ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಸಿಹಿನಿದ್ದೆಯಲ್ಲಿದ್ದ ಮಂಗಳೂರ ಜನತೆಗೆ ಒಮ್ಮೆಲೇ ಸಿಡಿಲಬ್ಬರದ ಆಘಾತ... ನಿದ್ದೆಯಲ್ಲಿದ್ದವರೆಲ್ಲಾ ಕಣ್ಣುಹೊಸಕಿ ಕೊಂಡರು... ಹೌದು ಕನಸಲ್ಲ... ನಿಜ... ಆದರೆ... ಊಹಿಸಲೂ ಅಸಾಧ್ಯ ಘಟನೆಗೆ ಇದೇ ಮಂಗಳೂರು ಸಾಕ್ಷಿಯಾಗುವಂತಾಯಿತು.. 158ಮಂದಿಗೂ ಸಾವು ಒಂದೇ ಕ್ಷಣದಲ್ಲಿ ಬಂದೊರಗಿತ್ತು. ಅಷ್ಟೂ ಜನರ ಆಯಸ್ಸು ಅದೇ ಕ್ಷಣಕ್ಕೆ ಮುಗಿದಿತ್ತು... ಅದು ವಿಮಾನ ದುರಂತದ ಮೂಲಕ.
ಇಡೀ ದಕ್ಷಿಣ ಕನ್ನಡದ ಜನತೆಯಷ್ಟೇ ಅಲ್ಲ, ರಾಜ್ಯ, ದೇಶದ ಜನತೆ ಮರುಮ್ಮಲ ಮರುಗಿದರು. ಪುಟ್ಟ ಪುಟ್ಟ ಕಂದಮ್ಮಗಳು ಸೇರಿದಂತೆ ಹಲವು ಜಾತಿ,ಮತ,ಧರ್ಮ,ಭಾಷೆಯ ಜನತೆ ಒಂದೇ ವಿಮಾನದೊಳಗೆ ಸಿಲುಕಿ ಕ್ಷಣಾರ್ಧದಲ್ಲಿ ಕರಟಿಹೋದರು...ಜನತೆಯ ರೋಧನ ಮುಗಿಲು ಮುಟ್ಟಿತ್ತು...

ಈ ಘಟನೆ ನಡೆದು ಒಂಭತ್ತು ತಿಂಗಳುಗಳು ಉರುಳಿ ಹೋಗಿವೆ... ಹಲವಾರು ಮಂದಿ ಮೃತರ ಬಂಧುಗಳು ಪರಿಹಾರ ಕಾರ್ಯಕ್ಕಾಗಿ ಇಂದಿಗೂ ಹಂಬಲಿಸುತ್ತಿದ್ದಾರೆ... ಬಂದ ಪರಿಹಾರ ಹಣದ ವಿಷಯದಲ್ಲಿ ಕುಟುಂಬ ಕುಟುಂಬಗಳ ಮಧ್ಯೆ ದೊಡ್ಡ ಕೋಲಾಹಲಗಳು ನಡೆದಿವೆ...ಅದೆಲ್ಲವೂ ಇರಲಿ...


ಇನ್ನೇನು ಕೆಲಕ್ಷಣದಲ್ಲೇ ಮಂಗಳೂರು ...ಅಲ್ಲಲ್ಲ...ನಮ್ಮೂರು ತಲುಪುತ್ತಿದ್ದೇವೆ.ಕರ್ನಾಟಕದ ಪವಿತ್ರ ನೆಲದಲ್ಲಿ ನಾವು ಕಾಲೂರುತ್ತೇವೆ...ತನ್ನ ಮನೆಮಂದಿಯ ನೆನಪುಗಳು ಕಣ್ಣಮುಂದೆ ಹಾದು ಹೋಗುತ್ತಾ ಸೊಂಟದ ಬೆಲ್ಟ್ ಗಟ್ಟಿಮಾಡಿ ಊರಲ್ಲಿಳಿಯುವ ತವಕದಲ್ಲಿದ್ದ ಅಷ್ಟೂ ಮಂದಿಯನ್ನು ಸಾವು ತನ್ನ ತೆಕ್ಕೆಗೆ ತೆಗೆದುಕೊಂಡದ್ದು ವಿಪರ್ಯಾಸವೇ ಸರಿ.
ಆದರೆ ವಿಧಿಯ ಚಿತ್ತ ಹೇಗೆ ನೋಡಿ...ಅಂದು ನೂರ ಐವತ್ತೆಂಟು ಮಂದಿಯ ಸಾವು ಇಲ್ಲೇ ಆಗಲಿ ಎಂಬುದು ವಿಧಿ ಲೀಲೆ... ಆದರೆ ಅದೇ ಜಾಗ ಇಂದು ಪ್ರವಾಸಿಗಳ ವೀಕ್ಷಣಾ ತಾಣ!...ಇದೇ ನೋಡಿ ವೈಚಿತ್ರ!


