ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಅಂತರ ರಾಷ್ಟ್ರೀಯ ಆರೋಗ್ಯ ಸಂಸ್ಥೆ ( ಡಬ್ಲ್ಯು. ಎಚ್. ಒ.)ಯಿಂದ ಪುರಸ್ಕರಿಸಲ್ಪಟ್ಟು ಸುಮಾರು 152ದೇಶಗಳಲ್ಲಿ ಶಾಖೆ ಹೊಂದಿರುವ , ವ್ಯಕ್ತಿತ್ವ ವಿಕಸನಗೊಳಿಸುವ ಸುದರ್ಶನ ಕ್ರಿಯಾ ಹಾಗೂ ಜೀವನ ಕಲೆಯ ಸ್ಥಾಪಕಾಚಾರ್ಯ ಸದ್ಗುರು , ವಿಶ್ವವಿಖ್ಯಾತ ಪೂಜ್ಯ ಶ್ರೀ ರವಿಶಂಕರ ಗುರೂಜಿ ಫೆಬ್ರವರಿ 16, 2011ರಂದು ಮಂಗಳೂರಿಗೆ ಭೇಟಿನೀಡಲಿದ್ದಾರೆ ಎಂದು ಮಹಾ ಸತ್ಸಂಗ ಸಮಿತಿ ಕಾರ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ಸಂಘಟನಾ ಕಾರ್ಯದರ್ಶಿ ಡಾ.ಕೆ.ವಿ.ಶೆಣೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಶ್ರೀ ರವಿಶಂಕರ ಗುರೂಜಿಯವರು ಮಂಗಳ ಸಂಧ್ಯಾ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಕೈಗೊಳ್ಳಿದ್ದಾರೆ. ಗಾನ, ಜ್ಞಾನ ಮತ್ತು ಧ್ಯಾನದ ಮೂಲಕ ಎಲ್ಲರ ಮನ,ಮನೆ,ಹೃದಯಲ್ಲಿ ಸಂತೋಷವನ್ನುಂಟುಮಾಡುವ ಮಂಗಳ ಸಂಧ್ಯಾ ಕಾರ್ಯಕ್ರಮ ಮಂಗಳೂರಿನ ಜನತೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುವಂತೆ ಮಾಡಲಿದೆ.
ಶ್ರೀ ರವಿಶಂಕರ ಗುರೂಜಿಯವರ ಭಕ್ತರು, ಶಿಷ್ಯವರ್ಗದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

1 comments:

Dr.S.N.Bhat said...

ಶ್ರೀ ಶ್ರೀ ಗುರುಜಿ February 12ರಂದು ತಿರುವನಂತಪುರಕ್ಕೆ ಆಗಮಿಸಲಿದ್ದಾರೆ.ಆನಂದೋತ್ಸವ ನಡೆಯಲಿದೆ.ನೀವೂ ಬನ್ನಿ.

Post a Comment