ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹಾಸನ ಜಿಲ್ಲಾ ಪಂಚಾಯತಿಯ 40 ಕ್ಷೇತ್ರಗಳಿಗೆ ಹಾಗೂ ತಾಲ್ಲೂಕು ಪಂಚಾಯ್ತಿಗಳ 150 ಕ್ಷೇತ್ರಗಳಿಗೆ ದಿನಾಂಕ 31-12-2010ರಂದು ಜಿಲ್ಲೆಯಲ್ಲಿ ಸಾರ್ವತ್ರಿಕ ಚುನಾವಣೆ ಜರುಗಲಿದೆ. ಜಿಲ್ಲಾ ಪಂಚಾಯ್ತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳು ಮತ್ತು ಮೀಸಲಿರಿಸಿದ ಪ್ರವರ್ಗ ಮತ್ತು ಸ್ಥಾನಗಳ ವಿವರ ಮಾಹಿತಿ ಕೆಳಕಂಡಂತಿದೆ. ಆಲೂರು(ಸಾಮಾನ್ಯ-ಮಹಿಳೆ), ಮಗ್ಗೆ(ಅನುಸೂಚಿತ ಜಾತಿ), ದೊಡ್ಡಮಗ್ಗೆ(ಹಿಂದುಳಿದ ವರ್ಗ ಬಿ-ಮಹಿಳೆ), ಹೊನ್ನವಳ್ಳಿ(ಹಿಂದುಳಿದ ವರ್ಗ-ಎ), ಕೊಣನೂರು(ಸಾಮಾನ್ಯ ಮಹಿಳೆ), ಮಲ್ಲಿಪಟ್ಟಣ (ಅನುಸೂಚಿತ ಜಾತಿ-ಮಹಿಳೆ), ರಾಮನಾಥಪುರ(ಹಿಂದುಳಿದ ವರ್ಗ ಎ- ಮಹಿಳೆ), ಕಣಕಟ್ಟೆ(ಅನುಸೂಚಿತ ಪಂಗಡ ಮಹಿಳೆ), ಬಾಣಾವರ(ಸಾಮಾನ್ಯ ಮಹಿಳೆ), ಅಗ್ಗುಂದ(ಅನುಸೂಚಿತ ಜಾತಿ), ಹಾರನಹಳ್ಳಿ (ಸಾಮಾನ್ಯ), ಗಂಡಸಿ(ಸಾಮಾನ್ಯ ಮಹಿಳೆ),ಬಾಗೇಶಪುರ(ಹಿಂದುಳಿದ ವರ್ಗ ಎ), ಜಾವಗಲ್(ಹಿಂದುಳಿದ ವರ್ಗ ಎ), ಅಡಗೂರು(ಹಿಂದುಳಿದ ವರ್ಗ ಎ), ಅರೇಹಳ್ಳಿ(ಸಾಮಾನ್ಯ), ಹೆಬ್ಬಾಳು(ಸಾಮಾನ್ಯ ಮಹಿಳೆ), ಕೋಗಿಲಮನೆ(ಸಾಮಾನ್ಯ), ನಾಗೇನಹಳ್ಳಿ(ಅನುಸೂಚಿತ ಜಾತಿ-ಮಹಿಳೆ), ಬಾಗೂರು(ಅನುಸೂಚಿತ ಜಾತಿ), ಡಿ.ಕಾಳೇನಹಳ್ಳಿ(ಸಾಮಾನ್ಯ ಮಹಿಳೆ), ದಂಡಿಗನಹಳ್ಳಿ(ಹಿಂದುಳಿದ ವರ್ಗ ಎ ಮಹಿಳೆ), ಗೌಡಗೆರೆ (ಸಾಮಾನ್ಯ), ಹಿರೀಸಾವೆ(ಸಾಮಾನ್ಯ ಮಹಿಳೆ), ನುಗ್ಗೇಹಳ್ಳಿ(ಸಾಮಾನ್ಯ), ಶ್ರವಣಬೆಳಗೊಳ ಕ್ಷೇತ್ರ ಸಾಮಾನ್ಯ ಪ್ರವರ್ಗಕ್ಕೆ ಸೇರಿದೆ.

