ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಜಕೀಯ
ಬಂಗಾರಪ್ಪ ಪಕ್ಷಾಂತರ ಮಾಡಿದಾಗ ಶೇಕ್ಸ್ ಪಿಯರ್ ಟ್ರೆಜಿಡಿಗಳು ನೆನಪಾದವು...

ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ಕಾಂಗ್ರೆಸ್, ಕಾಂಗ್ರೆಸ್ ಬಿಟ್ಟು ಕ್ರಾಂತಿರಂಗದ ಸ್ಥಾಪನೆ, ಕ್ರಾಂತಿರಂಗದಿಂದ ಪುನಃ ಕಾಂಗ್ರೆಸ್, ಕಾಂಗ್ರೆಸ್ ಬಿಟ್ಟು ಕರ್ನಾಟಕ ಕಾಂಗ್ರೆಸ್ ಪಕ್ಷಷದ ಸ್ಥಾಪನೆ, ಪುನಃ ಕಾಂಕ್ರೆಸ್ ಸೇರ್ಪಡೆ, ಕಾಂಗ್ರೆಸ್ ನಿಂದ ಬಿ.ಜೆ.ಪಿ, ಬಿ.ಜೆ.ಪಿ ಬಿಟ್ಟು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ, ಸಮಾಜವಾದಿಯಿಂದ ಕಾಂಗ್ರೆಸ್ ಇದು ಬಂಗಾರಪ್ಪನವರ ಪಕ್ಷಾಂತರದ ಇತಿಹಾಸ!. ಈಗ ಕಾಂಗ್ರೆಸ್ ತೊರೆದು ಜೆ.ಡಿ.ಎಸ್. ಸೇರಿದ್ದಾರೆ ಸಾರೆಕೊಪ್ಪ ಬಂಗಾರಪ್ಪ.
ಬಂಗಾರಪ್ಪನವರಲ್ಲಿ ಎಲ್ಲವೂ ಇತ್ತು. ನಾಯಕತ್ವ ಗುಣ, ಅಪಾರ ಜನ ಬೆಂಬಲ, ನೆರವಂತಿಕೆ, ಎಲ್ಲವೂ ಇತ್ತು. ದೇವರಾಜ ಅರಸರ ನಂತರ ಕರ್ನಾಟಕ ಕಂಡ ಅತ್ಯಂತ charishmatic ರಾಜಕಾರಣಿ ಎಸ್.ಬಂಗಾರಪ್ಪ. ಅವರಿಗೆ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದರು. (ಈಗ ಸಾವಿರಾರು ಉಳಿದಿದ್ದಾರೆ!).ಹಾಗೂ ಸಾವಿರಾರು ಭಕ್ತಾಧಿಗಳೂಇದ್ದರು. ಯಾವ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದರೂ ಅವರ ಹೆಸರಿನಿಂದಲೇ ಸುಮಾರು 3ಲಕ್ಷ ಮತಗಳು ಬರುತ್ತಿದ್ದವು. ಅಂತಹ ಜನ ಬೆಂಬಲದಿಂದಲೇ ಅವರು ಆರು ಬೇರೆ ಬೇರೆ ಪಕ್ಷಗಳಿಂದ ಈತನಕ ಚುನಾಯಿತರಾಗಿದ್ದಾರೆ. ಯಾವ ಪಕ್ಷದಿಂದ ಸ್ಪರ್ಧಿಸಿದರೂ ಜನ ಅವರಿಗೆ ಮತ ಚಲಾಯಿಸಿದ್ದಾರೆ ಅಂತಹ ಜನಕ್ಕೆ ಪಕ್ಷಕ್ಕಿಂತ ಬಂಗಾರಪ್ಪನವರ ಬಗ್ಗೆ ಹೆಚ್ಚು ವಿಶ್ವಾಸವಿತ್ತು ಎಂದರ್ಥವಲ್ಲವೇ?

