ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಡಿಸೆಂಬರ್ 12 ಅನ್ನು ವಿಶ್ವ ಆಯುರ್ವೇದ ದಿನ ಎಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ. ರಾಮದಾಸ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ನಾಲ್ಕನೇ ವಿಶ್ವ ಆಯುರ್ವೇದ ಕಾಂಗ್ರೆಸ್ 2010 ಅತ್ಯಂತ ಯಶ್ವಸಿಯಾಗಿದ್ದು ಒಟ್ಟಾರೆ ನಾಲ್ಕು ಸಾವಿರ ವೈದ್ಯರು, ತಜ್ಞರು ಒಳಗೊಂಡ ಪ್ರತಿನಿಧಿಗಳು ಪಾಲ್ಗೊಂಡಿದ್ದು ಅದರಲ್ಲಿ 300 ವಿದೇಶಿ ತಜ್ಞರು ಸೇರಿದ್ದಾರೆ. ಸುಮಾರು 2,145 ವಿಚಾರ ಮಂಡನೆಯಾಗಿದೆ ಈ ಎಲ್ಲಾ ಅಂಶಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಮತ್ತು ಕೇಂದ್ರ ಸಂಯುಕ್ತವಾಗಿ ಸಂಶೋಧನೆಗೆ ಅನುವಾಗುವ ರೀತಿಯಲ್ಲಿ ರಾಜ್ಯದಲ್ಲಿ ಭಾರತೀಯ ಆಯುಷ್ ಪದ್ಧತಿಗಳ ರಾಷ್ಟ್ರೀಯ ಸಂಸ್ಥಾನ ಮತ್ತು ಆಯುರ್ವೇದ ವಿಶ್ವ ವಿದ್ಯಾಲಯಗಳ ಸ್ಥಾಪನೆ ಜೊತೆಗೆ ರಾಜ್ಯಾದ್ಯಂತ ಗಿಡಮೂಲಿಕೆಗಳ ವಿಸ್ತೃತ ಕೃಷಿ, ಔಷಧ ತಯಾರಿಕಾ ಪ್ರದೇಶ ಸ್ಥಾಪನೆ ಮಾಡಲಾಗುವುದು ಎಂದರು.

ಸಮಗ್ರ ಆಯುರ್ವೇದ ನೀತಿ

ಕೃಷಿ , ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಸಾವಯವ ಕೃಷಿ ಮಿಷನ್, ಪಶ್ಷಿಮ ಘಟ್ಟ ಕಾರ್ಯಪಡೆ, ಅರಣ್ಯ ಮತ್ತು ಪರಿಸರ ಇಲಾಖೆ, ಪಶುಸಂಗೋಪನಾ ಇಲಾಖೆ ಈ ಎಲ್ಲಾ ಇಲಾಖೆಗಳು ಜೊತೆಗೂಡಿ ಸಮಗ್ರ ರೀತಿಯ ಆಯುರ್ವೇದ ನೀತಿಯನ್ನು ಮಂಡಿಸುವ ಯೋಜನೆ ಇದೆ ಎಂದು ಸಚಿವರು ತಿಳಿಸಿದರು.

ಗ್ರಾಮೀಣ ಮಟ್ಟದಲ್ಲಿ ಗಿಡಮೂಲಿಕೆಗಳನ್ನು ಕೃಷಿ ಮಾಡಲು ಮುಂದೆ ಬರುವ ಕೃಷಿಕರಿಗೆ ಹೆಚ್ಚಿನ ಉತ್ತೇಜನ ನೀಡುವುದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಗಿಡಮೂಲಿಕೆ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುವುದು. ಮಾತೃ ನರ್ಸರಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ದಾಗಿ ಸ್ಥಾಪಿಸಲಾಗುವುದು ಎಂದರು.

ಆಯ್ದ ಗ್ರಾಮ ಪಂಚಾಯತ್ಗಳನ್ನು ಆಯುಷ್ ಗ್ರಾಮ ಎಂದು ಗುರುತಿಸಿ ಅಲ್ಲಿನ ಪ್ರತಿಯೊಬ್ಬರಿಗೂ ವೈದ್ಯರಾಗಿ ತರಬೇತಿ ನೀಡಿ, ಮಾದರಿ ಗ್ರಾಮವನ್ನಾಗಿ ರೂಪಿಸುವ ಮೂಲಕ ಸುತ್ತಮುತ್ತಲ ಗ್ರಾಮಗಳಿಗೆ ತರಬೇತಿ ನೀಡುವಂತೆ ತಯಾರಿಮಾಡುವ ಗುರಿಯಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಮನೆಮದ್ದು ಪದ್ಧತಿಯನ್ನು ದಾಖಲೀಕರಣ ಮಾಡಲು ಗ್ರಾಮೀಣ ಹಿರಿಯ ಸಂದರ್ಶನ - ಇದರಿಂದ ಈ ಪದ್ಧತಿಗಳನ್ನು ವೈಜ್ಞಾನಿಕವಾಗಿ ಸಂಶೋಧನೆಗೆ ಒಳಪಡಿಸುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಸುಮಾರು 70,000 ವಿವಿಧ ಬಗೆಯ ಗಿಡಮೂಲಿಕೆಗಳು ಇದ್ದು ಅವುಗಳ ಸಂಖ್ಯೆ ಪ್ರಸಕ್ತ 2300 ಕ್ಕೆ ಇಳಿದಿದೆ. ಹಾಗಾಗಿ ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೂ ಸಹ ಹೆಚ್ಚಿನ ಗಮನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಅತ್ಯಂತ ಯಶಸ್ವಿಯಾಗಿ ಜರುಗಿದ ಆಯುರ್ವೇದ ಕ್ರಾಂಗೆಸ್ನಲ್ಲಿ 3 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಪಾಲ್ಗೊಂಡಿದ್ದಲ್ಲದೆ 10,000 ಹೆಚ್ಚು ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಆಯುರ್ವೇದ ಕಾಂಗ್ರೆಸ್ ಮೂಲಕ ಕನರ್ಾಟಕವು ರಾಷ್ಟ್ರದ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶ್ವಸಿಯಾಗಿದೆ ಎಂದು ಸಚಿವರು ತಿಳಿಸಿದರು.

0 comments:

Post a Comment