ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ನಗರದ ಆಕರ್ಷಣೀಯ ಉದ್ಯಾನವಾದ ಕದ್ರಿ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಯಾತ್ರಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಉದ್ಯಾನವನದ ಒಳಗೆ ಫಲಕಗಳನ್ನು ಹಾಕಿಸುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೋಟಗಾರಿಕಾ ಇಲಾಖಾಧಿಕಾರಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳು ಕದ್ರಿ ಉದ್ಯಾನವನದ ಸ್ಥಳ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಹೆದ್ದಾರಿ ಬದಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಆವರಣ ಗೋಡೆಯನ್ನು ಕಟ್ಟುತ್ತಿದ್ದು, ಈ ಕಾಮಗಾರಿಯನ್ನು ತುರ್ತಾಗಿ ಪೂರೈಸಲು ಸಂಬಂಧಪಟ್ಟ ಇಂಜಿನಿಯರ್ ಗೆ ಸೂಚಿಸಿದರು. ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಉದ್ಯಾನವನದಲ್ಲಿ ಪುಟಾಣಿ ರೈಲನ್ನು ಇನ್ನು 20 ದಿನಗಳೊಳಗೆ ಚಾಲನೆಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹೇಳಿದರು.

ರೈಲಿನ ಶೆಡ್ ಹಾಗೂ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಟೆಂಡರ್ ದಾರರಿಗೆ ಷರತ್ತಿನೊಂದಿಗೆ ವಹಿಸಲು ಸೂಚಿಸಿದೆ. ಪಾರ್ಕ್ ಹೈಮಾಸ್ಟ್ ಲೈಟನ್ನು ಮತ್ತು ಇತರ ವಿದ್ಯುತ್ ಜೋಡಣೆಗಳನ್ನು ಕೂಡಲೇ ಸರಿಪಡಿಸುವಂತೆ ಪಾಲಿಕೆ ಇಂಜಿನಿಯರ್ ಗೆ ಸೂಚಿಸಿದರು.

ಉದ್ಯಾನವನದ ಅಭಿವೃದ್ಧಿಗಿರುವ ತಾಂತ್ರಿಕ ತೊಂದರೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ನಿದರ್ೇಶಕರು, ತೋಟಗಾರಿಕಾ ಇಲಾಖೆ ಇವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಉದ್ಯಾನವನದ ಅಭಿವೃದ್ಧಿಗೆ 16 ಕೋಟಿ ರೂ. ಯೋಜನೆಯ ಪ್ರಸ್ತಾವವಿದ್ದು, ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿಗಳಿಗೆ ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.

1 comments:

Rakesh Hosabettu said...

WE the members of Consumers' forum, Surathkal have been striving hard to eradicate plastic in our district since half a decade. The former DC Mr.Maheshwar rao had taken the issue very seriously and worked on it. But before the implementing a law, he ws transfrd. The incoming DC Mr.Ponnuraj didnt show interest on this issue. and now Mr.Sobodh Yadav has taken the right step towards our dream. This is encouragable.. "Plastic alisi, Parisara Ulisi"

Post a Comment