ಸುಮಾರು ನಾಲ್ಕು ದಶಕಗಳ ಕಾಲ ಜನರಿಂದ ಈ ಪ್ರಮಾಣದಲ್ಲಿ ಬೆಂಬಲ ಪಡೆಯುವುದು ಸುಲಭದ ವಿಷಯವಲ್ಲ. ದೇವೇಗೌಡರೂ ನಾಲ್ಕು ದಶಕಗಳಿಂದ ಚಾಲ್ತಿಯಲ್ಲಿದ್ದಾರೆ. ಆದರೆ ಹಲವು ಬಾರಿ ರಾಜಕೀಯವಾಗಿ "ಕೋಮಾ"ಕ್ಕೆ ಹೋಗಿದ್ದಾರೆ. ಬಂಗಾರಪ್ಪನವರು ಒಂದೆರಡು ಬಾರಿ ರಾಜಕೀಯ ಅಸ್ವಸ್ಥರಾಗಿದ್ದರು. ಆದರೆ 2008ರ ತನಕ ಎಂದೂ ಕೋಮಾಕ್ಕೆ ಹೋಗಲೇ ಇಲ್ಲ. ಒಮ್ಮೆ ಆಕಸ್ಮಿಕವಾಗಿ ಸೋತದ್ದನ್ನು ಬಿಟ್ಟರೆ ನಾಲ್ಕುದಶಕಗಳ ಕಾಲ ಸೋಲಿಲ್ಲದ ಸರದಾರನಾಗಿ ಮೆರೆದರು. 1978ರಿಂದ 2004ರ ತನಕ ಯಾವ ಪಕ್ಷದಲ್ಲಿದ್ದರೂ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಅವರ 20 -25 ಬೆಂಬಲಿಗರು ಗೆಲ್ಲುತ್ತಿದ್ದರು. ಇಷ್ಟೆಲ್ಲಾ ಇದ್ದೂ ಸ್ವಲ್ಪ ತಾಳ್ಮೆಯು ಇದ್ದಿದ್ದರೆ ಹತ್ತು ವರ್ಷ ಮುಖ್ಯಮಂತ್ರಿಯಾಗಿ ಮೆರೆಯಬಹುದಿತ್ತು. ಆದರೆ ತಾಳ್ಮೆಯೇ ಇರಲಿಲ್ಲ.

1983ರಲ್ಲಿ ಅವರ ಕ್ರಾಂತಿರಂಗ ಪಕ್ಷ ಜನತಾ ದಳದೊಂದಿಗೆ ಕೈಜೋಡಿಸಿತು. ದಳದ ರಾಮಕೃಷ್ಣ ಹೆಗಡೆ ಅಥವಾ ಬಂಗಾರಪ್ಪ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿದ್ದವು. ಹೆಗಡೆ ಮುಖ್ಯಮಂತ್ರಿಯಾದರು. ತಕ್ಷಣ ಬಂಗಾರಪ್ಪ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು. ಹೆಗಡೆಯವರಿಗೆ ಬೆಂಬಲ ನೀಡಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಹೆಗಡೆಯವರೊಂದಿಗೆ ಮುನಿಸಿಕೊಂಡಿತ್ತು.ಬಂಗಾರಪ್ಪ ಸ್ಪಲ್ಪ ತಾಳ್ಮೆ ತೋರಿದ್ದರೆ ಬಿಜೆಪಿಯ ಮುನಿಸು ಅವರಿಗೆ ಲಾಭ ತರುವ ಸಾಧ್ಯತೆಗಳಿತ್ತು. ಆದರೆ ಬಂಗಾರಪ್ಪನವರಿಗೆ ತಾಳ್ಮೆ ಇರಲಿಲ್ಲ. ಅವರಾಗಲೇ ಜನತಾ ಸರಕಾರದಿಂದ ದೂರ ಸರಿದು ಕಾಂಗ್ರೆಸ್ ಸೇರಿ ವಿರೋಧ ಪಕ್ಷದ ನಾಯಕರಾಗಿದ್ದರು.! ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರನ್ನು ಕೆಳಗಿಳಿಸಿ ವೀರಪ್ಪ ಮೊಯ್ಲಿ ಅವರನ್ನು ಕುರ್ಚಿಯಲ್ಲಿ ಕೂರಿಸಿತ್ತು ಕಾಂಗ್ರೆಸ್ ಪಕ್ಷ. ಬಂಗಾರಪ್ಪ ಕಾಂಗ್ರೆಸ್ ತೊರೆದು ಕರ್ನಾಟಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು.
ಮುಖ್ಯಮಂತ್ರಿ ಕುರ್ಚಿಹೋದ ತಕ್ಷಣ ಅವರ ರಾಜಕೀಯ ಜೀವನ ಮುಗಿಯುತ್ತಿರಲಿಲ್ಲ. ಮುಂದೆ ಕಾಂಗ್ರೆಸ್ ನಿಂದಲೇ ಮುಖ್ಯಮಂತ್ರಿಯಾಗುವ ಅವಕಾಶ ಹಲವು ಬಾರಿ ಬರುತ್ತಿತ್ತು. ಕೆಲವು ವರುಷಗಳ ನಂತರ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂತು. ಆಗ ಮುಖ್ಯಮಂತ್ರಿ ಕುರ್ಚಿ ಒಲಿದದ್ದು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ!

