ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಇದು ಸ್ವಚ್ಛಂದ ಪರಿಸರ.ಇಲ್ಲಿ ನೀವೇನೇ ಮಾಡಿ ನಿಮ್ಮನ್ನು ಯಾರೂ ಪ್ರಶ್ನಿಸೋದೇ ಇಲ್ಲ... ಕುಡಿದರೂ, ಕೆಡಿಸಿದರೂ ಏನಾದರೂ...ಅಂತಹ ಒಂದು ಜಾಗ ಇಲ್ಲಿದೆ ...ಇದುವೇ ಇಂದಿನ ಸ್ಪೆಷಲ್ ಸ್ಟೋರಿ...\

ಶುಕ್ರವಾರದ ದಿನ. ಗಂಟೆ ಹತ್ತೂವರೆಯಷ್ಟು... ಮೂಡಬಿದಿರೆಯಿಂದ 6ಕಿಲೋಮೀಟರ್ ದೂರದಲ್ಲಿರುವ ಕಡಲಕೆರೆ ನಿಸರ್ಗಧಾಮಕ್ಕೆ ತೆರಳುವ ಮನಸ್ಸಾಯಿತು. ಈ ಕನಸು ತಂಡ ಅತ್ತ ಪಯಣ ಬೆಳೆಸಿತು. ಕಡಲಕೆರೆಯ ಸವಿ ಸವಿಯುತ್ತಾ ಗಿಲ್ಡ ಪೀಟರ್ಸ್ ನಿಸರ್ಗ ಪಥದಲ್ಲಿ ಒಂದಷ್ಟು ನಡೆದಾಡೋಣ ಎಂದು ಮುಂದಡಿಯಿಟ್ಟೆವು. ಅಲ್ಲೇ ಒಂದು ಪುಟ್ಟ ಚೆಂದದ ಸೇತುವೆಯಿದೆ. ಅದನ್ನು ದಾಟಿ ಹೋಗುವ ಮನಸ್ಸಾಯಿತು. ಅಚ್ಚರಿ... ಅದೊಂದು ಯುವಕರ ತಂಡ. ಅಲ್ಲಿ ಬಟ್ಟೆ ಬಿಚ್ಚಿ ಅಮಲು ಪದಾರ್ಥದೊಂದಿಗೆ ಮೋಜು ಮಾಡುವ ತಯಾರಿಯಲ್ಲಿದ್ದರು...!ಛೇ...ಇಲ್ಲಿ ಯಾರೂ ಕೇಳೋರು ಹೇಳೋರು ಇಲ್ಲವೇ ಎಂದು ಒಂದಷ್ಟು ಕಣ್ಣು ಹಾಯಿಸಿದೆವು. ಅಲ್ಲೇ ಮರದ ಮರೆಯಲ್ಲಿ ಜೋಡಿಗಳು ಸ್ವಚ್ಛಂಧವಾಗಿ ವಿಹರಿಸುತ್ತಿದ್ದರು...! ಬಿಟ್ಟರೆ ಯಾವೊಂದು ನರಪಿಳ್ಳೆಯೂ ಅಲ್ಲಿಲ್ಲ. ನಿಸರ್ಗ ಪಥದ ಅಂಚಿನಲ್ಲಿ ಒಂದೆರಡು ಕಡೆಗಳಲ್ಲಿ ಶೌಚಾಲಯವಿದೆ. ಅದರ ಚಿಲಕವನ್ನು ತುಂಡರಿಸಿದ ಶೂರರೂ ಇದ್ದಾರೆ...! ಒಟ್ಟಿನಲ್ಲಿ ಅಲ್ಲಿನ ವ್ಯವಸ್ಥೆ ನೋಡಿದರೆ " ನಿಸರ್ಗ ಧಾಮದಲ್ಲಿ ಭದ್ರತೆಯ ವ್ಯವಸ್ಥೆಯಿಲ್ಲ".

ಬೋಟಿಂಗ್ ಗೆ ಈ ಕಡಲಕೆರೆಯಲ್ಲಿ ವ್ಯವಸ್ಥೆಯಿದೆ. ನೀರಿನಲ್ಲಿ ಬೋಟುಗಳು ಬೋರಲಾಗಿವೆ. ಆದರೆ ಬೋಟಿಂಗ್ ಗೆ ಅಲ್ಲಿ ಯಾರೂ ಹೇಳೋರು ಕೇಳೋರಿಲ್ಲ. ಬೋಟಿಂಗ್ ನಡೆಸಲು ಟಿಕೇಟ್ ವ್ಯವಸ್ಥೆ ಎಂಬ ಒಂದು ಸಣ್ಣ ಕುಟೀರವಿದೆ. ಆದರೆ ಅದರೊಳಗೆ ಒಂದಷ್ಟು ಕುಡಿದು ಬಾಕಿಯಿಟ್ಟ ಬಾಟಲಿಗಳು ಬಿಟ್ಟರೆ ಮನುಷ್ಯರಾರೂ ಇಲ್ಲ. ಈ ನಿಸರ್ಗ ಧಾಮದಲ್ಲಿ ಏನಾದರೊಂದು ಅಹಿತಕರ ಘಟನೆ ನಡೆದರೆ ...
ಬೋಟುಗಳು ನೀರಲ್ಲಿವೆ. ಕೇಳುವ ಮಂದಿಯಿಲ್ಲ. ನಿಸರ್ಗಧಾಮಕ್ಕೆ ಬಂದ ಮಂದಿ ತಾವೇ ಬೋಟಲ್ಲಿ ಕುಳಿತು ವಿಹರಿಸಿದರೂ ಪ್ರಶ್ನಿಸಲು ಇಲ್ಲಿಯಾರೂ ಇಲ್ಲ.ಅವಘಡಗಳು ಸಂಭವಿಸಿದರೆ ಇದಕ್ಕೆ ಹೊಣೆಯಾರು? ಈ ಪ್ರಶ್ನೆಗೆ ಉತ್ತಿರಿಸುವವರು ಯಾರು...? ಸಂಬಂಧ ಪಟ್ಟ ಮಂದಿ ತಕ್ಷಣ ಈ ನಿಸರ್ಗಧಾಮದ ರಕ್ಷಣೆ, ಪೋಷಣೆಗೆ ಮುಂದಾಗಲಿ.
- ನಾಡೋಡಿ.

0 comments:

Post a Comment