ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ಸಾರ್ವಜನಿಕ ರಸ್ತೆ,ಉದ್ಯಾನವನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಮಂದಿರ,ಮಸೀದಿ,ಚರ್ಚಗಳಂತಹ ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡುವಅತ್ಯಂತ ಸೂಕ್ಷ್ಮವಾದ ವಿಚಾರವಾಗಿರುವುದರಿಂದ ಮೊದಲು ಆ ಭಾಗದ ಸಾರ್ವಜನಿಕರು ಹಾಗೂ ಧಾರ್ಮಿಕ ಮುಖಂಡರುಗಳೊಂದಿಗೆ ಚಚರ್ಿಸಿ ಅಭಿಪ್ರಾಯ ಸಂಗ್ರಹಿಸಿ ನಂತರ ತೆರವು ಕಾರ್ಯಾಚರಣೆ ನಡೆಸುವುದಾಗಿ ಸಹಾಯಕ ಆಯುಕ್ತರು ಹಾಗೂ ಮಂಗಳೂರು ಮತ್ತು ಮೂಡಬಿದ್ರೆ ತಾಲೂಕುಗಳನೋಡಲ್ ಅಧಿಕಾರಿ ಪ್ರಭುಲಿಂಗಕವಳಿಕಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.ಅವರು ಡಿಸೆಂಬರ್ 6 ರಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಹಾಜರಿದ್ದ ಮಂಗಳೂರು ಬಿಷಪ್ ಪರವಾಗಿ ಆಗಮಿಸಿದ್ದಫಾದರ್ ವಿಲಿಯಂ ಮಿನೇಜಸ್,ಮುಸ್ಲಿಂ ಸೆಂಟ್ರಲ್ ಕಮಿಟಿಪರವಾಗಿಉಪಸ್ಥಿತರಿದ್ದ ಮಾಜಿ ವಿಧಾನಪರಿಷತ್ ಸದಸ್ಯರಾದ ಹಾಜಿ ಮಹ್ಮದ್ ಮಸೂದ್ ಹಾಗೂ ಇಬ್ರಾಹಿಂ ಕೋಡಿಚಾಲ್ ಹಾಗೂ ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಅವರುಗಳು ಮಾತನಾಡಿ ತಮ್ಮ ಸಮುದಾಯಗಳ ಧಾರ್ಮಿಕ ಕಟ್ಟಡಗಳು ಸಾರ್ವಜನಿಕರಿಗೆ ತೊಂದರೆ ಆಗುವಂತಿದ್ದರೆ ಅವುಗಳನ್ನು ತೆರವುಗೊಳಿಸಲು ಸ್ಥಳೀಯರ ಮನವೊಲಿಸುವುದಾಗಿ ಸಭೆಯಲ್ಲಿ ತಿಳಿಸಿದರು. ಸರಕಾರಿ ಜಾಗದಲ್ಲಿರುವ ಯಾವ ಧಾರ್ಮಿಕ ಕಟ್ಟಡಗಳು ಸಾರ್ವಜನಿಕರಿಗೆ ಅತ್ಯಂತ ತೊಂದರೆದಾಯಕವಾಗಿದೆ ಎಂಬುದನ್ನು ಪಟ್ಟಿ ಮಾಡಿ ತಿಳಿಸುವಂತೆ ಸಹ ಅವರು ಸಹಾಯಕ ಆಯುಕ್ತರಲ್ಲಿ ಮನವಿ ಸಲ್ಲಿಸಿದರು.

ಅನಧಿಕೃತ ಕಟ್ಟಡಗಳಲ್ಲಿ ಕಾಣಿಕೆ ಹುಂಡಿ,ಕಮಾನು,ಅಶ್ವತ್ಥಕಟ್ಟೆ ಮುಂತಾದವುಗಳು ಸೇರಿರುವುದರಿಂದ ಅನಧಿಕೃತ ಕಟ್ಟಡಗಳ ಪಟ್ಟಿ ದೊಡ್ಡದಾಗಿದೆ ಎಂದು ಸಹಾಯಕ ಆಯುಕ್ತರು ಸ್ಪಷ್ಟಪಡಿಸಿ ಸರಕಾರಿ ಜಮೀನಿನಲ್ಲಿ ಇರುವ ಅನಧಿಕೃತ ಕಟ್ಟಡಗಳಿಗೆ ನಿಯಮಾನುಸಾರ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ. ಈ ಸಂಬಂಧ ನೋಟೀಸು ಪಡೆದವರು ಸಮಜಾಯಿಷಿ ನೀಡಬೇಕಾಗಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ರಸ್ತೆ ಅಥವಾ ಯಾವುದೇ ಸಾರ್ವಜನಿಕರಿಗೆ ಅತೀ ತೊಂದರೆ ಇರುವ ಪ್ರಕರಣ ಹೊರತುಸರಕಾರಿ ಜಮೀನಿನಲ್ಲಿಯ ಇತರ ಪ್ರಕರಣಗಳ ತೆರವಿಗೆ ವಿರೋಧ ಇರುವುದಾಗಿ ಹಾಗೂ ತೆರವುಗೊಳಿಸಲೇ ಬೇಕಾದ ಪ್ರಕರಣದಲ್ಲಿ ಆ ಭಾಗದ ಜನರ ಮನವೊಲಿಸಲು ಪ್ರಯತ್ನಿಸುವುದಾಗಿ ಸಭೆಯಲ್ಲಿ ಹಾಜರಿದ್ದ ಎಲ್ಲಾ ಕೋಮಿನವರು ಒಪ್ಪಿಗೆ ಸೂಚಿಸಿದರು.

0 comments:

Post a Comment