ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶಾರ್ಜಾ: ಇಲ್ಲಿನ ವಿಶೇಷ ಆರ್ಥಿಕ ವಲಯದಲ್ಲಿರುವ ಶಾರ್ಜಾದ ಹಮ್ರಿಯ ಸಿಮೆಂಟ್ ಕಂಪೆನಿಯಲ್ಲಿ ನೌಕರನಾಗಿದ್ದ ಕನ್ನಡಿಗ ಯುವಕ ಅಕ್ಷಯ್ ಕೆ ಶೆಟ್ಟಿ ತಾನು ಕೆಲಸ ಮಾಡುತ್ತಿರುವ ಕಂಪೆನಿಯ ನೌಕರಿಗೆ ರಾಜಿನಾಮೆ ಕೊಟ್ಟರೂ ತನ್ನದಲ್ಲದ ತಪ್ಪಿಗೆ ಕಂಪೆನಿಯ ಬೇಜವಾಬ್ಧಾರಿ ವರ್ತನೆಯಿಂದಾಗಿ ಊರಿಗೆ ಬರಲಾಗದೆ ಅತ್ತ ಕೆಲಸವೂ ಇಲ್ಲದೆ ಜೀವನ ನಡೆಸುವುದಕ್ಕೆ ಸಂಕಷ್ಟ ಪಡುತ್ತಿರುವ ಕರುಣಾಜನಕ ಕಥೆ ಬೆಳಕಿಗೆ ಬಂದಿದೆ.ಜೊತೆಗೆ ಆಸ್ಟ್ರೇಲಿಯಾದಲ್ಲಿ ಅಥವಾ ಇನ್ನಾವುದೋ ಯೂರೋಪಿಯನ್ ದೇಶಗಳಲ್ಲಿ ಭಾರತೀಯರ ಮೇಲೆ ದೌರ್ಜನ್ಯ ನಡೆದರೆ ಭಾರತದಲ್ಲಿ ಪ್ರತಿಭಟಿಸುವ ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯರ ಮೇಲೆ ಅನ್ಯಾಯ ನಡೆದರೆ ಮೌನವಾಗಿರುವುದೇಕೆ ? ಎಂಬ ಪ್ರಶ್ನೆಯನ್ನೂ ಈ ಪ್ರಕರಣ ಹುಟ್ಟು ಹಾಕಿದೆ. ಇಲ್ಲಿ ಅಕ್ಷಯ್ ಶೆಟ್ಟಿಯವರಿಗೆ ಸಹಾಯ ಮಾಡಬೇಕಿದ್ದ ಯು.ಎ.ಇ. ಯ ಭಾರತೀಯ ದೂತಾವಾಸ ಕಚೇರಿ ಇವರ ಹಲವು ಮನವಿಗಳ ಹೊರತಾಗಿಯೂ ಈ ಪ್ರಕರಣದಲ್ಲಿ ಕಾಟಾಚಾರದ ಉತ್ತರಗಳನ್ನು ಕೊಡುತ್ತಾ ಕಾಲ ಕಳೆಯುತ್ತಿದೆ.


ಮೂಲತಃ ಉಡುಪಿ ಜಿಲ್ಲೆ ಕಾಪುವಿನವರಾದ ಅಕ್ಷಯ್ ಶೆಟ್ಟಿ ಉದ್ಯೋಗವನ್ನು ಅರಸಿಕೊಂಡು ಕಳೆದ ಎರಡು ವರ್ಷಗಳ ಹಿಂದೆ ಯು.ಎ.ಇ ಗೆ ಬಂದರು. ಹಾಗೆ ಬಂದವರು ಇಲ್ಲಿನ ಖ್ಯಾತ ಸಿಮೆಂಟ್ ಕಂಪೆನಿಯಾದ ಹಮ್ರಿಯ ಸಿಮೆಂಟ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಕಂಪೆನಿಯಲ್ಲಿ ೬೦ % ಪಾಲುದಾರಿಕೆ ಸ್ಥಳೀಯರದ್ದಾದರೆ ಉಳಿದ ೪೦ % ಪಾಲುದಾರಿಕೆ ಹೊರಗಿನವರದು. ಹಾಗಾಗಿ ಇಲ್ಲಿ ಕೆಲವು ಮಟ್ಟಿಗಿನ ಆಂತರಿಕ ರಾಜಕೀಯ ನಡೆಯುತ್ತಿತ್ತು. ಕಂಪೆನಿಯ ಉನ್ನತ ಹುದ್ದೆಯಲ್ಲಿದ್ದ ಕೆಲವು ಪಾಕಿಸ್ತಾನಿ ಮೂಲದ ಅಧಿಕಾರಿಗಳು ಇಲ್ಲಿ ಭಾರತೀಯರಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಇವರ ತಾರತಮ್ಯ ಧೋರಣೆಯಿಂದ ಬೇಸತ್ತ ನೌಕರರು ಈ ಕಂಪೆನಿಯಲ್ಲಿ ಕೆಲಸ ಮಾಡುವುದೇ ದುಸ್ತರವಾಗಿತ್ತು. ಹೀಗಾಗಿ ಅಕ್ಷಯ್ ಶೆಟ್ಟಿ ಇಲ್ಲಿ ತಮ್ಮ ಕಂಟ್ರಾಕ್ಟ್ ಅವಧಿ ಮುಗಿದ ಕೂಡಲೇ ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟರು. ಅವರ ಜೊತೆ ಇನ್ನಿಬ್ಬರೂ ಭಾರತೀಯರೂ ರಾಜಿನಾಮೆ ಕೊಟ್ಟರು. ಯು.ಎ.ಇ ಕಾನೂನು ಪ್ರಕಾರ ಯಾವುದೇ ವಿದೇಶೀ ನೌಕರ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿದರೆ ಆತನ ರಾಜಿನಾಮೆಯನ್ನು ಅಂಗೀಕರಿಸಿ ಆತನಿಗೆ ಸಲ್ಲಬೇಕಾದ ಎಲ್ಲ ಹಣವನ್ನು ಪಾವತಿ ಮಾಡಿ ಆತನನ್ನು ಊರಿಗೆ ಕಳುಹಿಸಿಕೊಡುವ ಹೊಣೆ ಕಂಪೆನಿಯದ್ದಾಗಿರುತ್ತದೆ.

