ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ 'ಚೈತ್ರರಶ್ಮಿ' ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ 'ಚೈತ್ರರಶ್ಮಿ ಪ್ರಕಾಶನ'ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.
ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ಕಥೆಯನ್ನು ಅಂಚೆ ಅಥವಾ ಈ ಮೈಲ್ ಮೂಲಕ ಡಿಸೆಂಬರ್ 30 ರ ಒಳಗೆ ತಲುಪುವಂತೆ ಕಳುಹಿಸಬೇಕು. ಡಿಸೆಂಬರ್ 30 ಕೊನೆಯ ದಿನ.




ಕಥೆಗಳನ್ನು ಕಳುಹಿಸಬೇಕಾದ ವಿಳಾಸ:
ರಾಮಚಂದ್ರ ಹೆಗಡೆ.ಸಿ.ಎಸ್.
ಸಂಪಾದಕರು, ಚೈತ್ರರಶ್ಮಿ ಮಾಸಪತ್ರಿಕೆ
`ನೆನಪು' ನಂ. 33(172/3)
3ನೇ ಸಿ ಅಡ್ಡರಸ್ತೆ, ಕತ್ರಿಗುಪ್ಪ ಮುಖ್ಯರಸ್ತೆ.
ವಿವೇಕಾನಂದನಗರ, ಬೆಂಗಳೂರು 560085
editor@chaitrarashmi.com ಕಳುಹಿಸಬಹುದು.

1 comments:

Anonymous said...

Avadhiya moolaka ivathe gotthagiddu 'ekanasu' anta iruva tana. khushiyaytu.

Post a Comment