ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಜನವರಿ 11ರಿಂದ 16 : ಮಿಜಾರಿನಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್


ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ - 2011 ಇದೇ ಜನವರಿ 11ರಿಂದ 16 ತನಕ ಮಿಜಾರಿನ ಸಸ್ಯಕಾಶಿ ಶೋಭಾವನದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ (ರಿ.) ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪದ್ಮಭೂಷಣ ಉಸ್ತಾದ್ ಅಮ್ಜಾದ್ ಆಲಿ ಖಾನ್, ಅಯನ್ ಆಲಿ ಖಾನ್, ಅಮನ್ ಆಲಿ ಖಾನ್, ಪಂಡಿತ್ ಜಯತೀರ್ಥ ಮೇವುಂಡಿ, ವಿದ್ವಾನ್ ಅಭಿಷೇಕ್ ರಘುರಾಮ್, ಮಲೇಷಿಯಾ ಹಾಗೂ ಶ್ರೀಲಂಕಾದ ನೃತ್ಯ ತಂಡಗಳು, ಡಾ.ಮೈಸೂರು ಮಂಜುನಾಥ್, ಮೈಸೂರು ನಾಗರಾಜ್, ಉಜ್ಜೆಯಿನಿಯ ಕಲಾ ತಂಡ, ಪಂಡಿತ್ ತರುಣ್ ಭಟ್ಟಾಚಾರ್ಯ, ಸುರಮಣಿ ಪ್ರವೀಣ್ ಗೋಡ್ಕಿಂಡಿ ಮೊದಲಾದ ಕಲಾವಿದರು ಈ ಬಾರಿಯ ವಿರಾಸತ್ನಲ್ಲಿ ಉತ್ಕೃಷ್ಟ ಕಲಾ ಸಾಧನೆ ಮೆರೆಯಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕಲೆ, ಸಂಸ್ಕೃತಿ, ತನ್ಮೂಲಕ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ ರಾಷ್ಟ್ರೀಯಮಟ್ಟದ ಕಲಾವಿದರೋರ್ವರಿಗೆ ಆಳ್ವಾಸ್ ವಿರಾಸತ್ 2011 ಪ್ರಶಸ್ತಿನೀಡಿ ಗೌರವಿಸಲಾಗುತ್ತದೆ. ದಿನಕ್ಕೆರಡು ಕಲಾ ಪ್ರಕಾರಗಳಂತೆ ಈ ಬಾರಿಯ ವಿರಾಸತ್ನಲ್ಲಿ ಖ್ಯಾತ ಕಲಾವಿದರು ಕಲಾ ಪ್ರದರ್ಶನ ನಡೆಸಿಕೊಡಲಿದ್ದಾರೆ. ರಾಷ್ಟ್ರೀಯ ಮಟ್ಟದ ಕಲಾವಿದರನ್ನು ನಾಡಿನ ಜನಕ್ಕೆ ಪರಿಚಯಿಸುವುದು ಹಾಗೂ ಅವರ ಕಲಾಪ್ರದರ್ಶನಕ್ಕೆ ರಾಷ್ಟ್ರೀಯ ಮಟ್ಟದ ವೇದಿಕೆಯನ್ನೊದಗಿಸುವುದು, ನಾಡಿನ ಕಲಾಸಕ್ತರಿಗೆ ಈ ಹಿರಿಯ ಕಲಾವಿದರ ಕಲಾ ಪ್ರದರ್ಶನವನ್ನು ವೀಕ್ಷಿಸಲು ಮುಕ್ತ ಅವಕಾಶ ನೀಡುವುದು ಈ ವಿರಾಸತ್ನ ಪ್ರಮುಖ ಉದ್ದೇಶ. ಗ್ರಾಮೀಣ ಪ್ರದೇಶವೊಂದರಲ್ಲಿ ಹಿರಿಯ ಕಲಾವಿದರನ್ನು ಒಂದುಗೂಡಿಸಿ ಕಲಾಸಕ್ತರಿಗೆ ಕಾರ್ಯಕ್ರಮದ ಸವಿ ಸವಿಯಲು ಸಂಪೂರ್ಣ ಉಚಿತ ವ್ಯವಸ್ಥೆಯನ್ನು ಮಾಡುತ್ತಿರುವುದು ಆಳ್ವಾಸ್ ಸಮೂಹ ಸಂಸ್ಥೆಗಳ ಸಾಧನೆಯಾಗಿದೆ.