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಪದವಿ ಅಲಂಕರಿಸುವುದನ್ನು ನೋಡುವುದರ ಹೊರತು ಬಂಗಾರಪ್ಪರಿಗೆ ಬೇರೆ ಮಾರ್ಗವೇ ಇರಲಿಲ್ಲ. 2004ರಲ್ಲಿ ಕೇಂದ್ರದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿತ್ತು. ಬಂಗಾರಪ್ಪ ಥಟ್ ಎಂದು ಬಿಜೆಪಿಗೆ ಹಾರಿದರು. ಬಿಜೆಪಿ ಸೋತುಹೋಯಿತು. ಕಾಂಗ್ರೆಸ್ ನಲ್ಲಿಯೇ ಮುಂದುವರಿಯುತ್ತಿದ್ದರೆ ಅವರನ್ನು ಮಂತ್ರಿ ಮಾಡುವುದು ಕಾಂಗ್ರೆಸ್ ಗೆ ಅನಿವಾರ್ಯವಾಗುತ್ತಿತ್ತು.ಬಂಗಾರಪ್ಪ ಪ್ರಥಮಬಾರಿ ಮುಖ್ಯಮಂತ್ರಿ ಕುರ್ಚಿಯ ಸನಿಹ ತಲುಪಿದ್ದು 1983ರ ವಿಧಾನಸಭೆಯ ಚುನಾವಣೆಯ ನಂತರ. ಅದು ಯಡಿಯೂರಪ್ಪನವರು ಎದುರಿಸಿದ ಪ್ರಪ್ರಥಮ ವಿಧಾನಸಭೆ ಚುನಾವಣೆಯೂ ಆಗಿತ್ತು.! ಬಂಗಾರಪ್ಪ ಪ್ರಥಮಬಾರಿ ಮುಖ್ಯಮಂತ್ರಿಯಾಗುವ ಸಂದರ್ಭ ನಿರ್ಮಾಣವಾದಾಗ ಕುಮಾರಸ್ವಾಮಿಯವರಿಗೆ ಇನ್ನೂ 18 - 20 ವರ್ಷ.ರೆಡ್ಡಿಗಳು ಬಹುಶಃ ಹೈಸ್ಕೂಲ್ ಗೆ ಹೋಗುತ್ತಿದ್ದರು.!

1991ರಲ್ಲಿ ರಾಮಕೃಷ್ಣ ಹೆಗಡೆಯವರ ವಿರುದ್ಧ ಸಿದ್ದನ್ಯಾಮ್ ಗೌಡ ಎಂಬ ಅನಾಮಧೇಯ ಚುನಾಯಿತನಾದ. ಆತನನ್ನು ಗೆಲ್ಲಿಸಿದ್ದು ಬಂಗಾರಪ್ಪನವರೇ. ಅಂತಹ ಸುಮಾರು 30 ಅನಾಮಧೇಯರನ್ನು ಬಂಗಾರಪ್ಪ ಗೆಲ್ಲಿಸಿದ್ದಾರೆ.ಅಷ್ಟೊಂದು ಪ್ರಭಾವಶಾಲಿಯಾಗಿ ಬೆಳೆದಿದ್ದ ಬಂಗಾರಪ್ಪ ಇವತ್ತು ಯಡಿಯೂರಪ್ಪರ ಮಗನ ಎದರೂ ಸೋತರು!.ಅವರನ್ನು ನೋಡಿದರೆ ಕಿಂಗ್ ಲಿಯರ್ ನ ಟ್ರೆಜಿಡಿ ನೆನಪಾಗುತ್ತದೆ. ಶೇಕ್ಸ್ ಪಿಯರ್ ನ ನಾಟಕ ಕಿಂಗ್ ಲೀಯರ್ ನಲ್ಲಿ ಲಿಯರ್ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಕೊನೆಯಲ್ಲಿ ಮಕ್ಕಳ ಪ್ರೀತಿಯನ್ನೂ . ಲಿಯರ್ ಕಳೆದುಹೋದ ಗತ ವೈಭವದ ದಿನಗಳ ಸಂಕೇತ. ಲೋಕಸಭೆ, ವಿಧಾನ ಸಭೆ ಎರಡೂ ಚುನಾವಣೆಗಳನ್ನೂ ಸೋತ ಎಸ್.ಬಂಗಾರಪ್ಪ ಲಿಯರ್ ಅಲ್ಲವೇ? ಅನಾಮಧೇಯರನ್ನೂ ಗೆಲ್ಲಿಸುತ್ತಿದ್ದ ಬಂಗಾರಪ್ಪ ಇಂದು ಸ್ವತಃ ತಾವೇ ಗೆಲ್ಲಲಾಗದ ಸ್ಥಿತಿ ತಲುಪಿದ್ದಾರೆ.

