ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು:ಮಂಗಳೂರಿನಲ್ಲಿ ಮತ್ತೆ ಪ್ರೀಪೇಯ್ಡ್ ಅಟೋ ವ್ಯವಸ್ಥೆ ಜಾರಿಯಾಗುವುದೇ...? ಈ ಹಿಂದೆ ಒಂದು ಬಾರಿ ಪ್ರೀಪೇಯ್ಡ್ ವ್ಯವಸ್ಥೆ ಜಾರಿಗೆ ಬಂದು ಅದು ಮತ್ತೆ ಬಾಗಿಲು ಮುಚ್ಚಿಕೊಂಡು ಮಾಮೂಲಿ ವ್ಯವಸ್ಥೆ ಜಾರಿಯಲ್ಲಿದ್ದುದು ಎಲ್ಲರಿಗೂ ತಿಳಿದ ವಿಷಯ. ಆದರೆ ಜಿಲ್ಲಾಧಿಕಾರಿಗಳು ಇದೀಗ ರೈಲು ನಿಲ್ದಾಣದಲ್ಲಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.ಗ್ರಾಮಾಂತರ ಆಟೋ ರಿಕ್ಷಾ ಗಳನ್ನು ಪ್ರತ್ಯೇಕವಾಗಿ ಗುರುತಿಸಲು ಬೇರೆ ಬಣ್ಣ ಹಚ್ಚಲು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಅವರು ಅಗತ್ಯಕ್ಕೆ ಪಟ್ಟಣ ಪ್ರವೇಶಿಸಲು ಅನುಮತಿ ನೀಡಲು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆಟೋಗಳಿಗೆ ನಗರದಲ್ಲಿ ಹೆಚ್ಚಿನ ಆಟೋ ಸ್ಟಾಂಡ್ ಗಳನ್ನು ನಿರ್ಮಿಸುವ ಬಗ್ಗೆ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಪಡೀಲಿನಲ್ಲಿ ರೈಲ್ವೇ ಅಂಡರ್ ಬ್ರಿಡ್ಜ್ ನಿರ್ಮಿಸುವ ಬಗ್ಗೆ ಇದಕ್ಕಾಗಿ ತಲಾ ಶೇ.50 ಪಾಲು ಬಂಡವಾಳದೊಂದಿಗೆ ನಿರ್ಮಿಸಲು ಪ್ರಥಮ ಹಂತದಲ್ಲಿ ನಿರ್ಧರಿಸಲಾಗಿದೆ.ಡಿಸೆಂಬರ್ 31 ರೊಳಗೆ ಜಿಲ್ಲೆಯಲ್ಲಿ ಬಸ್ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಸಲು ಎಲ್ಲ ಬಸ್ಸುಗಳು ಕಡ್ಡಾಯವಾಗಿ ಜಿಪಿಎಸ್ ಅಳವಡಿಕೆಯಲ್ಲಿ ಪ್ರಗತಿಯನ್ನು ಸಾಧಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

0 comments:

Post a Comment