ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ರಸ್ತೆ, ಸೇತುವೆಗಳ ಸಮಗ್ರ ವೀಕ್ಷಣೆ ನಡೆಸಿದ ಲೋಕೋಪಯೋಗಿ ಸಚಿವ ಸಿ. ಎಂ. ಉದಾಸಿ ಅವರು, ಕಾಮಗಾರಿಗಳಿಗಾಗಿ 51.15 ಕೋಟಿ ರೂ. ಪ್ರಸ್ತಾವನೆಯನ್ನು ಇಲಾಖೆ ಸಲ್ಲಿಸಿದ್ದು, ಸರ್ಕಾರ ಇದನ್ನು ಆದ್ಯತೆ ಮೇಲೆ ಪರಿಗಣಿಸಲಿದೆ ಎಂದರು.ನಿನ್ನೆ ದಿನ ಪೂರ್ತಿ ಸಂಚಾರ ಮಾಡಿ ಖುದ್ದಾಗಿ ಜಿಲ್ಲೆಯ ರಸ್ತೆ, ಸೇತುವೆ ಗಳನ್ನು ಪರಿಶೀ ಲಿಸಿದ ರಲ್ಲದೆ ಸಾರ್ವ ಜನಿಕ ರಿಂದ ಅಹ ವಾಲು, ಸಲಹೆ ಗಳನ್ನು ಸ್ವೀಕ ರಿಸಿ ದರು. ಸಂಪರ್ಕ ವ್ಯ ವಸ್ಥೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಲೋಕೋ ಪಯೋಗಿ ಇಲಾಖೆ ಮುಗಿದ ಕಾಮ ಗಾರಿಗೆ ಸಾವಿರ ಕೋಟಿ ಪಾವತಿ ಸಬೇ ಕಾಗಿದೆ ಎನ್ನುವುದೇ ಇಲಾಖೆ ಎಷ್ಟು ಬೃಹತ್ ಪ್ರಮಾಣದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದರು.

ನಿನ್ನೆ ತಲಾ 75 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಬಜಕುರೆ ಮತ್ತು ನೆಟ್ಟಣ ಸೇತುವೆಗಳನ್ನು ಲೋಕಾರ್ಪಣೆ ಮಾಡಿದರಲ್ಲದೆ, ಸುಬ್ರಹ್ಮಣ್ಯ-ಉಡುಪಿ ರಸ್ತೆಯಲ್ಲಿ ಕುಮಾರಧಾರ ನದಿಗೆ ಇನ್ನೂ ಮೂರು ಮುಳುಗು ಸೇತುವೆಗಳನ್ನು ಅಭಿವೃದ್ಧಿ ಪಡಿಸಿಕೊಡುವ ಭರವಸೆಯನ್ನು ನೀಡಿದರು. ಹೊಸ್ಮಠ ಮುಳುಗು ಸೇತುವೆಯಿಂದ ಸುತ್ತಮುತ್ತಲ ಜನರಿಗೆ ಮಳೆಗಾಲದಲ್ಲಿ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಶಾಸಕ ಅಂಗಾರ ಅವರು ತಮ್ಮ ಬಹುವರ್ಷಗಳ ಬೇಡಿಕೆಯನ್ನು ಸಚಿವರಿಗೆ ಮನದಟ್ಟು ಮಾಡಿದರು. ಶಾಂತಿಮೊಗರುವಿನಲ್ಲಿ ಸೇತುವೆ ನಿರ್ಮಿಸಲು 9 ಕೋಟಿ ರೂ.ಗಳನ್ನು ಪ್ರಥಮ ಹಂತದಲ್ಲಿ ಬಿಡುಗಡೆ ಮಾಡುವುದಾಗಿ ಪ್ರದೇಶ ಪರಿಶೀಲಿಸಿದ ಬಳಿಕ ಸಚಿವರು ಸ್ಥಳದಲ್ಲಿಯೇ ಘೋಷಿಸಿದರು. ಈ ಸೇತುವೆಯಿಂದಾಗಿ ಪುತ್ತೂರು-ಕಾಣಿಯೂರು-ನೆಲ್ಯಾಡಿಗೆ ಹಾಗೂ ಸುಳ್ಯದಿಂದ ಬೆಳ್ಳಾರೆ -ಬೆಳಂದೂರು-ಅಲಂಕಾರು-ನೆಲ್ಯಾಡಿ- ಧರ್ಮಸ್ಥಳಕ್ಕೆ ಸಂಚರಿಸಲು ಸ್ಥಳೀಯರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಜಿಲ್ಲಾ ಮುಖ್ಯ ರಸ್ತೆ ಯಾದ ಕುದ್ಮಾರು- ಶಾಂತಿ ಮೊಗೇರು-ಶರ ವೂರು- ಅಲಂ ಕಾರು-ಸುರುಳಿ ನೆಲ್ಯಾಡಿ ರಸ್ತೆ ಯನ್ನು ಸಚಿವರು ಪರಿ ವೀಕ್ಷಣೆ ಮಾಡಿ ದರು. ಉಪ್ಪಿ ನಂಗಡಿ-ಗುರು ವಾಯ ನಕೆರೆ ರಸ್ತೆ ಯನ್ನು ಪರಿ ವೀಕ್ಷಿಸಿ ರಸ್ತೆ ಅಭಿ ವೃದ್ಧಿಗೆ ಕೊರತೆ ಇರುವ ಅನು ದಾನ ವನ್ನು ಮಂಜೂರು ಮಾಡು ವುದಾಗಿ ತಿಳಿಸಿ ದರು. ಸುಬ್ರ ಹ್ಮಣ್ಯದಿಂದ ಜಾಲ್ಸೂರು ವರೆಗೆ, ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿಯನ್ನು ಚತುಷ್ಫಥ ಮಾಡುವ ಪ್ರಸ್ತಾವನೆಯನ್ನು ಪರಿಶೀಲಿಸುವ ಭರವಸೆ ನೀಡಿದರು.ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಬಂದರು ಮತ್ತು ಮೀನುಗಾರಿಕೆ ನಾಲ್ಕು ವಿಭಾಗಗಳ ಅಧಿಕಾರಿಗಳು ಸಚಿವರೊಂದಿಗಿದ್ದರು. ಉಡುಪಿ ಜಿಲ್ಲೆಯಲ್ಲಿ 20.30 ಕೋಟಿ ರೂ. ವೆಚ್ಚದಲ್ಲಿ ಒಟ್ಟು 7 ಸೇತುವೆಗಳನ್ನು ನಿರ್ಮಿಸಲು, ಕೊಡಗಿನಲ್ಲಿ ರೂ. 4 ಕೋಟಿ ವೆಚ್ಚದಲ್ಲಿ 5 ಸೇತುವೆಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ ತಿಳಿಸಿದರು. ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲ್ ನಾಯ್ಕ್, ಪ್ರಭಾಕರ ಮತ್ತಿತರ ಅಧಿಕಾರಿಗಳು ಜೊತೆಗಿದ್ದರು.

0 comments:

Post a Comment