ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:42 PM

ಪತ್ರ - 2

Posted by ekanasu

ವೈವಿಧ್ಯ / ವ್ಯಾಸರ ಪತ್ರಗಳು...
ವ್ಯಾಸ ಎಂ.

ವಂದನೆಗಳು.
ಅಲ್ಲಿ ಇಲ್ಲಿ ಹೋಗುವುದಿತ್ತು. ಜೊತೆಗೇ ಅಂಕಣಕೂಡಾ ಬರೆಯವುದಿತ್ತು. ನಿನ್ನೆ ರಾತ್ರಿ ಕುಳಿತು ಇವೆರಡನ್ನೂ ಬರೆದೆ. "ವೃತ್ತ ವೃತ್ತ..." ವಿಭಿನ್ನ ರೀತಿಯ ಬರಹ. ಸರ್ವ ತಿರಸ್ಕಾರ ಯೋಗ್ಯವಾಸ ಸ್ವಾರ್ಥ ಚಿಂತನೆ ಹೇಗೆ ಸರ್ವ ಪ್ರೀತಿಯ ಭಾಗವಾಗಬಲ್ಲೂದೆಂಬುದನ್ನು ಹಂತ ಹಂತವಾಗಿ ಕಾವ್ಯ ಭಾಷೆಯಲ್ಲಿ ಬರೆದಿದ್ದೇನೆ. ಇಂಥಾ ಒಂದು ಲೇಖನದ ಭಾಷೆ ಇದುವರೆಗೂ ಯಾರೂ ಬಳಸಿಲ್ಲ ಎಂದು ಕೊಳ್ಳುತ್ತಿದ್ದೇನೆ. ಭ್ರಮೆಯಾಗಿರಲೂ ಬಹುದು. ಅಲ್ಲಲ್ಲಿ ಬ್ರೇಕೇಟ್ನಲ್ಲೂ ಒಂದು ಅಥವಾ ಎರಡು ಶಬ್ಧಗಳನ್ನು ಬಳಸಿದ್ದೇನೆ. ಹಾಗೆ ಬಳಸಿದಾಗ ಅದರ `ಪರಿಣಾಮ' ವಾಕ್ಯಕ್ಕೆ ಅನೇಕ ಆಯಾಮಗಳನ್ನು ಕೊಡುತ್ತದೆ. ಉದಾ: ..."ನಾವು (ಸುಖ:) ನಿದ್ದೆಹೋಗುತ್ತೇವೆ. ಎಂಬಲ್ಲಿ ಸುಖ, ಎಲ್ಲರಿಗೂ ಇಲ್ಲ ಎಂಬಂತೆ. ಅಲ್ಲ ಎಂಬಂತೆ ನಿದ್ದೆಯೇ `ಸುಖ:' ಎಂಬಂತೆ. ಬೇರೆ ಸುಖ: ನಿದ್ದೆಯಲ್ಲದೆ ಇಲ್ಲ ಎಂಬಂತೆ ಅರ್ಥಬಿಡುಗಡೆಯಾಗುತ್ತದೆ. ಹಾಗೆಯೇ "ಗಾಲಿಯನ್ನು ಸ್ವದೇಶೀಯರು ಕಂಡುಹುಡುಕಿದ್ದಾರೆ. ಹಾಗೆಯೇ ಖಾಲಿ (ಸೊನ್ನೆ)ಯನ್ನು ಕೂಡಾ " ಎಂಬಲ್ಲಿ ಇಡೀ ಜಗತ್ತಿನ ಅನುಭವ `ಮನುಷ್ಯನಿಗೆ ' ದೊರಕುತ್ತದೆ. ಒಂಟಿ ಮನುಷ್ಯನ ಸಾಧನೆಗಳು ಹಲವು ಅರ್ಥದಲ್ಲಿ ಖಾಲಿ - ಸೊನ್ನೆಗಳಾಗುತ್ತವೆ ಎಂದೂ ಧ್ವನಿಸುತ್ತದೆ. ಕೊನೆಯ ಆವರಿಸಿಬಿಡುತ್ತದೆ (ಬಿಡಬೇಕು) ಎಂಬಲ್ಲಿ `ಇದೆ ' - ಮತ್ತು `ಇಲ್ಲ' ಎರಡೂ ಈ ವರ್ತಮಾನದಲ್ಲಿ ಇರೋ ಭಾವನೆಗಳೇ ಎಂಬಂತೆ ಬಿಂಬಿತವಾಗುತ್ತಿದೆ.
ಎರಡನೇ ಲೇಖನ - ಮನುಷ್ಯ ಮನುಷ್ಯ - ದೇಶ ದೇಶದೊಳಗಿನ ವಿದ್ವೇಷ ಬೆಂಕಿಯಾಗುತ್ತಿದ್ದರೂ ಈ ಜಗತ್ತಿನಲ್ಲಿ ಮನುಷ್ಯನೇ ಹೆಚ್ಚು ದಯಾಶೀಲ ಎಂಬಂತಹಾ ಕಟು ಸತ್ಯವನ್ನು ಹೊರಗೆಡಹುತ್ತದೆ. ಯಾರೂ ಗಮನಿಸದ ಸತ್ಯ ಇದಾಗಿದೆ. ಕೊಲೆ ಹಿಂಸೆ ಅಸೂಯೆಗಳ ನಡುವೆಯೂ ಈ ಇಂಥಾ ಆಶಯಗಳನ್ನು ಗುರುತಿಸಬೇಕು ಅಲ್ಲವೇ...? ಅಡಿಗರೊಡನೆ ಮಾತನಾಡಿದಾಗ - ಲೇಖನಗಳಿಗೆ ಗೌರವಧನದ ಕುರಿತು ಅವರೇನೂ ಹೇಳಿಲ್ಲ. ಕೇಳಲು ನನಗೆ ಸಂಕೋಚವಾಯಿತು. ಈಗಲೂ ಅದನ್ನು ಪ್ರಸ್ತಾಪಿಸಲು ಸಂಕೋಚವೇ. ಆದರೂ ನನಗೆ ಅಪಾರ ಗೌರವ ಸಿಕ್ಕಿದೆ. ನಿಮ್ಮಿಂದ, ನನ್ನ ಅಪಾರ ಅಭಿಮಾನಿಗಳಿಂದ. ಫೋನ್ ಮಾಡಿ - (ತುರ್ತಾಗಿ). ಪ್ರೀತಿಗಾಗಿ ಕೃತಜ್ಞ. ವ್ಯಾಸ.

0 comments:

Post a Comment