ಹೌದು...ರಾಶಿ ರಾಶಿ ಜನ ಈ ಮಾರಣಹೋಮ ನಡೆದ ಬೆತ್ತಲೆ ಭೂಮಿಯನ್ನು ನೋಡಿ "...ಛೇ..." ಎಂದಾಡಿಕೊಳ್ಳುತ್ತಿದ್ದಾರೆ... ಅಂದು ನೋಡಬೇಕಾಗಿತ್ತು ಎಂಬವರೂ ಇದ್ದಾರೆ... ಎಂತಹ ದರಿದ್ರ ಕಲ್ಲು ಎಂದು ಅಲ್ಲಿದ್ದ ದೊಡ್ಡ ಕಲ್ಲೊಂದಕ್ಕೆ ಹಿಡಿಶಾಪ ಹಾಕಿ ಸಾಗುವ ಮಂದಿಯೂ ಅಲ್ಲಿದ್ದಾರೆ. ಇನ್ನೇನಾದರೂ ನಮಗೆ ಸಿಗಬಹುದೇ ಎಂದು ವಿಮಾನ ದುರಂತವಾದ ಸ್ಥಳದತ್ತ ಹೋಗಿ ಸೂಕ್ಷ್ಮವಾಗಿ ನೋಡುವ ಮಂದಿಯೂ ಇದ್ದಾರೆ...ಒಟ್ಟಿನಲ್ಲಿ ದಿನನಿತ್ಯ ಜನಾಕರ್ಷಣೆಯ ತಾಣವಾಗುತ್ತಿದೆ ಈ ಕೆಂಜಾರು...
ವಿಮಾನ ನಿಲ್ದಾಣದ ಪಾಶ್ರ್ವದಲ್ಲಿರುವ ಕಡಿದಾದ ಕಾಡು ಪ್ರದೇಶ. ಟೇಕಾಫ್ ಆಗುವ ವಿಮಾನಗಳು ಇದೇ ಪ್ರದೇಶದ ಮೇಲ್ಭಾಗದಲ್ಲೇ ಹಾರಿಹೋಗುತ್ತವೆ. ಅಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೂಡಾ ಇದೇ ಪ್ರದೇಶದಲ್ಲಿ ಬಿದ್ದು ಅಷ್ಟೂ ಜನರ ಸಾವಿಗೆ ಕಾರಣವಾಗಿತ್ತು. ವಿಮಾನ ಬಿದ್ದ ಸ್ಥಳದಲ್ಲಿ ಈಚಲು ಮರಗಳು ಕಾಡು ಮರಗಳಿದ್ದವು. ಕಾಯರ್ಾಚರಣೆಗೋಸ್ಕರ ಅಲ್ಲಿ ಹಾದಿಮಾಡಲಾಗಿತ್ತು... ಈಗ ಅದೊಂದು ವಿಷಾಧನೀಯ ಸ್ಥಳವಾಗಿ ಗೋಚರವಾಗುತ್ತಿದೆ.


