ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಗ್ರ ಲೇಖನ
ರಾಹುಲ್ ಗಾಂಧೀ ಭಾರತದ ಪುಣ್ಯಭೂಮಿಯ ಮಗ ಅಲ್ಲ ಎಂಬುದು ಸ್ಪಷ್ಟ. ಇದಕ್ಕೆ ರಾಹುಲ್ ಗಾಂಧಿ ಅವರ ಕೀಳುಮಟ್ಟದ ಹೇಳಿಕೆಯೇ ನಿದರ್ಶನ. ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ತನ್ನ ವ್ಯಕ್ತಿತ್ವ ಇಷ್ಟೇ ಎಂಬುದನ್ನು ಇಡೀ ವಿಶ್ವಕ್ಕೆ ಸಾದರಪಡಿಸಿದಂತಾಗಿದೆ. ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನೂ ಬೀದಿಪಾಲು ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷ ಎನಿಸಿಕೊಂಡ ಕಾಂಗ್ರೆಸ್ ಬಹುಸಂಖ್ಯಾತ ಹಿಂದೂಗಳನ್ನು ತುಚ್ಛೀಕರಿಸಿ ಮಾತನಾಡಿದ್ದು ನಿಜಕ್ಕೂ ಆ ಪಕ್ಷದ ವರ್ಚಸ್ಸಿಗೆ ಹಿಡಿದ ಕೈ ಗನ್ನಡಿ .
ಕಾಂಗ್ರೆಸ್ ಇಷ್ಟೊಂದು ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದು ಪ್ರಜ್ಞಾವಂತ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದು ನಿಜಕ್ಕೂ ಖಂಡನಾರ್ಹ.
" ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೋಯ್ಬಾ ಚಟುವಟಿಕೆಗಳಿಂತಲೂ ಭಾರತಕ್ಕೆ ತೀವ್ರವಾದಿ ಹಿಂದೂ ಸಂಘಟನೆಗಳ ಬೆಳವಣಿಗೆಯಿಂದ ಭಾರೀ ಬೆದರಿಕೆ ಎದುರಾಗಿದೆ " ಎಂದು ರಾಹುಲ್ ಗಾಂಧಿ ಅಮೆರಿಕಾದ ರಾಯಭಾರಿ ತಿಮೋತಿ ರೋಮರ್ ಅವರಲ್ಲಿ ತಿಳಿಸಿದ್ದಾಗಿ ವಿಕಿಲೀಕ್ಸ್ ಬಹಿರಂಗ ಪಡಿಸಿದೆ. ರಾಹುಲ್ ಗಾಂಧೀ ಈ ಹೇಳಿಕೆಯನ್ನು ಜುಲೈ 20, 2009ರಂದು ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಗೌರವಾರ್ಥ ಪ್ರಧಾನಿ ಮನಮೋಹನ್ ಸಿಂಗ್ ತನ್ನ ನಿವಾಸದಲ್ಲಿ ಏರ್ಪಸಿದ ಔತಣ ಕೂಟದಲ್ಲಿ ನಡೆದ ಮಾತುಕತೆ ಸಂದರ್ಭ ಈ ಮಾತನ್ನು ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರಿಗೆ ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಂ ಸಂಘಟನೆಗಳ ಭಯೋತ್ಪಾದನೆ "ಕ್ಷುಲ್ಲಕ" ಎಂದೆನಿಸಿವೆಯೇ? . ದೇಶದಾದ್ಯಂತ ನಡೆದಿರುವ ಭಯೋತ್ಪಾದನಾ ಧಾಳಿಗಳನ್ನು ಇದೇ ಹಿಂದೂ ಸಂಘಟನೆಗಳು ನಡೆಸಿದ್ದೆಂಬ ಗುಮಾನಿ ಇದೇ ರಾಹುಲ್ ಗಾಂಧಿಯವರಿಗೆ ಇದೆಯೇ? ಒಂದೊಮ್ಮೆ ನವದೆಹಲಿಯಲ್ಲಿ ನಡೆದ ಧಾಳಿ, ಮುಂಬೈ ಧಾಳಿಗಳನ್ನು ನೆನಪಿಸಿಕೊಂಡು ಈ ಧಾಳಿಗೆ ಯಾವ ಸಂಘಟನೆಗಳ ಕೈವಾಡಗಳಿವೆ. ಇದಕ್ಕೆ ನೇರ ಸೂತ್ರದಾರರು ಯಾರು ಎಂಬುದನ್ನು ಇದೇ ಕಾಂಗ್ರೆಸ್ ನಾಯಕ ರಾಹುಲ್ ತನ್ನ ನಿಷ್ಕಲ್ಮಶ ಮನಸ್ಸಿನಿಂದ ಅವಲೋಕಿಸ ಬೇಕಾಗಿದೆ.

ನಿರಂತರವಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತೆ ನಡೆಯುತ್ತಿರುವ ಮುಸಲ್ಮಾನ ಸಂಘಟನೆಗಳು ಮಾಡುತ್ತಿರುವ ಅನಾಚಾರಗಳನ್ನು ಇದೇ ರಾಹುಲ್ ಏನೆಂದು ಬಣ್ಣಿಸುತ್ತಾರೆ?, ಲೌ ಜಿಹಾದ್ ನಿಂದ ತೊಡಗಿ, ಹೆಜ್ಜೆ ಹೆಜ್ಜೆಗೆ ನಡೆಯುವ ಅನಾಚಾರಗಳ ತನಕ, ದೇಶದ ಮೂಲೆಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುವ ಧಾಳಿಗಳಿಂದ ತೊಡಗಿ, ರಾಜಧಾನಿಯೂ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನಡೆದ ಧಾಳಿಗಳ ತನಕ ಅವಲೋಕಿಸಿದರೆ ನೈಜತೆ ಏನೆಂಬುದು ರಾಹುಲ್ ಅವರಿಗೆ ತಿಳಿಯಬಹುದು. ಪ್ರಜ್ಞಾವಂತ ಹಿಂದೂಗಳ ಧಾರ್ಮಿಕ ಭಾವನೆಗಳಲ್ಲೊಂದಾದ ಗೋವನ್ನು ಅಮಾನುಷವಾಗಿ ಹತ್ಯೆಗೈಯುವ ಮುಸಲ್ಮಾನ ಸಮುದಾಯದವರನ್ನು ಇದೇ ರಾಹುಲ್ ಏನೆಂದು ಕರೆಯುತ್ತಾರೆ? ಇವರನ್ನು ಯಾವ ಸಂಘಟನೆ, ಅಥವಾ ಯಾವ ರೀತಿಯಲ್ಲಿ ಚಿತ್ರಿಸಲು ರಾಹುಲ್ ತಯಾರಿದ್ದಾರೆ?

ಮಾತು ಆಡಿದರೆ ಹೋಯಿತು... ಮುತ್ತು ಒಡೆದರೆ ಹೋಯಿತು ಎಂಬ ಮಾತೊಂದಿದೆ. ವಿದೇಶಿಯರಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಎತ್ತಿತೋರಿಸುವ ಕಾರ್ಯವನ್ನು ರಾಹುಲ್ ಮಾಡಿದ್ದಾರೆ. ಒಂದು ಜವಾಬ್ದಾರಿಯುತ ಪಕ್ಷದಲ್ಲಿದ್ದುಕೊಂಡು, ದೇಶವನ್ನು ಆಳುತ್ತಿರುವ ರಾಷ್ಟ್ರೀಯ ಪಕ್ಷದ ಯುವ ನಾಯಕನಾಗಿ ಈ ಮಾತನ್ನು ಹೇಳಿದ್ದು ಉಚಿತವಲ್ಲ. ಅಷ್ಟೂ ಅಲ್ಲದೆ ಭಾರತೀಯನಾಗಿ ಈ ಮಾತನ್ನು ಹೇಳಿದ್ದು ಅಕ್ಷ್ಯಮ್ಯ ಅಪರಾಧ. ಅಲ್ಪಸಂಖ್ಯಾತ(ಪ್ರಸ್ತುತ ಬಹುಸಂಖ್ಯಾತರಾಗುತ್ತಿರುವ) ಮುಸಲ್ಮಾನರನ್ನು ಓಲೈಸುವ, ಅವರ ಓಟ್ ಬ್ಯಾಂಕ್ ಗೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಈ ಮೊದಲಿನಿಂದಲೂ ಮಾಡುತ್ತಾ ಬಂದಿರುವ ಚಾಳಿಯನ್ನು ರಾಹುಲ್ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೆ ಹಿಂದುಗಳನ್ನು, ಹಿಂದೂ ದೇಶವನ್ನೇ ಹೀಯಾಳಿಸುವ ಮೂಲಕ ತಾನೊಬ್ಬ "ಹೀರೋ" ಎಂದು ಬಿಂಬಿಸಿಕೊಳ್ಳುವ ತೀಟೆ ರಾಹುಲ್ ಗಾಂಧಿಯದ್ದು ಎಂದರೆ ತಪ್ಪಾಗಲಾರದು.


ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ದೇಶದ ಮಾನ ಹರಾಜು ಮಾಡಲು ಹೊರಟಿದ್ದಾರೆ. ತನ್ನ ತಟ್ಟೆಯಲ್ಲಿದ್ದ ಹೆಗ್ಗಣವನ್ನು ಮುಚ್ಚಿಟ್ಟು ಉಳಿದವರ ತಟ್ಟೆಯಲ್ಲಿರುವ ಸೊಳ್ಳೆಯನ್ನು ದೊಡ್ಡ ಸಂಗತಿ ಎಂಬಂತೆ ಮಾಡಲು ಹೊರಟಿರುವುದು ಸ್ಪಷ್ಟ. ಸ್ವತ: ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮುಂದೊಂದು ದಿನ "ಪ್ರಧಾನಿ" ಹುದ್ದೆಯ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ರಾಹುಲ್ ಗಾಂಧಿಯವರಿಗೆ ತನ್ನ ಮಾತಿನ ಬಗ್ಗೆ ಕನಿಷ್ಟಜ್ಞಾನವೂ ಇದ್ದಂತೆ ಕಾಣುತ್ತಿಲ್ಲ. ರಾಜತಾಂತ್ರಿಕ , ವ್ಯವಹಾರಿಕ ಜ್ಞಾನದ ಕೊರತೆ ರಾಹುಲ್ ಅವರಿಗೆ ಇದೆ ಎಂಬುದು ಅವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ, ರಾಹುಲ್ ಗಾಂಧಿಯವರಿಗೆ ಮತೀಯ ರಾಜಕಾರಣದ ಒಲವು ಎಷ್ಟಿದೆ ಎಂಬುದಕ್ಕೆ ರಾಹುಲ್ ಹಿಂದೂಗಳ ಮೇಲೆ ಮಾಡಿರುವ ಘೋರ ಆರೋಪವೇ ಪ್ರಮುಖ ಸಾಕ್ಷಿಯಾಗಿದೆ. ಜಾತಿ,ಮತ,ಧರ್ಮಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ. ತನ್ಮೂಲಕ ಚುನಾವಣೆಯಲ್ಲಿ ಮುಸಲ್ಮಾನ ಸಮುದಾಯವನ್ನು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಬಳಸುತ್ತಿರುವುದು ಘೋರ ದುರಂತ.

ಹರೀಶ್ ಕೆ.ಆದೂರು

8 comments:

Anonymous said...

ರಾಹುಲ್ ಗಾಂಧಿಯವರಿಗೆ ಹೆಂಡತಿ ಹಾಗೂ ಪ್ರೇಯಸಿಯ ನಡುವಿನ ವ್ಯತ್ಯಾಸ ಗೊತ್ತಿಲ್ಲ.ಎಲಸು ಬುದ್ದಿ... - ನಾ.ದಾ.ಶೆಟ್ಟಿ, ಮಂಗಳೂರು.

Anonymous said...

ರಾಹುಲ್ ಗಾಂಧಿಯವರ ಹೇಳಿಕೆಗೆ ಧಿಕ್ಕಾರ. ಸಮಸ್ತ ಹಿಂದೂ ಬಾಂಧವರಿಗೆ ಜಯವಾಗಲಿ.ಉತ್ತಮಲೇಖನ..

Anonymous said...

ರಾಹುಲ್ ಗಾಂಧಿಯವರ ಹೇಳಿಕೆಗೆ ಧಿಕ್ಕಾರ. ಸಮಸ್ತ ಹಿಂದೂ ಬಾಂಧವರಿಗೆ ಜಯವಾಗಲಿ.ಉತ್ತಮಲೇಖನ..

Anonymous said...

ಅಧಿಕಾರದ ಅಮಲಿನಲ್ಲಿ ಹಿಂದೂಗಳ ಭಾವನೆಗಳನ್ನು ತುಳಿದದ್ದು ಅಹಂಕಾರ. ಸಮಸ್ತ ಹಿಂದೂಗಳ ಉಸಿರು, ಮನಸ್ಸು ನೋಯಿಸಿದ್ದೀರಿ. ಇದು ಸರಿಯಲ್ಲ. - ಎಚ್ಕೆ ನಯನಾಡು.

BENAKA..ADKATHIMAR said...

ಇನ್ನಾದರೂ ಪ್ರಜ್ನಾವಂತರು ಎಚ್ಹತ್ತು ತಕ್ಕ ಶಾಸ್ತ್ತಿಮಾಡಬೇಕಾಗಿದೆ...ಆತನ ಹುಚ್ಹು ಬುದ್ದಿ ಏನೆಲ್ಲಾ ಅವಾಂತರ ಮಾಡಬಹುದು ಎಂದು ಯೋಚಿಸುವುದು ಕೂಡಾ ಕಸ್ಟ.....S.N.Bhat..Adkathimar..

Anonymous said...

ಈ ಹೇಳಿಕೆಯಿಂದ ಈತ ತಾನು ಭಾರತದ ಪ್ರಧಾನಿ ಹುದ್ದೆಗೆ ಅನರ್ಹ ವ್ಯಕ್ತಿ ಎಂದು ಸಾಬೀತು ಮಾಡಿದ್ದಾನೆ.

Anonymous said...

bekaa bitti beladava rahula.....rajakeeya nogakke eledu kattidare haayadiruttaneye .... lagaamina agatyavide...

aditya said...

good article.
you have upheld media ethics these kind of non sense by rahul should not be tolerated by media.your writing is an exposure of rahul`s real face. hats of to harish.

Post a Comment