ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಘಟನೆ 1
ಆತ ಹೈಸ್ಕೂಲ್ ಮೇಸ್ಟ್ರು. ಕೈತುಂಬಾ ಸಂಬಳ ಬೇರೆ ಬರುತ್ತದೆ. ಆದರೆ ಕಾಲಿಗೆ ಯಾವ ಚಪ್ಪಲಿ ಕೊಂಡರೂ ಆತನಿಗೆ ಆಗುವುದಿಲ್ಲ. ಒಂದೋ ವಾಸನೆ, ಅಥವಾ ಅಲರ್ಜಿ...ಘಟನೆ 2
ಆಕೆ ಕೂಲಿ ನಾಲಿ ಮಾಡಿ ಬದುಕೋ ಹೆಂಗಸು. ಇತ್ತೀಚೆಗೆ ಊರ ಜಾತ್ರೆಯಿಂದ ಒಂದು ಜೊತೆ ಚಪ್ಪಲಿ ಖರೀದಿಸಿದ್ದಳು. ರುಪಾಯಿ 45ಕೊಟ್ಟು. ಒಂದು ವಾರ ಹಾಕಿದ್ದಾಳೋ ಇಲ್ಲವೋ...ವೈದ್ಯರಿಗೆ 80ರುಪಾಯಿ ಸುರಿದಿದ್ದಾಳೆ. ಈಗ ಅವಳ ಕಾಲಲ್ಲಿ ಅಲ್ಲಲ್ಲಿ ತುರಿಕೆಯಿಂದಾದ ದೊಡ್ಡ ದೊಡ್ಡ ಗಾಯಗಳಾಗಿವೆ.

ಇದು ಶಾಲೆಯ ಮೇಸ್ಟ್ರು ಹಾಗೂ ಕೂಲಿ ಹೆಂಗಸೊಬ್ಬಳ ಕಥೆಯಲ್ಲ. ಬಹುತೇಕ ಮಂದಿಗೂ ಇದೇ ರೀತಿ. ಒಳ್ಳೇ ಸೂಟ್ ಪ್ಯಾಂಟ್ ಹಾಕ್ತೀವಿ. ಆದ್ರೆ ಚಪ್ಪಲಿ ಅಥವಾ ಶೂಸ್ ಗೆ ಖರ್ಚುಮಾಡ್ವಾಗ ಒಂದಷ್ಟು ಹಿಂದೆ ಮುಂದೆ ನೋಡೇ ನೋಡ್ತೀವಿ. ಇದು ನಮ್ಮನ್ನೂ ಬಿಟ್ಟಿಲ್ಲ...ಹೌದು ತಾನೆ...
ರಬ್ಬರು, ಪ್ಲಾಸ್ಟಿಕ್ ಅಥವಾ ಚರ್ಮ ಹೀಗೆ ಇವುಗಳನ್ನೆಲ್ಲಾ ಬಳಸಿ ಮಾಡುವ ರಾಸಾಯನಿಕ ಯುಕ್ತ ಚಪ್ಪಲಿ ಹಲವರ ಚರ್ಮಕ್ಕೆ ತೊಂದರೆ ಕೊಡುತ್ತದೆ. ಅನೇಕ ರೀತಿಯ ಚರ್ಮ ರೋಗಗಳಿಗೆ ನಾಂದಿಯಾಗುತ್ತದೆ.

ಈ ಎಲ್ಲಾ ಅಂಶಗಳಿಗೆ ಇನ್ನು ಗುಡ್ ಬೈ ಹೇಳೋ ಕಾಲ ಬಂದಿದೆ. ಇದಕ್ಕೆ ಕೇರಳ ರಾಜ್ಯದ ತ್ರಿಶೂರಿನಲ್ಲಿ ಸೂಕ್ತ ಉತ್ತರ ಸಿಗುವ ಕಾಲ ಕೂಡಿಬಂದಿದೆ. ಇಲ್ಲಿರುವ ಮಲ್ಟಿಕೇರ್ ಸಂಸ್ಥೆ ಇದಕ್ಕೆ ಉತ್ತರ ಹುಡುಕಿದೆ. ಕೆ.ಎಂ.ಜೋಸೆಫ್ ಎಂಬವರು ತಮ್ಮ ಸಂಸ್ಥೆಯಲ್ಲಿ ಪರಿಸರ ಸ್ನೇಹಿ ಪಾದರಕ್ಷೆ ತಯಾರಿಕೆಗೆ ಮುಂದಾಗಿದ್ದಾರೆ. ಇದೀಗ ತಮ್ಮ ಉದ್ಯಮದಲ್ಲಿ ಒಂದಷ್ಟು ನೆಮ್ಮದಿ ಕಂಡುಕೊಂಡಿದ್ದಾರೆ.
ಪಾದರಕ್ಷೆಗೆ ಇವರು ಆಯ್ಕೆ ಮಾಡಿದ್ದು ಅಡಿಕೆ ಹಾಳೆ. ಇದನ್ನು ಉಪಯೋಗಿಸಿ ಪಾದರಕ್ಷೆ ಮಾಡಿದ್ದಾರೆ. ಬಾಳೆ ನಾರಿನ ಪಾದರಕ್ಷೆಯ ರಕ್ಷೆ ರಚಿಸಿದ್ದಾರೆ.100ರು ಗಳಿಂದ 400ರುಪಾಯಿ ತನಕದ ವೈವಿಧ್ಯಮಯ ಹಾಳೆ ಚಪ್ಪಲಿಗಳು ಇವರ ಸಂಸ್ಥೆಯಲ್ಲಿ ರಚನೆಯಾಗುತ್ತಿದೆ. ಹಾಳೆ ತಟ್ಟೆಗೆ ಹಾಳೆ ಬಳಕೆಯಾಗುತ್ತಿದೆ.ಅಡಿಕೆಗೆ ಬೆಲೆ ಕಡಿಮೆಯಾದರೂ ಹಾಳೆಯ ಮೂಲಕವಾದರೂ ರೈತ ಖುಷಿ ಕಾಣಲಿ..ಹೆಚ್ಚು ಹೆಚ್ಚು ಜನ ಹಾಳೆಚಪ್ಪಲಿ ಬಳಸಲಿ.ಇದು ಈ ಕನಸು ಹಾರೈಕೆ...

ವರ್ಷಾ

0 comments:

Post a Comment