ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಕ್ತಿ ಸಿಂಚನ
ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ ೧೯೯೪ರ ಏಪ್ರಿಲ್ ನಲ್ಲಿ ಸಂನ್ಯಾಸದೀಕ್ಷೆ ಪಡೆದರು.೧೯೯೯ರ ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಅಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.
ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೊಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಟ ಅಧ್ಯಾತ್ಮನಾಯಕರನ್ನಾಗಿಸಿವೆ.

ಶ್ರೀ ರಾಮಚಂದ್ರಾಪುರ ಮಠ

ಶ್ರೀ ಕ್ಷೇತ್ರ ಗೋಕರ್ಣದ ಸುಂದರ ಕಡಲ ಕಿನಾರೆಯಲ್ಲಿ, ಸನಾತನ ಧರ್ಮ ಪುನರುತ್ಥಾನದ ಅವತಾರ ಪುರುಷ ಆದಿ ಶಂಕರರಿಂದ ಸ್ಥಾಪಿತ ಪ್ರಮುಖ ಪೀಠ ಶ್ರೀ ರಾಮಚಂದ್ರಾಪುರ ಮಠ. ಅವರ ಕರಕಮಲದಿಂದಲೇ ಪೀಠ ಪರಂಪರೆಗೆ ಅನುಗ್ರಹಿತವಾದದ್ದು ಚಂದ್ರಮೌಳೀಸ್ವರ ಲಿಂಗ, ಸೀತಾ-ಲಕ್ಷ್ಮಣ ಸಹಿತ ಶ್ರೀರಾಮಚಂದ್ರ ವಿಗ್ರಹಗಳು. ಅವುಗಳ ಆರಾಧನೆ, ಉಪಾಸನೆ ಅನುಷ್ಟಾನವಾಗಿ ಈ ವರೆಗಿನ 36 ಪೀಠಾಧಿಪತಿಗಳಿಂದ ನಡೆಯುತ್ತಾ ಬಂದಿರುವುದು ವಿಶೇಷ.ಅಮೃತಧಾರಾ ಗೋಶಾಲೆ ಕೋಲಾಡ, ಮಹಾರಾಷ್ಟ್ರ

ಶ್ರೀ ಶ್ರೀ ರಾಘವೇಶ್ವರ ಭ್ಹಾರತೀ ಸ್ವಾಮಿಜಿಯವರ ಕನಸಿನ ಕೂಸಾದ “ಕಾಮದುಘಾ” ಈ ಯೋಜನೆಯಡಿಯಲ್ಲಿ ಹಾಗೂ ಅವರ ನೇತೃತ್ವದಲ್ಲಿ, ಅಮೃತಧಾರಾ ಗೋಶಾಲೆಯು ಮಹಾರಾಷ್ಟ್ರದ ಕೋಲಾಡ, ತಾ, ರೋಹಾ, ರಾಯಗಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟಿದೆ. ಸುಮಾರು ೧೫೦ ಆಕಳುಗಳನ್ನು ಈ ಯೋಜನೆಯಡಿಯಲ್ಲಿ ಸಾಕಲಾಗುತ್ತಿದೆ. ವಿಶ್ವದಿಂದ ನಶಿಸುತ್ತಿರುವ ಭಾರತೀಯ ಗೋವಂಶದ ತಳಿಗಳನ್ನು ಸಂರಕ್ಷಿಸಲು ಅಮೃತಧಾರಾ ಗೋಶಾಲೆಯು ಟೊಂಕಕಟ್ಟಿದೆ.
ಇಲ್ಲಿ ಮಹಾರಷ್ಟ್ರದ ೪ ತಳಿಗಳಲ್ಲಿ (ಡಾಂಗಿ, ಗೀರ, ಗೌಳವ, ಖಿಲಾರಿ) ೨ ತಳೀಗಳನ್ನು (ಡಾಂಗಿ, ಖಿಲಾರಿ) ಸಂರಕ್ಷಿಸಲ್ಪಡುತ್ತಿದೆ. ಈ ಜಾಗವನ್ನು, ಸುಮಾರು ೪೦ ಎಕರೆ, ಶ್ರೀಮಾನ್ ಕೃಷ್ಣ ಭಟ್ಟರು ಮಠಕ್ಕೆ ದಾನ ಮಾಡಿದ್ದಾರೆ.
ಈ ಯೋಜನೆಯು ಭಾರತೀಯ ಗೋವಂಶದ ಸಂಶೋಧನೆ, ಸಂವರ್ಧನೆ ಹಾಗೂ ಸಂರಕ್ಷಣೆ ಯ ಉದ್ದೇಶ ಹಾಗೂ ಸಿದ್ಧಾಂತವಾದ ಗಾವೋ ವಿಶ್ವಸ್ಯ ಮಾತರಃ, ವನ್ನು ಇಟ್ಟುಕೊಂಡು ಗೋಶಾಲೆ ಯನ್ನು ನಡೆಸಲಾಗುತ್ತಿದೆ.
ಅಮೃತಧಾರಾ ಗೋಶಾಲೆಯು, ಗೋಶಾಲೆಯ ಅಭಿವೃದ್ಡಿಗಾಗಿ ಆದಷ್ಟು ಹೆಚ್ಚಿನ ಮಟ್ಟಿಗೆ ಗವ್ಯೋತ್ಪನ್ನಗಳನ್ನು ತಯಾರಿಸಿ ಮಾರಟಮಾಡಬೇಕೆಂಬುದನ್ನು ಮನಗೊಂಡಿದೆ.
ಸದ್ಯಕ್ಕೆ ೨ ಗವ್ಯೋತ್ಪನ್ನಗಳು ಈ ಗೋಶಾಲೆಯಲ್ಲಿ ಉತ್ಪಾದಿಸಲಾಗುತ್ತಿದೆ:
೧. ಅಮೃತಸಾರ – ಗೋಮೂತ್ರ ಅರ್ಕ,
೨. ಸ್ಪ್ರಿಂಗ ಫ್ರೆಶ – ಗೋಮೂತ್ರದಿಂದ ಪ್ಲೋರ್ ಕ್ಲೀನರ್
ಇದರ ಹೊರತಾಗಿ ಅಲ್ಲಿ ಬೆಳೆಯುವ ನೆಲ್ಲಿಕಾಯಿಯನ್ನು (ಕೆಮಿಕಲ್ ರಹಿತ) ಉಪ್ಪಿನಕಾಯಿ, ಜಾಮ್ ನ್ನು ಮಾಡಿ, ಮಾರಾಟ ಮಾಡಿ, ಅದರ ಹಣವನ್ನು ಗೋಶಾಲೆಯ ಅಭಿವೃಧ್ಧಿಗೆ ಉಪಯೋಗಿಸಲಾಗುತ್ತಿದೆ.
ಮುಂದಿನ ಯೋಜನೆಯಲ್ಲಿ, ಪೇಸ್ ಪೆಕ್, ಅಮೃತ ಮಲಮ್ ಹಾಗೂ ಇತರ ಗವ್ಯೋತ್ಪನ್ನಗಳ ತಯಾರಿಕೆ ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.
ಅಮೃತಧಾರಾ ಗೋಶಾಲೆಯಲ್ಲಿ ಈಗ ರಾಮಾಶ್ರಮ, ಧ್ಯಾನ ಮಂದಿರ ಹಾಗೂ ೪ ಗೋಶಾಲೆ ಇದೆ.ಶ್ರೀ ಭಾರತೀ ಸ್ವಾಸ್ಥ್ಯ ಮಂದಿರ ಮುಜುಂಗಾವು