ಸರ್ಬಿಯಾದ ಕ್ಯಾಪ್ಟನ್ ಜಟ್ಕೋ ಗ್ಲೂಸಿಕ್ ಈ ದುರಂತಕ್ಕೀಡಾದ ವಿಮಾನದ ಮುಖ್ಯ ಪೈಲೆಟ್ ಆಗಿದ್ದರು. ಎಚ್.ಎಸ್.ಅಹ್ಲುವಾಲಿಯಾ ಸಹ ಪೈಲೆಟ್ ಆಗಿ ಕಾರ್ಯ ನಿರ್ವಹಿಸಿದ್ದರು. ವಿಮಾನದಲ್ಲಿದ್ದ ಸಿ.ವಿ.ಆರ್ ನಲ್ಲಿ ದಾಖಲಾದ ಅಂಶದಂತೆ ಕಟ್ಟ ಕಡೆಯ 2.05 ನಿಮಿಷಗಳಲ್ಲಿ ಸಿಕ್ಕಿದ ದಾಖಲೆಯಂತೆ ಸಹ ಪೈಲೆಟ್ ವಿಮಾನವನ್ನು ಇನ್ನೊಂದು ಸುತ್ತು ಹಾರಾಟ ನಡೆಸುವಂತೆ ಕೋರಿದ್ದರು. ಆದರೆ ಪೈಲೆಟ್ ಆ ಮಾತಿಗೆ ಕಿವಿಗೊಡಲಿಲ್ಲ. ನಮಗೆ ರನ್ ವೇ ಮುಗಿದಿದೆ ಎಂಬ ಧ್ವನಿ ಹಾಗೂ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸ್ಫೋಟದ ಧ್ವನಿಯೂ ಸಿ.ವಿ.ಆರ್ ನಲ್ಲಿ ದಾಖಲಾಗಿದ್ದವು. ಇವೆಲ್ಲವೂ ಇಲ್ಲಿ ನಡೆದಿದೆ ಎಂಬುದಕ್ಕೆ ಸ್ಪಷ್ಟ ದಾಖಲೆಯಾಗಿ ನೂರಾರು ಜನ ಸುಟ್ಟುಕರಕಲಾದ ಭೂಮಿ ವಿಕಾರವಾಗಿ ಇಂದು ಗೋಚರವಾಗುತ್ತಿದೆ.


ದುರಂತದಲ್ಲಿ ಮಡಿದವರ ಸ್ಮರಣಾರ್ಥ ಕಪ್ಪುಶಿಲೆಯಲ್ಲಿ ಅಷ್ಟೂ ಜನರ ಹೆಸರು ಕೆತ್ತಿ ಸ್ಟೀಲಿನ ಚೌಕಟ್ಟು ನಿರ್ಮಿಸಿ ದುರಂತ ನಡೆದ ಸ್ಥಳಕ್ಕಿಂತ ಕೊಂಚ ಮೇಲ್ಭಾಗದಲ್ಲಿ ರಸ್ತೆಯಂಚಿನಲ್ಲಿ ಸ್ಮಾರಕನಿರ್ಮಿಸಲಾಗಿತ್ತು. ಆದರೆ ಕಿಡಿಗೇಡಿಗಳು ಅವೆಲ್ಲವನ್ನೂ ಪುಡಿಗಟ್ಟಿದ್ದಾರೆ. ಇದಾಗಿ ಮೂರು ತಿಂಗಳು ಸಂದರೂ ಕಿಡಿಗೇಡಿಗಳನ್ನು ಹುಡುಕುವ ಕಾರ್ಯ ನಡೆದಿಲ್ಲ. ಸ್ಮಾರಕವನ್ನು ಪುನರ್ ನಿರ್ಮಾಣಮಾಡಿಲ್ಲ. ಮಡಿದವರ ಹೆಸರುಗಳನ್ನೊಳಗೊಂಡ ಮಾರ್ಬಲ್ ತುಂಡುಗಳು ರಸ್ತೆಯಂಚಿನಲ್ಲಿ ಬೋರಲಾಗಿ ಬಿದ್ದಿವೆ...ಕೆಳಭಾಗದಲ್ಲಿ ಬೃಹತ್ ವಿಮಾನದಲ್ಲಿ ಬಂದ ದುರದೃಷ್ಟರ ಚಪ್ಪಲಿ, ಬಟ್ಟೆಬರೆಗಳು, ಸೂಟ್ ಕೇಸ್ , ಬ್ಯಾಗ್ಗಳ ಅವಶೇಷಗಳು ಅಲ್ಲಲ್ಲಿ ಚದುರಿ ಬಿದ್ದಂತೆ...!
ಈ ಭಾಗದಲ್ಲಿ ಇಂದಿಗೂ ರಾತ್ರಿವೇಳೆಯಲ್ಲಿ ಯಾರೊಬ್ಬರೂ ಸಂಚರಿಸುತ್ತಿಲ್ಲ!...

- ಆದೂರು

0 comments:

Post a Comment