್ತಿ, ವಮನ, ವಿರೇಚನ, ಪಿಂಡಸ್ವೇದ, ಶಿರೋಧಾರ, ಜಲಧಾರ, ಕ್ಷೀರಧಾರ, ಷಷ್ಠಿಕಶಾಲಿಪಿಂಡಸ್ವೇದ, ಸರ್ವಾಂಗ ಸ್ವೇದ, ಕಟಿಬಸ್ತಿ, ಜಾನುಬಸ್ತಿ, ಗ್ರೀವಬಸ್ತಿ ಮೊದಲಾದ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ.
ಫಿಸಿಯೋಥೆರಪಿ ಚಿಕಿತ್ಸಾ ಪದ್ಧತಿಯ ಮೂಲಕ ಯಂತ್ರಗಳ ನೆರವಿನೊಂದಿಗೆ ವಿವಿಧ ರೀತಿಯ ದೈಹಿಕ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ವಿಭಾಗಗಳಲ್ಲಿ ಚಿಕಿತ್ಸಾ ಕ್ರಮಗಳನ್ನು ಪ್ರತ್ಯೇಕವಾಗಿಯೇ ಕೈಗೊಳ್ಳಲಾಗುತ್ತಿದೆ.ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆ ಶ್ಲಾಘನಾರ್ಹ. ಚಿಕಿತ್ಸೆ ಪಡೆಯಲು ಆಗಮಿಸುವವರಿಗೆ ವಸತಿ ವ್ಯವಸ್ಥೆಯನ್ನೂ ಅಷ್ಟೇ ಚೊಕ್ಕವಾಗಿ ರಚಿಸಲಾಗಿದೆ. 8 ಕಾಟೇಜುಗಳು, 4 ಡೀಲಕ್ಸ್ ವಸತಿ ವ್ಯವಸ್ಥೆ, ಜೊತೆಗೆ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಉತ್ತಮ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪ್ರತಿಯೊಂದು ಕಾಟೇಜುಗಳೂ ಒಂದರಿಂದೊಂದು ಭಿನ್ನವಾಗಿ ಜನಾಕರ್ಷಣೆಗೆ ಕಾರಣವಾಗುತ್ತಿವೆ. ಆಕರ್ಷಕ ವಿನ್ಯಾಸ ಮಾದರಿಗಳು, ಸೌಲಭ್ಯಗಳು ಎಂತವರನ್ನೂ ಮೋಡಿಮಾಡದಿರದು. ಚಿಕಿತ್ಸಾ ಕೇಂದ್ರವು ಈ ಕಾಟೇಜುಗಳ ಸನಿಹದಲ್ಲೇ ಇರುವುದರಿಂದಾಗಿ ಆರೋಗ್ಯ ಅರಸಿ ಬರುವ ಮಂದಿಗೆ ಮತ್ತಷ್ಟು ಅನುಕೂಲ ಆದಂತಾಗಿದೆ. ಕಾಟೇಜು ಹಾಗೂ ಚಿಕಿತ್ಸಾ ಕೇಂದ್ರಗಳಲ್ಲಿರಿಸಿರುವ ಪಾರಂಪರಿಕ ಮರದ ಪೀಠೋಪಕರಗಣಗಳು ಮನಸ್ಸನ್ನು ಪುಳಕಗೊಳಿಸುತ್ತಿವೆ.ನೈಸರ್ಗಿಕ ಆಹಾರ ಪದ್ಧತಿ, ಸಾಂಪ್ರದಾಯಿಕದೊಂದಿಗೆ ಆಧುನಿಕ ರೀತಿಯ ಚಿಕಿತ್ಸಾ ಸೌಲಭ್ಯ, ಮನಸ್ಸು ವಿಕಸಿಸುವಂತಹ ಚಟುವಟಿಕೆಗಳು ಇವೆಲ್ಲವುಗಳ ಮೂಲಕ ಎಲ್ಲೋ ಕಳೆದುಹೋದ ನೆಮ್ಮದಿ ಮತ್ತೆ ನವೋಲ್ಲಾಸದೊಂದಿಗೆ ಮರಳಿ ಲಭಿಸುವಂತೆ ಮಾಡುತ್ತದೆ ಈ ಆನಂದಮಯ ಆರೋಗ್ಯಧಾಮ. ತನ್ಮೂಲಕ ಹಲವರ ಪಾಲಿಗೆ ಇದೊಂದು ಆರೋಗ್ಯ ಸ್ವರ್ಗ ಎನಿಸಿಕೊಂಡಿದೆ.