ಯಡಿಯೂರಪ್ಪನವರು ಆದರ್ಷ ರಾಜಕಾರಣಿ ಎಂದು ನಾನು ಹೇಳುತ್ತಿಲ್ಲ. ಆದರೆ ಸುಮಾರು 3ದಶಕಗಳ ಕಾಲ ಒಂದೇ ಪಕ್ಷದಲ್ಲಿ ದುಡಿದಿದ್ದರಿಂದ 2008ರಲ್ಲಿ ಬಿಜೆಪಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಈ 3ದಶಕಗಳಲ್ಲಿ ಅವರು ಪಕ್ಷ ಬಿಡುತ್ತೇನೆಂದು ಹೆದರಿಸಿರಬಹುದು. ಆದರೆ ಹೆದರಿಸುವುದಕ್ಕೂ ಆರೇಳುಬಾರಿ ಪಕ್ಷ ಬಿಡುವುದಕ್ಕೂ ವ್ಯತ್ಯಾಸವಿದೆ ಅಲ್ಲವೇ?ಅವರೇನಾದರೂ ಆರೇಳುಬಾರಿ ಪಕ್ಷ ತೊರೆದಿದ್ದರೆ ಖಂಡಿತಾ 2008ರಲ್ಲಿ ಖಂಡಿತಾ ಬಿಜೆಪಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುತ್ತಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಅನಂತಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಅನುಮಾನಗಳು ಹಿಂದೆ ಇದ್ದವು. ಆದರೂ ಯಡಿಯೂರಪ್ಪ ಪಕ್ಷ ತೊರೆಯಲಿಲ್ಲ. ಇಂತಹ ಪರಿಸ್ಥಿತಿ ಬಂಗಾರಪ್ಪನವರಿಗೆ ಹಲವು ಬಾರಿ ಬಂದಿದೆ. ಪ್ರತಿ ಬಾರಿಯೂ ಪಕ್ಷ ತೊರೆದಿದ್ದಾರೆ. ಕೇವಲ ಪಕ್ಷ ನಿಷ್ಠೆಯಿಂದಲೇ ಇಂದು ಮುನಿಯಪ್ಪ ಕೇಂದ್ರ ಮಂತ್ರಿಯಾಗಿದ್ದಾರೆ. 1996ರಲ್ಲಿ ವಿಶ್ವಕಪ್ ಗೆದ್ದ ನಂತರ "ಒಂದು ವಿಶ್ವಕಪ್ ಗೆಲ್ಲಲು ಎರಡು ದಶಕ ಕ್ರಿಕೆಟ್ ಆಡಿದ್ದೇನೆ" ಎಂದಿದ್ದರು ಅರ್ಜುನ್ ರಣತುಂಗ. ಐದಾರು ದಶಕಗಳ ಕಾಲ ಒಂದೇ ಪಕ್ಷದಲ್ಲಿ ದುಡಿದಿದ್ದರಿಂದ ವಾಜಪೇಯಿ ಪ್ರಧಾನ ಮಂತ್ರಿಯಾದರು.