ಆದರೆ ಇಲ್ಲಿ ಹಾಗಾಗಲೇ ಇಲ್ಲ. ಅಕ್ಟೋಬರ್ ೧೦ ರಂದು ಅಕ್ಷಯ ಶೆಟ್ಟಿ ರಾಜಿನಾಮೆ ಕೊಟ್ಟಿದ್ದನ್ನು ಅಂಗೀಕರಿಸಿದ ಹಮ್ರಿಯ ಸಿಮೆಂಟ್ ಕಂಪೆನಿ ಅವರ ಪಾಸ್ಪೋರ್ಟ್ ಅನ್ನು ಕೊಡದೆ ಇದುವರೆಗೂ ಅವರನ್ನು ಸತಾಯಿಸತೊಡಗಿದೆ. ಇದಕ್ಕೆ ಕಾರಣವೇನೆಂದರೆ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿತವಾಗಿರುವ ಈ ಕಂಪೆನಿ ಕಳೆದ ಐದು ತಿಂಗಳಿನಿಂದ ತನ್ನ ಟ್ರೇಡ್ ಲೈಸೆನ್ಸ್ ಅನ್ನು ನವೀಕರಿಸದೇ ಇರುವುದಾಗಿದೆ. ಕಂಪೆನಿಯ ಈ ಬೇಜವಾಬ್ಧಾರಿ ವರ್ತನೆಯಿಂದಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟ ಅಕ್ಷಯ್ ಪಿ ಶೆಟ್ಟಿ ಮತ್ತು ಸಂಗಡಿಗರು ಇತ್ತ ಊರಿಗೂ ಬರಲಾಗದೇ ಅತ್ತ ಕೆಲಸವೂ ಇಲ್ಲದೇ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇವರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಕಂಪೆನಿ ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಸುಮ್ಮನೆ ಕುಳಿತಿದೆ. ಈ ಸಮಸ್ಯೆಯ ಕುರಿತು ಭಾರತೀಯ ರಾಯಭಾರಿ ಕಚೇರಿಗೆ ದೂರು ಕೊಟ್ಟರೂ ಅವರು ನಾವು ಕಂಪೆನಿಗೆ ಕಾಗದ ಬರೆಯುತ್ತೇವೆ ಎಂಬ ಹಾರಿಕೆಯ ಉತ್ತರವನ್ನೂ ಇದುವರೆಗೆ ನೀಡುತ್ತಾ ಬಂದಿದ್ದಾರೆ. ಇದೀಗ ಅಕ್ಷಯ್ ಶೆಟ್ಟಿ ತನ್ನ ಕೈಯಲ್ಲಿರುವ ಎಲ್ಲಾ ಹಣ ಕಚೇರಿ ಕೆಲಸಗಳಿಗೆ ಖರ್ಚು ಮಾಡಿ ಸಂಕಷ್ಟದಲ್ಲಿದ್ದಾರೆ. ಇವರ ಸಮಸ್ಯೆಗೆ ಸ್ಪಂದಿಸಬೇಕಿದ್ದ ರಾಯಭಾರಿ ಕಚೇರಿಯ ಅಧಿಕಾರಿಗಳು ಮಾತ್ರ ಕೇವಲ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾ ಭಾರತೀಯ ಹಕ್ಕುಗಳ ಕುರಿತು ಅಲ್ಲಲ್ಲಿ ಭಾಷಣ ಬಿಗಿಯುತ್ತಾ ಇದ್ದಾರೆ.