ಪರಮಪೂಜ್ಯ ಶ್ರೀ ಶ್ರೀರಾಘವೇಶ್ವರ ಸ್ವಾಮೀಜಿಗಳ ಕರುಣಾದೃಷ್ಟಿಗೆ ಈ ಆಸ್ಪತ್ರೆ ಇನ್ನೊಂದು ಉದಾಹರಣೆ. ಹಳ್ಳಿಯ ಬಡಜನರ ಆರೋಗ್ಯ ಸುಧಾರಣೆಗೆ ಈ ಹೊರರೋಗಿ ಜನರಲ್ ಔಷಧಾಲಯವನ್ನು ಮಹಾಸ್ವಾಮಿಗಳವರು ಮುಜುಂಗಾವಿನಲ್ಲಿ ದಯಪಾಲಿಸಿದರು. ಇಲ್ಲಿನ ವೈಶಿಷ್ಟ್ಯ ಕೇವಲ ೫ ರೂಪಾಯಿಗಳ ನೋಂದಾವಣಿ ಶುಲ್ಕ. ರೋಗಿಗಳಿಗೆ ನೀಡುವ ಈ ಕಾರ್ಡಿನಲ್ಲಿ ಮೂರು ತಿಂಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯ.
ಈ ಆಸ್ಪತ್ರೆಯಲ್ಲಿ ಒಬ್ಬರು ಆಯುರ್ವೇದ ವೈದ್ಯರು ಮತ್ತು ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಔಷಧಿಗಳಲ್ಲಿ ಗೋ ಉತ್ಪನ್ನಗಳಿಗೆ ಆದ್ಯತೆ ಇದೆ. ಆಧುನಿಕ ಚಿಕಿತ್ಸಾ ಸೌಲಭ್ಯ ಇದೆ. ಈ ಆಸ್ಪತ್ರೆಗೆ ಶ್ರೀ ಗುರುಗಳ ಶಿಷ್ಯರು ಹಾಗೂ ಭಕ್ತರು ಪ್ರತೀ ತಿಂಗಳೂ ದೇಣಿಗೆಗಳನ್ನು ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ನಮ್ಮ ಮಠದ ಭಕ್ತರಾದ ತುಂಬಾ ಮಂದಿ ವೈದ್ಯರುಗಳು ಪ್ರತೀ ತಿಂಗಳು ಔಷಧಿ ದಾನ ಮಾಡುತ್ತಿದ್ದಾರೆ. ಈ ಸೌಲಭ್ಯಗಳನ್ನು ದಿನಕ್ಕೆ ೧೦೦ರವರೆಗೆ ಜನರು ಉಪಯೋಗ ಪಡುತ್ತಿದ್ದಾರೆ. ಉಳ್ಳವರಿಗಾಗಿ ರಿಯಾಯಿತಿ ದರದ ಚಿಕಿತ್ಸೆಗಳೂ ಲಭ್ಯ. ಈ ಸ್ವಾಸ್ಥ್ಯ ಮಂದಿರಕ್ಕೂ ತಜ್ಞ ವೈದ್ಯರುಗಳು ವಾರಕ್ಕೆ, ತಿಂಗಳಿಗೊಮ್ಮೆ ಸಂದರ್ಶನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸೇವಾ ಸೌಲಭ್ಯ ಇಡೀ ಊರಿಗೇ ಒಂದು ಆದರ್ಶಪ್ರಾಯ ಸೇವೆಯೆಂದು ಗುರುತಿಸಲ್ಪಟ್ಟಿದೆ.

0 comments:

Post a Comment