"ರಾಜನಾಗುವ ಸಾಮರ್ಥ್ಯವಿದ್ದೂ ರಾಜನಾಗಲು ಸಾಧ್ಯವಾಗದಿದ್ದರೆ ಅದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ" ಎಂದಿದ್ದರು ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗುವ ಮುಂಚೆ.
ಬಂಗಾರಪ್ಪನವರ ನೋವು ಅರ್ಥವಾಗುವಂತದ್ದೇ. ಸಾಮರ್ಥ್ಯವಿದ್ದರೂ ಅವರಿಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಿಲ್ಲವೆಂದು ಅವರು 1980ರ ದಶಕದಲ್ಲಿ ಪ್ರಥಮ ಬಾರಿ ಕಾಂಗ್ರೆಸ್ ತೊರೆದರು.
ನಂತರ ಪಕ್ಷ ತೊರೆಯುವುದೇ ರೂಢಿ ಮಾಡಿಕೊಂಡರು. ಲಕ್ ಎನ್ನುವುದು ಇರದೇ ಎಲ್ಲರಿಗೂ ಅವರವರ ಯೋಗ್ಯತೆಗೆ ತಕ್ಕುದಾದ ಸ್ಥಾನಮಾನ ಸಿಗುವಂತಿದ್ದರೆ ಮೇಲೇರಿದವರಲ್ಲಿ ಬಹುತೇಕರು ಕೆಳಗಿರುತ್ತಿದ್ದರು. ಕೆಳಗಿರುವವರಲ್ಲಿ ಬಹುತೇಕರು ಮೇಲಿರುತ್ತಿದ್ದರು. ಇದು ಶೇಕ್ಸ್ ಪಿಯರ್ ನ ನಾಟಕವೊಂದರಲ್ಲಿ ಬರುವ ಒಳಾರ್ಥ. ಬದುಕು ಗಣಿತವಲ್ಲ. ರಾಜಕೀಯ ಖಂಡಿತಾ ಗಣಿತವಲ್ಲ. ಇಲ್ಲಿ ಏನೂ ಆಗಬಹುದು. ಅಯೋಗ್ಯ ಮುಖ್ಯಮಂತ್ರಿಯಾಗಬಹುದು. ರಾಜನಾಗುವ ಸಾಮರ್ಥ್ಯ ಇರುವಾತ ಎಂ.ಎಲ್.ಎ ಕೂಡಾ ಆಗದಿರಬಹುದು. ಅವುಗಳಿಗೆ ಪಕ್ಷಾಂತರ ಉತ್ತರವಲ್ಲ. ರಾಜಕೀಯ ವಿಡಂಬನೆಗಳಿಗೆ ಹತಾಶರಾದರೆ ಪಕ್ಷ ಬದಲಾಯಿಸುತ್ತಾ ಹೊರಟರೆ ತಾವೇ ಗೇಲಿಯ ವಸ್ತುಗಳಾಗಬೇಕಾಗುತ್ತದೆ. " ಏಳು ಬಾರಿ ಪಕ್ಷ ಬದಲಾಯಿಸಿದ್ದಾರೆ ಬಂಗಾರಪ್ಪ. ಮದುಮಗಳು ಸಪ್ತಪದಿಯನ್ನು ಏಳು ಬಾರಿ ಬೇರೆ ಬೇರೆ ಗಂಡಸಿನೊಂದಿಗೆ ತುಳಿದಂತೆ" ಎಂದಿದ್ದರು ಮೋದಿ. ಈಗ ಒಂಭತ್ತನೇ ಬಾರಿ ಪಕ್ಷ ಬದಲಾಯಿಸಿದ್ದಾರೆ ಬಂಗಾರಪ್ಪ. ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೋ...!?

ಆದಿತ್ಯ ಭಟ್

6 comments:

Anonymous said...

true fact which was not known from all.. thks adhi

Anonymous said...

olleya lekhana adi...vishaya bahala janarige gottiralilla!!

Anonymous said...

olleya lekhana adi....vishaya bahala janarige gottiralilla!!

Anonymous said...

olleya lekhana kottiddakke dhanyavada adi.....

Anonymous said...

ಲೇಖನ ಚೆನ್ನಾಗಿದೆ ಮತ್ತು ರಾಜ್ಯದ ತತ್ವ ರಹಿತ ರಾಜಕಾರಣಿಗಳ ಇತಿಹಾಸ ಓದಿದಂತಾಯಿತು. ಆದರೆ ಬಂಗಾರಪ್ಪ ಪಕ್ಶ ಬದಲಾಯಿಸುವ ಮರ್ಕಟ ಬುದ್ಡಿ ತೋರಿಸಿದರೂ ಕೂಡ ಭ್ರಫ಼್ಟಾಚಾರ, ಭೂಕಳ್ಳತನ, ಲಜ್ಜಗೇಡಿತನ, ಕುರ್ಚಿಗೆ ಅಂಟಿಕೊಂಡ ಸರ್ವಾದಿಕಾರಿ ಬಿ ಎಸ್. ಯಡ್ಯೂರಪ್ಪನಿಗೆ ಹೋಲಿಸುವಂತಿಲ್ಲ. ಯಾಕೆಂದರೆ, ಯಡ್ಯೂರಪ್ಪನ ತರದ ರಾಜಕಾರಣಿ ರಾಜ್ಯಕ್ಕೆ ನ ಭೂತೋ ನ ಭವಿಫ಼್ಯತಿ. ಫಕೀರ್ ಮುಹಮ್ಮದ್ ಕಟ್ಪಾಡಿ.

Anonymous said...

lekhana chennagide, but y compare this man, with the great shakespeare? well, keep it up and keep writing!!

Post a Comment