ಕನಸುಗಾರನ ಹೊಸ ಕನಸು...
ಆಧುನಿಕ ಮೂಡಬಿದಿರೆಯ ರೂವಾರಿ ಎಂದೇ ಖ್ಯಾತಿಹೊಂದಿದ ಮಿಜಾರುಗುತ್ತು ಮೋಹನ ಆಳ್ವರು ಒಂದಿಲ್ಲೊಂದು ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾರೆ. ಹೊಸ ಹೊಸ ನೂರಾರು ಕನಸುಗಳು ಅವರ ಮನದಲ್ಲಿ ಮೂಡಿರುತ್ತವೆ. ಅವೆಲ್ಲ ಸಾಕಾರಗೊಂಡಾ ನೋಡುಗರಿಗೆ ಒಂದು ಅದ್ಭುತ ಎಂದೆನಿಸುತ್ತದೆ. ಈ ಆನಂದಮಯವೂ ಅವರ ಕನಸುಗಳಲ್ಲೊಂದು. ಮೂಡಬಿದಿರೆಯಿಂದ ಸರಿಯಾಗಿ 8ಕಿಲೋಮೀಟರ್ ದೂರದಲ್ಲಿದೆ ಈ ಶೋಭಾವನ. ರಾಷ್ಟ್ರೀಯ ಹೆದ್ದಾರಿ 13ರ ಅಂಚಿನಲ್ಲಿ ವಿಶಾಲವಾದ ಪರಿಸರದಲ್ಲಿ ಈ ಶೋಭಾವನ ನೆಲೆನಿಂತಿದೆ. ಮೂಡಬಿದಿರೆಯಿಂದ ಮಂಗಳೂರಿಗೆ ಸಾಗುವ ಹಾದಿಯಲ್ಲಿ ಸಿಗುವ ಈ ವನ ಸಹಸ್ರ ಸಸ್ಯಗಳ ಕಣಜ. ವಿಶಾಲವಾದ ಭೂಮಿಯಲ್ಲಿ ಆಯುರ್ವೇದ ಗಿಡಮೂಲಿಕೆಗಳನ್ನು ಅತ್ಯಂತ ಕಾಳಜಿಯಿಂದ ಪೋಷಿಸುವ ಕೇಂದ್ರ. ನಿರಂತರ ಆರೈಕೆ, ಹೊಸ ಹೊಸ ಅನ್ವೇಷಣೆಗೆ ಈ ವನ ಕಾರಣವಾಗುತ್ತಿದೆ. ಇದರ ಒಂದಂಚಿನಲ್ಲೇ ಆನಂದಮಯ ಆರೋಗ್ಯಧಾಮ ನೆಲೆನಿಂತಿದೆ. ಮುಂಜಾನೆಯ ಇಬ್ಬನಿಯ ಹನಿಯೊಂದಿಗೆ, ಆಹ್ಲಾದದಾಯಕ ವಾತಾವರಣದೊಂದಿಗೆ ಶೋಭಾವನದ ಸುತ್ತ ವಾಕಿಂಗ್ ಮಾಡುವುದರಲ್ಲಿ ಸಿಗುವ ಆನಂದ ಅನುಭವಿಸಿಯೇ ಅರಿಯಬೇಕು. ವೈವಿಧ್ಯಮಯ ಪಕ್ಷಿಗಳ ಇಂಚರ ನಿನಾದ... ಸಹಸ್ರ ಸಹಸ್ರ ಆಯುರ್ವೇದ ಗಿಡಮೂಲಿಕೆಗಳನ್ನೆಲ್ಲಾ ದಾಟಿ ಬರುವ ತಂಗಾಳಿ... ನಿಷ್ಕಲ್ಮಶ ಪರಿಸರ ಇವೆಲ್ಲವೂ ಮಾನವನ ದೈಹಿಕ ಹಾಗೂ ಮನೋವಿಕಾಸಕ್ಕೆ ಪೂರಕ ವಾತಾರವಣವನ್ನೊದಗಿಸುತ್ತದೆ.

- ಚಿತ್ರ, ಬರಹ : ಹರೀಶ್ ಕೆ.ಆದೂರು.

3 comments:

Anonymous said...

"ಹೆಳವನ ಹೆಗಲ ಮೇಲೆ ಕುರುಡು ಕುಳಿತಿದ್ದಾನೆ ದಾರಿ ಸಾಗುವುದೆನ್ತೋ ನೋಡಬೇಕು ಎಂಬ ಅಡಿಗರ ಮಾತು ನೆನಪಿಗೆ ಬರುತ್ತಿದೆ. ನಿಮ್ಮ ಮಾತು ಅಕ್ಷರಶಃ ನಿಜ. ಯಾವುದೊ ವಿಧಿಯ ಒತ್ತಡದಲ್ಲಿ ಏನೋ ಮಾಡುವಂತೆ ಬದುಕನ್ನು ಸವೆಸಿ ಒಂದು ದಿನ ರಸ ಸ್ವಾದವಿಲ್ಲದ ಸಿಪ್ಪೆಯಂತೆ ಭೂಗತವಾಗಿ ಹೋಗುತ್ತೇವೆ."

ಕನ್ನಡ ಸಂಪದ Kannada Sampada

Anonymous said...

aanandamaya aarogyadhama baahya mattu aantarika aanandavannu needuvudu sahaja....aadare saamanyanige etakuvude ee aananda ?

Anonymous said...

khanditha vaagiyu saamanyanige etakuvudu omme bheti kodi tiliyuvudu nimage..

Post a Comment