ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಸಿಂಹಬಾಲದ ಕೋತಿ ಸಂತತಿ ಉಳಿದುಕೊಂಡಿದೆ. ಶಿರಸಿ , ಸಿದ್ಧಾಪುರ,ಹೊನ್ನಾವರವೂ ಸೇರಿದಂತೆ ಪುಷ್ಪಗಿರಿ, ಶರಾವತೀ ಕಣಿವೆ, ತಲಕಾವೇರಿ ವ್ಯಾಪ್ತಿಯಲ್ಲಿರುವ ಕಾಡುಗಳಲ್ಲಿ ಸಿಂಹಬಾಲದ ಕೋತಿ ಸಂತತಿ ಉಳಿದುಕೊಂಡಿದೆ. ಈ ಭಾಗದಲ್ಲಿ ಸುಮಾರು 750ಕೋತಿಗಳಿವೆ ಎಂದು ಜೀವ ವಿಜ್ಞಾನಿ ಡಾ.ಹೊನ್ನವಳ್ಳಿ ಕುಮಾರ ಅವರು ಅಭಿಪ್ರಾಯಿಸಿದ್ದಾರೆ. 2007ರಿಂದ ಶಿರಸಿ, ಸಿದ್ಧಾಪುರ ,ಹೊನ್ನಾವರ ಅರಣ್ಯ ಭಾಗದಲ್ಲಿ ಡಾ.ಹೊನ್ನವಳ್ಳಿ ಸಿಂಹಬಾಲದ ಕೋತಿಯ ಬಗ್ಗೆ ಸಂಶೋಧನೆ ಕೈಗೊಂಡಿದ್ದರು. ಇತ್ತೀಚೆಗೆ ಈ ಕೋತಿಯ ಸಂಖ್ಯೆ ತೀವ್ರ ರೀತಿಯಲ್ಲಿ ಕುಸಿತ ಕಂಡಿದ್ದು ವಿನಾಶದಂಚಿಗೆ ಸಾಗುವ ಪ್ರಾಣಿಗಳ ಸಾಲಿಗೆ ಈ ಕೋತಿಯೂ ಸೇರಿತ್ತು. ಅರಣ್ಯಗ ಪ್ರದೇಶಗಳ ವ್ಯಾಪಕ ಇಳಿಮುಖಗಳಿಂದಾಗಿ ಒಂದೆಡೆ ಈ ಕೋತಿ ಕ್ಷೀಣಿಸುತ್ತಿದೆ. ಕೇರಳ, ತಮಿಳುನಾಡು ಪ್ರದೇಶದಲ್ಲಿ ಈ ಕೋತಿಯನ್ನು ಕೊಂದು ತಿನ್ನುವ ಪ್ರವೃತ್ತಿ ಅಧಿಕವಾದ ಹಿನ್ನಲೆಯಿಂದಾಗಿ ಇದರ ಸಂತತಿ ಕ್ಷೀಣಿಸಿತ್ತು.

1 comments:

Anonymous said...

ಆತ್ಮೀಯರೆ,
ಉತ್ತರ ಕರ್ನಾಟಕದ ಹಲವೆಡೆ ಇವು ಕಾಣಸಿಗುತ್ತವೆ. ಇವಕ್ಕೆ ‘ಸಿಂಗಳಿಕ’ ಅನ್ನುವ ಹೆಸರೂ ಕೂಡ ಇದೆ.

Post a Comment