ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಸ್ವರ್ಣ ನೈರ್ಮಲ್ಯ ಪುರಸ್ಕಾರ ಪಡೆದ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತ್ ಕುರಿತ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸೆಂಟರ್ ಫಾರ್ ಎನ್ವಿರೋನ್ ಮೆಂಟ್ ಎಜ್ಯುಕೇಷನ್ ಎಂಬ ಸಂಸ್ಥೆ ಈ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯಕ್ಕೆ ಮುಂದಡಿಯಿಟ್ಟಿದೆ. ಕಳೆದ 3 ದಿನಗಳಿಂದ ಈ ತಂಡ ಹೊಸಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ತಂಡ ಚಿತ್ರೀಕರಣ ನಡೆಸುತ್ತಿದೆ. ಸಿ.ಇ.ಇ. ಸೌತ್ ರೀಜನಲ್ ಸೆಂಟರ್ ನ ಡೆಪ್ಯುಟಿ ಪ್ರೋಗ್ರಾಂ.ಕೋ ಆರ್ಡಿನೇಟರ್ ಸಂತೋಷ್ ಆರ್ ಸುತಾರ್ ಸಾಕ್ಷ್ಯಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 5ಜನರನ್ನೊಳಗೊಂಡ ತಂಡ ಈ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದೆ.


0 comments:

Post a Comment