ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ರಾಜ್ಯ ಚುನಾವಣಾ ಆಯೋಗವು ಜಿಲ್ಲಾ/ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ 2010ರ ವೇಳಾ ಪಟ್ಟಿಯನ್ನು 06.12.2010ರಂದು ಘೋಷಿಸಿರುವುದರಿಂದ ಚುನಾವಣಾ ಸದಾಚಾರ ಸಂಹಿತೆಯು 06.12.2010ರಂದು ಮಧ್ಯರಾತ್ರಿ 12 ಗಂಟೆಯಿಂದ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವ ವರೆಗೆ ಜ್ಯಾರಿಯಲ್ಲಿರುತ್ತದೆ. ಈ ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸುವ ಬಗ್ಗೆ ಈ ಕೆಳಗೆ ಕಾಣಿಸಿರುವ ಅಧಿಕಾರಿಯವರನ್ನು ಅವರ ಹೆಸರಿನ ಎದುರುಗಡೆ ನಮೂದಿಸಿರುವ ಪ್ರದೇಶಗಳಿಗೆ ಅನುಷ್ಟಾನಾಧಿಕಾರಿಗಳಾಗಿ ತಕ್ಷಣದಿಂದ ನೇಮಕ ಮಾಡಲಾಗಿದೆ.
1 ಆಯುಕ್ತರು, ಮಹಾನಗರಪಾಲಿಕೆ, ಮಂಗಳೂರು ಮಹಾನಗರಪಾಲಿಕೆ, ಮಂಗಳೂರು 0824-2220310 9945794353

2 ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಮಂಗಳೂರು ಮಂಗಳೂರು ತಾಲೂಕು ಗ್ರಾಮೀಣ ಪ್ರದೇಶ 0824-2423675 9480862110

3 ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಬಂಟ್ವಾಳ ಬಂಟ್ವಾಳ ತಾಲೂಕು ಗ್ರಾಮೀಣ ಪ್ರದೇಶ 08255-233339 9480862105

4 ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಬೆಳ್ತಂಗಡಿ ಬೆಳ್ತಂಗಡಿ ತಾಲೂಕು ಗ್ರಾಮೀಣ ಪ್ರದೇಶ 08256-232026 9480862100

5 ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಪುತ್ತೂರು ಪುತ್ತೂರು ತಾಲೂಕು ಗ್ರಾಮೀಣ ಪ್ರದೇಶ 08251-232361 9480862115

6 ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಸುಳ್ಯ ಸುಳ್ಯ ತಾಲೂಕು ಗ್ರಾಮೀಣ ಪ್ರದೇಶ 08257-230336 9480862120

7 ಮುಖ್ಯಾಧಿಕಾರಿ, ಪುರಸಭೆ, ಮೂಡಬಿದ್ರಿ ಪುರಸಭೆ, ಮೂಡಬಿದ್ರಿ 08258-236146 9448141176
8 ಮುಖ್ಯಾಧಿಕಾರಿ, ಪುರಸಭೆ, ಉಳ್ಳಾಲ ಪುರಸಭೆ, ಉಳ್ಳಾಲ 0824-2466226 9880746991
9 ಮುಖ್ಯಾಧಿಕಾರಿ, ಪುರಸಭೆ, ಬಂಟ್ವಾಳ ಪುರಸಭೆ, ಬಂಟ್ವಾಳ 08255-233130 9845366950
10 ಮುಖ್ಯಾಧಿಕಾರಿ, ಪುರಸಭೆ, ಪುತ್ತೂರು ಪುರಸಭೆ, ಪುತ್ತೂರು 08251-230251 9448983532
11 ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ, ಮುಲ್ಕಿ ಪಟ್ಟಣ ಪಂಚಾಯತಿ, ಮುಲ್ಕಿ 0824-2290561 9448490860

12 ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ, ಬೆಳ್ತಂಗಡಿ ಪಟ್ಟಣ ಪಂಚಾಯತಿ, ಬೆಳ್ತಂಗಡಿ 08256-232125 9845980644

13 ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ,ಸುಳ್ಯ ಪಟ್ಟಣ ಪಂಚಾಯತಿ, ಸುಳ್ಯ 08257-230354 9449103467
ಮೇಲ್ಕಾಣಿಸಿರುವಂತೆ ನೇಮಕ ಮಾಡಲಾದ ಸದಾಚಾರ ಸಂಹಿತೆ ಅನುಷ್ಟಾನಾಧಿಕಾರಿಯವರು ಅವರನ್ನು ನೇಮಕ ಮಾಡಲಾದ ಪ್ರದೇಶ ವ್ಯಾಪ್ತಿಯೊಳಗೆ ಆಯೋಗವು ಉಲ್ಲೇಖಿತ ಸುತ್ತೋಲೆಯಲ್ಲಿ ಹೊರಡಿಸಿರುವ ಅಂಶಗಳ ಸದಾಚಾರ ಸಂಹಿತೆಯು ಉಲ್ಲಂಘನೆಯಾಗದಂತೆ ನೋಡಿಕೊಳ್ಳತಕ್ಕದ್ದು. ಹಾಗೂ ಸದಾಚಾರ ಸಂಹಿತೆಯು ಉಲ್ಲಂಘನೆಯಾಗುವ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಈ ಕಚೇರಿಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ದ.ಕ.ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

0 comments:

Post a Comment