ಸಹಸ್ರ ಸಸ್ಯಗಳ ಕಣಜ ಶೋಭಾವನದಲ್ಲಿ ಗೋಧೂಳಿಯ ಸಮಯದಲ್ಲಿ ಸಮಯಪ್ರಜ್ಞೆಯೊಂದಿಗೆ ನಿಗಧಿತ ಅವಧಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡು ನಿಗಧಿತ ಅವಧಿಗೆ ಕಾರ್ಯಕ್ರಮ ಮುಗಿಯಲಿದೆ. 6 ದಿನಗಳ ಕಾಲ ಹಲವು ಪ್ರಕಾರಗಳ ಕಲಾ ಪ್ರದರ್ಶನ ವಿರಾಸತ್ ವೇದಿಕೆಯ ಮೂಲಕ ಪ್ರದರ್ಶನಕಾಣಲಿದೆ.

ಶಿಲ್ಪ ವಿರಾಸತ್ : ಆಳ್ವಾಸ್ ವಿರಾಸತ್ ಪೂರ್ವಭಾವಿಯಾಗಿ ಜ.1ರಿಂದ 16ರ ತನಕ ಆಳ್ವಾಸ್ ಶಿಲ್ಪ, ವರ್ಣ ವಿರಾಸತ್ ನಡೆಯಲಿದೆ. ಸಾಂಪ್ರದಾಯಿಕ ಟೆರೆಕೊಟ್ಟಾ ಕಲಾಪ್ರಕಾರದಲ್ಲಿ ಆಂಧ್ರ ಪ್ರದೇಶ, ಒರಿಸ್ಸಾ, ಗೋವಾ, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕದಿಂದ ತಲಾ ಒಬ್ಬರು ಕಲಾವಿದರು ಶಿಲ್ಪಕಲಾಕೃತಿ ರಚಿಸಲಿದ್ದಾರೆ.

ವರ್ಣ ವಿರಾಸತ್ : ತಂಜಾವೂರು, ಕ್ಯಾಲಿಕೆಟ್, ಮಧುಬನಿ, ಕಲಂಕರಿ ಹಾಗೂ ಮೈಸೂರು ಶೈಲಿಯಲ್ಲಿ ತಲಾ ಒಬ್ಬರಂತೆ ಒಟ್ಟು ಐದು ಮಂದಿ ವರ್ಣ ವಿರಾಸತ್ ಮೂಲಕ ಚಿತ್ರಕಲಾಕೃತಿ ರಚಿಸಲಿದ್ದಾರೆ.
ಗುಜರಾತ್ , ಹೈದರಾಬಾದ್, ಮುಂಬೈ, ದೆಹಲಿ, ಚೆನ್ನೈ, ಕರ್ನಾಟಕ,ಕೇರಳ ಮತ್ತು ಭೋಪಾಳ್ನ ಒಟ್ಟು 11ಮಂದಿ ಕಲಾವಿದರು ಸಮಕಾಲೀನ ಚಿತ್ರಕಲೆಯನ್ನು ರಚಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದ ಕಲಾವಿದ ವಾಸುದೇವ ಕಾಮತ್ ಮುಂಬೈ ಇವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮೂಲತಃ ಕಾರ್ಕಳದವರಾದ ವಾಸುದೇವ ಕಾಮತ್ ಪ್ರಸ್ತುತ ಮುಂಬೈನಲ್ಲಿ ತನ್ನ ಕಲಾ ಸೇವೆಯನ್ನು ಮುನ್ನಡೆಸುತ್ತಿದ್ದಾರೆ. ಇವರು ಹಿರಿಯ ಕಲಾವಿದರೂ ಹೌದು.

0 comments:

Post a Comment