ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ನಿಧನರಾಗಿದ್ದಾರೆ. ಅವರಿಗೆ 72ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ನಿಧನ ಹೊಂದಿದ್ದಾರೆ. ಹಲವು ವರುಷಗಳ ಕಾಲ ತರಂಗ ವಾರ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು, ಉತ್ತಮ ಪತ್ರಕರ್ತ ಎನಿಸಿಕೊಂಡಿದ್ದರು. ಸಂತೋಷ್ ಕುಮಾರ್ ಗುಲ್ವಾಡಿ ಅವರ ಅಂತರಂಗ ಬಹಿರಂಗ ಎಂಬ ಸಂಪಾದಕೀಯ ಅಂಕಣ ಜನಮನ್ನಣೆಗೆ ಪಾತ್ರವಾಗಿತ್ತು. ಅನೇಕ ಕೃತಿಗಳನ್ನು ಇವರು ರಚಿಸಿದ್ದರು.ಸಂತೋಷ್ ಕುಮಾರ್ ಗುಲ್ವಾಡಿ ಅವರು ಅನೇಕ ಪ್ರಯೋಗಗಳನ್ನು ಪತ್ರಿಕೆಯಲ್ಲಿ ನಡೆಸಿ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೊಸತನವನ್ನು ತರಂಗ ಪತ್ರಿಕೆಯಲ್ಲಿ ತಂದು ಜನ ಕೊಂಡು ಓದುವಂತೆ ಮಾಡುವಲ್ಲಿ ಗುಲ್ವಾಡಿ ಕೈಚಳಕ ಮರೆಯುವಂತಿಲ್ಲ.
ನುಡಿಸಿರಿ ಪ್ರಶಸ್ತಿ : ತರಂಗ ಸಂಪಾದಕರೆಂದೇ ಗುರುತಿಸಿಕೊಂಡಿದ್ದ ಗುಲ್ವಾಡಿ ಅವರು ನಮ್ಮ ನಡುವಿನ ಹಿರಿಯ ಪತ್ರಕರ್ತ. ಆಳ್ವಾಸ್ ನುಡಿಸಿರಿ 2010 ರ ಪ್ರಶಸ್ತಿ ಅವರಿಗೆ ಸಂದಿತ್ತು. ಇದಲ್ಲದೆ ಅನೇಕ ಸನ್ಮಾನ ಪ್ರಶಸ್ತಿಗಳು ಗುಲ್ವಾಡಿ ಅವರಿಗೆ ಸಂದಿದೆ.ಗುಲ್ವಾಡಿ ಅವರಿಗೆ ಇತ್ತೀಚೆಗೆ ಮಾಧ್ಯಮ ಅಕಾಡೆಮಿ ಜೀವಿತಾವಧಿ ಪ್ರಶಸ್ತಿ ಯೂ ಸಂದಿತ್ತು. ಸಂತೋಷ್ ಕುಮಾರ್ ಗುಲ್ವಾಡಿ ಅವರು ಮಹಾ ಪತ್ರಕರ್ತ ಮಹಾತ್ಮ ಗಾಂಧೀಜಿ ಕೃತಿ, ಶಿಲಾ ಬಾಲಿಕೆ,ನಾನು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕಂಡೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

0 comments:

Post a Comment