ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹೊಸನಗರ: ಶ್ರೀ ಜಗಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರಮಠ ಹೊಸನಗರ ಇಲ್ಲಿನ ಬ್ರಹ್ಮಲೀನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ, ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಮತ್ತು ಧರ್ಮ ಸಭೆ ಡಿ.13ರಂದು ಮಧ್ಯಾಹ್ನ 2.30ಕ್ಕೆ ಅಶೋಕಾವನ ಶ್ರೀಕ್ಷೇತ್ರ ಗೋಕರ್ಣದಲ್ಲಿ ನಡೆಯಲಿದೆ.ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಅಭ್ಯಾಗತರಾಗಿ ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ಭಾರತ ಸರಕಾರದ ಬಾಹ್ಯಾಕಾಶ ಸಾಗರವಿಜ್ಞಾನ ಮತ್ತು ಅಣುಶಕ್ತಿ ಆಯೋಗದ ಕಾರ್ಯದರ್ಶಿ ವಿ.ವಿ.ಭಟ್, ನವದೆಹಲಿ ಇಸ್ರೋ ಸಲಹಗಾರರೂ, ಹಿರಿಯ ವಿಜ್ಞಾನಿಗಳೂ ಆದ ಡಾ.ವೈ.ಎಸ್.ರಾಜನ್ ಭಾಗವಹಿಸಲಿದ್ದಾರೆ. ಮಠದ ಸರ್ವಶಿಷ್ಯವರ್ಗ, ಭಕ್ತವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿ.

0 comments:

Post a Comment