ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೊನ್ನೆ ಮೊನ್ನೆ ಸುಳ್ಯದ ಸ್ನೇಹ ಶಾಲೆಗೆ ಹೋಗುವ ಅವಕಾಶ ಸಿಕ್ಕಿತು. ಈ ತನಕ ಅದೆಷ್ಟೋ ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡುವ ಅವಕಾಶ ನನ್ನ ಪಾಲಿಗೆ ಸಿಕ್ಕಿತ್ತು. ಆದರೆ ಸ್ನೇಹ ಶಾಲೆಯಲ್ಲಿ ನನಗಾದ ಅನುಭವವೇ ಬೇರೆ. ನಿಜಾರ್ಥದಲ್ಲಿ ಅಲ್ಲಿ ಮಕ್ಕಳನ್ನು , ಮಕ್ಕಳ ಭವಿಷ್ಯವನ್ನು ರೂಪಿಸುವ ಕಾರ್ಯ ನಡೆಯುತ್ತಿತ್ತು. ಮಕ್ಕಳಿಗೆ ಪಾಠವೆಂಬ ಹೊರೆಯನ್ನು ಕಟ್ಟಿಕೊಡದೆ ಅವರ ಬದುಕನ್ನು ಕಟ್ಟಿಕೊಡುವ, ಬದುಕಿಗೊಂದು ರೂಪವನ್ನು ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು.ಶಾಲಾ ವಠಾರ, ಅಲ್ಲಿರುವ ಸುಂದರ ಕುಠೀರಗಳು, ನೈಜ ಭೂಮಿಯಲ್ಲೇ ನಿರ್ಮಿತಿಗಳನ್ನು ಸುಂದರವಾಗಿ ನಿರ್ಮಿಸಿ ಅಲ್ಲೆಲ್ಲಾ ಮಕ್ಕಳ ಭವಿಷ್ಯ ಕಟ್ಟುವ ಕಾರ್ಯ, ನಿಸರ್ಗದ ನಡುವೆಯೇ ಪಠ್ಯಕಲಿಕೆಗೆ ಅವಕಾಶ, ಶಿಸ್ತುಬದ್ಧ ಜೀವನ ಕ್ರಮಕ್ಕೆ ಸೂಕ್ತ ವ್ಯವಸ್ಥೆ...ಈ ರೀತಿಯಲ್ಲಿ ಸ್ನೇಹ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡಲಾಗುತ್ತಿದೆ.
" ಏನ್ ಪುಟ್ಟಾ...ತಿಂಡಿ ಮಾಡಿದ್ಯಾ...? ಯಾಕೆ ಏನಾಯ್ತು ಮಾತಾಡ್ತಿಲ್ಲ...ಈ ಮಾಮನ ಪರಿಚಯ ಉಂಟಾ...?" ಪ್ರತಿಯೊಂದು ಪುಟ್ಟ ಪುಟ್ಟ ವಿದ್ಯಾರ್ಥಿಗಳನ್ನೂ ಮುಖ್ಯೋಪಾಧ್ಯಾಯರು ಮಾತನಾಡಿಸುವ ಈ ಪರಿ ನಿಜಕ್ಕೂ ಅಚ್ಚರಿ ಮೂಡಿಸಿತು.
ಈ ಶಾಲೆಯ ವೈಶಿಷ್ಟ್ಯಗಳ ಕುರಿತಾಗಿ ಶಾಲೆಯ ಶಿಕ್ಷಕಿಯರು ತಮ್ಮ ಅನುಭವಗಳನ್ನು ಹಂಚಿಕೊಂಡರೆ ಉತ್ತಮ ಎಂಬ ಅಭಿಪ್ರಾಯದಿಂದ ಶಾಲಾ ಶಿಕ್ಷಕಿಯರು ಬರೆದು ಕಳುಹಿಸಿದ ಲೇಖನವನ್ನು ಯಥಾವತ್ತಾಗಿ ಈ ಕನಸಿನ ಓದುಗರಿಗಾಗಿ ನೀಡುತ್ತಿದ್ದೇವೆ. ಮುಂದೆ ಶಾಲೆಯ ಸಮಗ್ರ ಮಾಹಿತಿಯನ್ನು ಈ ಕನಸು ಸವಿವರವಾಗಿ ಪ್ರಕಟಿಸಲಿದೆ. ಸಾಧ್ಯವಾದಲ್ಲಿ ನೀವೂ ಒಮ್ಮೆ ಈ ಶಾಲೆಗೆ ಭೇಟಿ ನೀಡಿನಮ್ಮ ಶಾಲೆಯಲ್ಲಿ 15 ವರ್ಷಗಳಿಂದ ಬಾಲವಾಡಿ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಾ ಬಂದಿದ್ದೇವೆ. ಮಕ್ಕಳಿಗೆ ಶಾಲೆಯಲ್ಲಿ ಮನೆಯ ವಾತಾವರಣವನ್ನೇ ಕಲ್ಪಿಸಿಕೊಡಲಾಗುತ್ತದೆ. ಇಲ್ಲಿ ಪಠ್ಯಪುಸ್ತಕಗಳ ಹೊರೆ ಇಲ್ಲ. ಹೋಂ ವರ್ಕ್ ಒತ್ತಡ ಇಲ್ಲ. ಎಲ್ಲಾ ಪಾಠಗಳನ್ನು ಅಂದರೆ ಕನ್ನಡ, ಗಣಿತ, ಇಂಗ್ಲಿಷ್, ಪರಿಸರ ಇವುಗಳನ್ನು ಬಾಯ್ದರೆಯಾಗಿ ಕಲಿಸಲಾಗುತ್ತದೆ. ಮಕ್ಕಳು ನಲಿಯುತ್ತಾ ಕಲಿಯಬೇಕು ಎಂಬ ಧ್ಯೇಯ ನಮ್ಮದು. ಅದಕ್ಕಾಗಿ ಮೌಖಿಕವಾಗಿ ಹೆಚ್ಚು ಹೆಚ್ಚು ಹೇಳಿ ಕೊಡಲಾಗುತ್ತದೆ.ವಾರಗಳ ಹೆಸರು, ತಿಂಗಳುಗಳ ಹೆಸರು, ನಕ್ಷತ್ರಗಳ ಹೆಸರು, ಮಾಸಗಳ ಹೆಸರು, ಸಂವತ್ಸರಗಳ ಹೆಸರು, ಶ್ಲೋಕ, ತಿಥಿಗಳ ಹೆಸರು ಇವುಗಳನ್ನು ದಿನನಿತ್ಯ ಹೇಳಿಕೊಡುತ್ತೇವೆ. ಮೊದಲಿಗೆ ಸ್ಲೇಟಿನಲ್ಲಿ ಬರೆಸಿ ತಿದ್ದಿಸಿ ಅಕ್ಷರಾಭ್ಯಾಸ ಮಾಡಿಸುತ್ತೇವೆ. ಜನವರಿಯಿಂದ ಪುಸ್ತಕದಲ್ಲಿ ಬರೆ0ುಲು ಕಲಿಸುತ್ತೇವೆ. ಇದರಿಂದ ಮಕ್ಕಳು ಅಕ್ಷರಗಳನ್ನು ಅಂದವಾಗಿ ಬರೆಯುತ್ತಾರೆ. ಪ್ರತಿಯೊಂದು ಮಗುವಿಗೂ ನೃತ್ಯ, ಹಾಡು, ಕಥೆ, ಅಭಿನಯಗಳನ್ನು ಕಲಿಸಿ, ಅದನ್ನು ಪ್ರದರ್ಶಿಸುವ ಅವಕಾಶ ನೀಡುತ್ತೇವೆ.