ಭೂವನಹಳ್ಳಿ(ಹಿಂದುಳಿದ ವರ್ಗ ಬಿ), ದುದ್ದ(ಸಾಮಾನ್ಯ), ಕಂದಲಿ(ಸಾಮಾನ್ಯ ಮಹಿಳೆ), ಕಟ್ಟಾಯ (ಅನುಸೂಚಿತ ಜಾತಿ)., ಮೊಸಳೆ ಹೊಸಹಳ್ಳಿ(ಹಿಂದುಳಿದ ವರ್ಗ ಎ ಮಹಿಳೆ), ಸಾಲಗಾಮೆ(ಸಾಮಾನ್ಯ), ಶಾಂತಿಗ್ರಾಮ(ಸಾಮಾನ್ಯ ಮಹಿಳೆ), ಹಳೆಕೋಟೆ(ಸಾಮಾನ್ಯ ಮಹಿಳೆ), ಹಳ್ಳಿಮೈಸೂರು(ಅನುಸೂಚಿತ ಜಾತಿ ಮಹಿಳೆ), ಮೂಡಲಹಿಪ್ಪೆ(ಸಾಮಾನ್ಯ), ನಿಡುವಣಿ(ಹಿಂದುಳಿದ ವರ್ಗ ಎ ಮಹಿಳೆ), ಬೆಳಗೋಡು (ಹಿಂದುಳಿದ ವರ್ಗ ಎ ಮಹಿಳೆ), ಹಾನುಬಾಳು(ಅನುಸೂಚಿತ ಜಾತಿ-ಮಹಿಳೆ) ಮತ್ತು ಯಸಳೂರು ಕ್ಷೇತ್ರ ಸಾಮಾನ್ಯ ಪ್ರವರ್ಗಕ್ಕೆ ಸೇರಿದೆ.
ಒಟ್ಟಾರೆ 40 ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ 10 ಸಾಮಾನ್ಯ, 10 ಸಾಮಾನ್ಯ ಮಹಿಳೆ, 4 ಅನುಸೂಚಿತ ಜಾತಿ, 3 ಅನುಸೂಚಿತ ಜಾತಿ-ಮಹಿಳೆ, 2 ಅನುಸೂಚಿತ ಪಂಗಡ-ಮಹಿಳೆ, 4 ಹಿಂದುಳಿದ ವರ್ಗ 'ಎ', 5 ಹಿಂದುಳಿದ ವರ್ಗ 'ಎ' ಮಹಿಳೆ, 1 ಹಿಂದುಳಿದ ವರ್ಗ 'ಬಿ'-ಮತ್ತು 1 ಹಿಂದುಳಿದ ವರ್ಗ 'ಬಿ'-ಮಹಿಳಾ ಕ್ಷೇತ್ರಗಳಾಗಿವೆ.
ಸಕರ್ಾರದ ವಿನೂತನವಾದ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯ ಅನುಷ್ಠಾನದಡಿ 1987ರಲ್ಲಿ ಪ್ರಥಮ ಜಿಲ್ಲಾ ಪಂಚಾಯತಿ(ಅಂದು ಜಿಲ್ಲಾ ಪರಿಷತ್) ಚುನಾವಣೆ ಜರುಗಿತು. ಜಿಲ್ಲೆಯಲ್ಲಿ ಅಂದು 37 ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿದ್ದವು. ಪ್ರಥಮ ಚುನಾವಣೆಯಲ್ಲಿ ಆಯ್ಕೆಗೊಂಡ ಸದಸ್ಯರ ವಿವರ ಕೆಳಕಂಡಂತಿದೆ.
ಹೆಚ್.ಪಿ.ಬಸಪ್ಪ, ಸಗನಯ್ಯ, ಹೆಚ್.ಜಿ.ಶೆಟ್ಟಿಗೌಡ, ಜಿ.ಟಿ. ಕೃಷ್ಣಮೂರ್ತಿ, ಬೈರೇಗೌಡ, ತಾರಾ ಎ. ಮಂಜು, ಬಿ.ಹೆಚ್.ಹರೀಶ್, ಗುಣಾಂಬ ಶಿವಳ್ಳಿ. ಬಿ.ಹೆಚ್.ರಾಜು, ರಾಜಶೇಖರ್, ಜಿ.ಎಸ್.ಚನ್ನಬಸಪ್ಪ, ಎಂ.ರಾಜೇಗೌಡ, ಗೌರಮ್ಮ, ಕೋಂ ರಾಮಚಂದ್ರ, ಪಿ.ಎಫ್.ಸಲ್ಡಾನಾ, ವೈ.ಎನ್.ರುದ್ರೇಶಗೌಡ, ಮರಿಯಪ್ಪ, ಎ.ಎಸ್.ನಾಗರಾಜು, ಬಿ.ಹೆಚ್.ನಂಜೇಶಗೌಡರು ಆಯ್ಕೆಯಾಗಿದ್ದರು.
ಹೇಮಾವತಿ, ಹೆಚ್.ಸಿ.ಕಾಳೆಗೌಡ, ಸಿ.ಎಸ್.ಪುಟ್ಟೇಗೌಡ, ಜಯಮ್ಮ, ನಂಜುಂಡೇಗೌಡ, ಕೆಂಚನಹಳ್ಳಿ ರಾಜೇಗೌಡ, ಕಾರ್ಲೆ ದೇವರಾಜು, ಶಂಕರಮ್ಮ, ಹೆಚ್.ಡಿ.ರೇವಣ್ಣ, ಮುನಿಸ್ವಾಮಿ, ಹೆಚ್.ಎಸ್.ಮಾಳಿಗೇಗೌಡ, ಎಂ.ಬಿ.ಕಾಳಿಪ್ರಸಾದ್, ಕಾಂತರಾಜು, ಗೌರಮ್ಮ ಕೋಂ ವೆಂಕಟರಮಣೇಗೌಡ, ವಜಾಕ್ಷಮ್ಮ, ಬಾಲಕೃಷ್ಣಮೂರ್ತಿ, ಪಾರ್ವತಮ್ಮ, ಲಚ್ಚಾನಾಯ್ಕ ಹಾಗೂ ಪಟೇಲ್ ಶಿವರಾಂರವರು ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದರು.

ಸಂಗ್ರಹ :ರಾಮೇಗೌಡ
ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಹಾಸನ.

0 comments:

Post a Comment