ಸರ್ಕಾರ ಏನು ಮಾಡುತ್ತಿದೆ ?

ಆಸ್ಟ್ರೇಲಿಯಾದಲ್ಲಿ ಅಥವಾ ಇನ್ನಾವುದೋ ಯುರೋಪಿಯನ್ ದೇಶದಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆದರೆ ಅದು ದೊಡ್ಡ ಸುದ್ಧಿಯಾಗುತ್ತದೆ. ಟಿವಿ ಮತ್ತು ಪತ್ರಿಕೆಗಳಲ್ಲಿ ಅದು ಅಂದಿನ ಚರ್ಚಾ ವಿಷಯವಾಗಿರುತ್ತದೆ. ಆದರೆ ಕೊಲ್ಲಿ ದೇಶಗಳಲ್ಲಿ ಆ ರೀತಿಯ ದೌರ್ಜನ್ಯಗಳು ನಿರಂತರ ಭಾರತೀಯರ ಮೇಲೆ ನಡೆಯುತ್ತಿದ್ದರೂ ಅದು ಸುದ್ಧಿಯಾಗುವುದೇ ಇಲ್ಲ. ಅಕ್ಷಯ್ ಶೆಟ್ಟಿಯವರ ವಿಚಾರದಲ್ಲೂ ಆಗಿರುವುದು ಅದೇ . ಇವರು ತಮ್ಮ ಈ ಗೋಳನ್ನು ಹಲವರ ಬಳಿ ತೋಡಿಕೊಂಡರೂ ಇನ್ನು ಇವರಿಗೆ ಉತ್ತರ ಸಿಕ್ಕಿಲ್ಲ. ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತಿರುವ ಅಕ್ಷಯ್ ಇದೀಗ ಏಕಾಂಗಿಯಾಗಿ ಕಾನೂನು ಹೋರಾಟ ನಡೆಸುತ್ತಿದ್ದರೆ. ಅಲ್ಲಿ ಡಿಸೆಂಬರ್ ೨೮ ರಂದು ಇವರಿಗೆ ದಿನಾಂಕ ಕೊಡಲಾಗಿದೆ. ಅಲ್ಲಿಯವರೆಗೆ ತನ್ನದಲ್ಲದ ತಪ್ಪಿಗೆ ಇವರು ಕೆಲಸವೂ ಇಲ್ಲದೇ ಖರ್ಚಿಗೆ ಹಣವೂ ಇಲ್ಲದೇ ದಿನದೂಡಬೇಕಿದೆ. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಐದು ಜನ ಮಂತ್ರಿಗಳಿದ್ದು ಅವರು ಈ ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಿದೆ. ಸ್ವತಃ ವಿದೇಶಾಂಗ ಸಚಿವರಾಗಿರುವ ಎಸ್.ಎಂ. ಕೃಷ್ಣ ಈ ಕನ್ನಡಿಗನ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ಕುರಿತು ಯು.ಎ.ಇ. ನ ಭಾರತೀಯ ರಾಯಭಾರಿ ಕಚೇರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ಉಡುಪಿ ಜಿಲ್ಲೆಯ ಪ್ರಭಾವಿ ಮಂತ್ರಿ ಎಂ. ವೀರಪ್ಪ ಮೊಯ್ಲಿ , ಕರ್ನಾಟಕ ಸರ್ಕಾರದ ಅನಿವಾಸಿ ಕನ್ನಡಿಗರ ಉಸ್ತುವಾರಿ ವಹಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ , ಜೊತೆಗೆ ಯು.ಎ.ಇ ಯ ಕನ್ನಡ ಸಂಘ ಸಂಸ್ಥೆಗಳು ಇನ್ನಾದರೂ ಈ ಅನಿವಾಸಿ ಕನ್ನಡಿಗನ ನೆರವಿಗೆ ಧಾವಿಸಲು ಮುಂದಾಗಬೇಕು. ಕಂಪೆನಿಯ ಟ್ರೇಡ್ ಲೈಸೆನ್ಸ್ ನವೀಕರಣ ಮಾಡದ ಅಧಿಕಾರಿಗಳ ತಪ್ಪಿಗಾಗಿ ಇದೀಗ ಸಂಕಷ್ಟದಲ್ಲಿರುವ ಈ ಕನ್ನಡಿಗನ ನೆರವಿಗೆ ಮುಂದಾಗಬೇಕಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೂ ಹೌದು .

- ಅಶ್ರಫ್ ಮಂಜ್ರಾಬಾದ್. ಸಕಲೇಶಪುರ

0 comments:

Post a Comment