ಪಾಠದ ಜೊತೆಗೆ ಆಟ, ಕ.ಇ.ಖಿ., ಭಜನೆ ಇವುಗಳನ್ನೂ ಕಲಿಸುತ್ತೇವೆ. ಚಿಪ್ಪುಗಳು, ಚಮಚಗಳು, ಮಂಜಟ್ಟಿಕಾಯಿ, ಪೆನ್ನುಗಳು, ಮರದ ತುಂಡುಗಳು, ಮಿಂಚುಪಟ್ಟಿ ಇವುಗಳ ಮುಖಾಂತರ ಕಲಿಸುತ್ತೇವೆ. ಇವುಗಳಿಂದ ಅಕ್ಷರಗಳನ್ನು ಬರೆಯುವುದು, ಆಕೃತಿಗಳನ್ನು, ಮಾಡುವುದನ್ನು ಮಕ್ಕಳು ಕಲಿಯುತ್ತಾರೆ. ತರಗತಿಯ ಗೋಡೆಯಲ್ಲಿರುವ ಹಣ್ಣು, ತರಕಾರಿ, ಬೇರೆ ಬೇರೆ ಚಿತ್ರಗಳನ್ನು ತೋರಿಸಿ, ಮಕ್ಕಳಿಗೆ ಅದನ್ನು ಕನ್ನಡ ಹಾಗೂ ಇಂಗ್ಲಿಷ್ನಲ್ಲೂ ಹೇಳಿಕೊಡುತ್ತೇವೆ. ಶಾಲಾ ಪರಿಸರದಲ್ಲಿ ಸುತ್ತಾಡಿಸಿ ಪರಿಸರ ಪಾಠವನ್ನು. ಇದರಲ್ಲಿ ನಮ್ಮ ಸುತ್ತಮುತ್ತಲಿನ ಗಿಡ, ಮರ, ಔಷಧೀಯ ಸಸ್ಯಗಳನ್ನು ಪರಿಚಯಿಸಿಕೊಡಲಾಗುತ್ತದೆ. ಇದರಿಂದ ಮಕ್ಕಳು ಗಿಡಗಳನ್ನು ಗುರುತಿಸಿ ಅದರ ಹೆಸರುಗಳನ್ನು ಹೇಳಬಲ್ಲರು. ಈ ಮಕ್ಕಳಿಗೆ ಬರಹದ ಮನೆ ತುಂಬಾ ಉಪಯುಕ್ತ. ಇಲ್ಲಿ ಮರಳಿನಲ್ಲಿ ಬೆಟ್ಟ, ಗುಡ್ಡ, ನದಿ, ಗೋಪುರಗಳನ್ನು ಮಾಡಿ ಮಕ್ಕಳು ಸಂತೋಷ ಪಡುತ್ತಾರೆ. ಮರಳಿನಲ್ಲಿ ಅಕ್ಷರ ಬರೆಯುವುದನ್ನೂ ಕಲಿಸುತ್ತೇವೆ.

