ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡುಬಿದಿರೆ: ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಒಂದು ತಿಂಗಳ ಕಾಲ ನಡೆದ ನಗರ ಭಜನೆಯ ಮಂಗಲೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪಶ್ಚಿಮ ಜಾಗರ ಪೂಜೆಯ ಬಳಿಕ ನಗರ ಭಜನೆ ನಡೆಯಿತು. ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು, ಆಚರಣೆಗಳು ಕಡಿಮೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಗರ ಭಜನೆಯಂತಹ ಧಾರ್ಮಿಕ ಸಾಂಸ್ಕೃತಿಕ ಉತ್ಸವಗಳು ಯುವಜನತೆಯಲ್ಲಿ ಸನಾತನ ಸಂಸ್ಕೃತಿಯ ಉಳಿವಿಗೆ ಕಾರಣವಾಗುತ್ತಿರುವುದು ಶ್ಲಾಘನಾರ್ಹ. ಇಂದು ಜಗತ್ತು ಬದಲಾಗುತ್ತಿದೆ. ಜೊತೆಜೊತೆಗೆ ಸಮಾಜವೂ ಬದಲಾಗುತ್ತಿದೆ. ವಿದೇಶೀ ದಾಸ್ಯ ಕ್ಕೆ ಇಡೀ ಸಮಾಜ ಒಳಗಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಭಜನೆ, ಧಾರ್ಮಿಕ ಕಾರ್ಯಕ್ರಮಗಳು ವಿರಳವಾಗುತ್ತಿದೆ. ಮೂಡಬಿದಿರೆಯಲ್ಲಿ ನಡೆಯುತ್ತಿರುವ ಈ ನಗರ ಭಜನೆ ಇಂದಿಗೂ ಜನತೆಯಲ್ಲಿ ಧಾರ್ಮಿಕ ಭಾವನೆ ಬಡಿದೆಬ್ಬಿಸಲು ಸಹಕಾರಿಯಾಗುತ್ತಿದೆ.

ಸಚಿತ್ರ ವರದಿ:ಎಂ. ಗಣೇಶ್ ಕಾಮತ್ ಮೂಡುಬಿದಿರೆ.

0 comments:

Post a Comment