ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ನೂಪುರ ಭ್ರಮರಿಯಿಂದ ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ 'ವರ್ಷದ ಶ್ರೇಷ್ಟ ನೃತ್ಯ ವಿಮರ್ಶನ' ಸ್ಪರ್ಧೆ
ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕುರಿತ ಪ್ರತಿಷ್ಟಿತ ದ್ವೈಮಾಸಿಕ 'ನೂಪುರ ಭ್ರಮರಿ' ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಲಿನಿಂದ ರಾಜ್ಯಮಟ್ಟದ 'ವರ್ಷದ ಶ್ರೇಷ್ಟ ನೃತ್ಯ ವಿಮರ್ಶನ' ಸ್ಪರ್ಧೆಯನ್ನು ಆಯೋಜಿಸಿದೆ. ಈಗಾಗಲೇ 2010ನೇ ಸಾಲಿನಲ್ಲಿ (ಜನವರಿ-ಡಿಸೆಂಬರ್) ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆಗಳು/ನಿಯತಕಾಲಿಕೆಗಳಲ್ಲಿ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ. ಓರ್ವ ಲೇಖಕ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮರ್ಶೆಯ ವಿವರಗಳನ್ನು ಬರೆದು ಲಗತ್ತಿಸಬೇಕು. ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ.



ಲೇಖಕರು ತಮ್ಮ ಅತ್ಯುತ್ತಮವೆನಿಸುವ 3 ವಿಮರ್ಶೆ ಅಥವಾ ಅದರ ಜೆರಾಕ್ಸ್ ಪ್ರತಿಯನ್ನು ಅಂಚೆ ಅಥವಾ ಈ ಮೈಲ್ ಮೂಲಕ ಜನವರಿ 5, 2011 ರ ಒಳಗೆ ತಲುಪುವಂತೆ ಕಳುಹಿಸಬೇಕು. ಜನವರಿ 5 ಕೊನೆಯ ದಿನ. ಅತ್ಯುತ್ತಮನಿಸುವ ವಿಮರ್ಶೆಗೆ ಫೆಬ್ರವರಿ 13, 2011ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸನ್ಮಾನಪತ್ರ, ಫಲಕ, ನಗದು ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.
ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ:
ಮನೋರಮಾ ಬಿ.ಎನ್
ಸಂಪಾದಕರು, 'ನೂಪುರ ಭ್ರಮರಿ'
ನಂ.104, ಕೌಶಲ್ ರೀಜೆನ್ಸಿ
1ನೇಅಡ್ಡರಸ್ತೆ, ಪ್ರಕಾಶ್ ನಗರ, ರಾಜಾಜಿನಗರ,
ಬೆಂಗಳೂರು 560085
ದೂರವಾಣಿ: 9964140927, 9481765544
editor@noopurabhramari.com

0 comments:

Post a Comment