ಒಟ್ಟಾರೆ ಮಗುವಿಗೆ ತನ್ನ ಪ್ರತಿಭೆಯನ್ನು ಹೊರಸೂಸಲು, ಮಗು ಬೆಳೆಯಲು, ಪುಟ್ಟ ಮಕ್ಕಳಿಗೆ ಚೈತನ್ಯಶೀಲ ಹಾಗೂ ಸೌಹಾರ್ದ ವಾತಾವರಣವಿದೆ. ಹಲವು ಮಕ್ಕಳು ನಮ್ಮನ್ನು 'ಅಮ್ಮ' ಎಂದೂ ಕರೆಯುತ್ತಾರೆ. ಮಕ್ಕಳ ಅಕ್ಷರಗಳ ತಿದ್ದುವಿಕೆ ಸತತ ನಡೆಸುತ್ತೇವೆ. ಅಂದವಾದ ಬರವಣಿಗೆ, ಸ್ಪಷ್ಟ ಓದುವಿಕೆಗೆ ಹೆಚ್ಚಿನ ಒತ್ತು ನೀಡುತ್ತೇವೆ. ಒತ್ತಡರಹಿತ ಕಲಿಕೆಯಿಂದಾಗಿ ಮಕ್ಕಳು ಯಾವಾಗಲೂ ಉಲ್ಲಾಸ, ಉತ್ಸಾಹದಿಂದ ಇರುತ್ತಾರೆ.

ಮೀನಾಕ್ಷಿ .ಪಿ/ ವಸಂತಿ .ಬಿ
ಸಹ ಶಿಕ್ಷಕಿಯರು
ಸ್ನೇಹ ಪ್ರಾಥಮಿಕ ಶಾಲೆ, ಸುಳ್ಯ

0 comments:

Post a Comment